ಚಿಕ್ಕಮಗಳೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸಂಸತ್ತಿನಲ್ಲಿ ಹೇಳಿದ ಅವಹೇಳನಕಾರಿ ಹೇಳಿಕೆಯಿಂದ ದೇಶದ ಆತ್ಮಕ್ಕೆ ಚೂರಿ ಇರಿದಂತಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಹೇಳಿದ್ದಾರೆ.
ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿ, ಅಮಿತ್ ಷಾ ಅವರ ಹೇಳಿಕೆಯಿಂದ ಬಿಜೆಪಿ ಹಾಗೂ ಸಂಘ ಪರಿವಾರದ ನಿಜ ಬಣ್ಣ ಬಯಲಾಗಿದೆ. ಗೃಹ ಸಚಿವರಿಗೆ ಬುದ್ಧ, ಬಸವ, ಗಾಂಧಿ, ನೆಹರು, ಅಂಬೇಡ್ಕರ್ ಅವರುಗಳ ಚಿಂತನೆಗಳು ಅವರ ಜೀವನದ ಉದ್ದೇಶಗಳು ಏನೆಂದು ಅವರಿಗೆ ತಿಳಿದಿಲ್ಲ ಎಂದಿದ್ದಾರೆ.
ಅಮಿತ್ ಷಾ ಅವರಿಗೆ ಅಂಬಾನಿ, ಅದಾನಿ, ಗೂಡ್ಸೆ, ಸಾವರ್ಕರ್ ಅವರ ಉದ್ದೇಶಗಳು ಮಾತ್ರ ಚೆನ್ನಾಗಿ ಗೊತ್ತಿರುವುದರಿಂದ ಈ ಹೇಳಿಕೆಯಿಂದ ಆಶ್ಚರ್ಯ ಆಗದಿದ್ದರೂ ಕೂಡ ಸಮಾಜದಲ್ಲಿ ದೊಡ್ಡ ಆತಂಕವನ್ನು ಸಂವಿಧಾನದ ವಿರುದ್ಧ ಹೇಳಿಕೆ ಹಾಗೂ ಸಂವಿಧಾನವನ್ನು ತಿರುಚುವ ಆತಂಕ ಮತ್ತೆ ಕಾಡುತ್ತಿದೆ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರು ಬಿಜೆಪಿ ಸಂಸದನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಬಿಜೆಪಿಯವರ ಆರೋಪವನ್ನು ಬಿಜೆಪಿ ಇಂದು ಜನರ ಎದುರು ನಗೆಪಾಟಲಿಗೆ ತುತ್ತಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ಇಡೀ ದೇಶದಲ್ಲಿ ರಾಹುಲ್ ಗಾಂಧಿಯವರು ಪ್ರೀತಿಯ ಮತ್ತು ಅಹಿಂಸೆ, ಸಹಬಾಳ್ವೆ ಸಂದೇಶವನ್ನು ದೇಶಕ್ಕೆ ಕೊಟ್ಟಿದ್ದಾರೆ. ಈ ಹೇಳಿಕೆಯಿಂದ ಜನರು ಯಾರೂ ಕೂಡ ನಂಬುವುದಿಲ್ಲ ಎಂದಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಟ್ಟಿದೆ. ಇಂದು ರೈತರು, ಹಿಂದುಳಿದ ವರ್ಗದವರು, ದಲಿತರು, ದೀನರು ಸೇರಿದಂತೆ ಎಲ್ಲರಿಗೂ ಸಮಾನತೆಯ ಸಮ ಸಮಾಜವನ್ನು ಕಾಣಲು ಕಾರಣರಾಗಿದ್ದಾರೆ. ಅಂಬೇಡ್ಕರ್ ಅವರ ನೇತೃತ್ವದ ಸಂವಿಧಾನ ಎಂದು ಬಿಜೆಪಿ ಮತ್ತು ಆರ್ಎಸ್ಎಸ್ ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ರಚನಾ ಸಮಿತಿಯಲ್ಲಿ ಹಿಂದೂ ಮಹಾಸಭಾದ ಯಾವ ವ್ಯಕ್ತಿ ಭಾಗವಹಿಸಿರುವುದಿಲ್ಲ ಸಂವಿಧಾನದ ಆಶಯದ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಅದಾನಿಯವರ ವಿಷಯವನ್ನು ಸ್ಥಿತ್ಯಾಂತರ ಮಾಡಲು ಯತ್ನಿಸುತ್ತಿದ್ದು, ಜನರು ಇದರ ಬಗ್ಗೆ ಕೂಲಂಕುಷವಾಗಿ ಅಧ್ಯಾಯನ ಮಾಡುತ್ತಿದ್ದಾರೆ. ನಿನ್ನೆ ಬೆಳಗಾವಿಯಲ್ಲಿ ನಡೆದ ವಿಧಾನ ಪರಿಷತ್ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯವಾಗಿ ಹೇಳಿಕೆ ಕೊಟ್ಟಿದ್ದು, ಖಂಡನೀಯ ಎಂದು ಹೇಳಿದ್ದಾರೆ.
ಸಂಸತ್ತಿನಲ್ಲಿ ದೇಶದ ಅತ್ಯಂತ ಹಿರಿಯ ನಾಯಕರಾದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿರುವುದನ್ನು ಈ ಸಂದರ್ಭದಲ್ಲಿ ಖಂಡಿಸುತ್ತೇನೆ ಎಂದಿದ್ದಾರೆ.
ಸಿ.ಟಿ.ರವಿ ವಿದ್ಯಾರ್ಥಿ ದಿಸೆಯಿಂದ ಕೂಡ ಈ ರೀತಿಯ ಹೇಳಿಕೆಗಳು ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಸಿ.ಟಿ.ರವಿ ಹೇಳಿಕೆ ಸಮಾಜದಲ್ಲಿ ಆಶ್ಚರ್ಯ ಮೂಡಿಸುವುದು ಕೂಡ ಇಡೀ ಮಹಿಳಾ ಸಮಾಜ ಮತ್ತು ಮಲೆನಾಡಿನ ಸಂಸ್ಕೃತಿಗೆ ಕಪ್ಪು ಚುಕ್ಕಿ ತಂದಿದ್ದು, ಇದರಿಂದ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.
ಬೆಳಗಾವಿಯ ಅಧಿವೇಶನದಲ್ಲಿ ಸಿ.ಟಿ.ರವಿ ಕೊಟ್ಟಿರುವ ಹೇಳಿಕೆ ನಾನು ಹೇಳಿಕೆಯನ್ನು ಕೊಟ್ಟೇ ಇಲ್ಲ ಎಂದು ಹೇಳುತ್ತಿರುವುದು ಪರಮಾವಧಿತನ ಅದನ್ನು ಬಿಟ್ಟು ತಪ್ಪನ್ನು ಒಪ್ಪಿಕೊಂಡು ಸಚಿವೆ ಮತ್ತು ಸಮಾಜದ ಕ್ಷಮೆಯನ್ನು ಕೇಳುವುದರ ಮೂಲಕ ಇಡೀ ಕರ್ನಾಟಕದ ಜನತೆಗೆ ಕ್ಷಮೆಯನ್ನು ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕ ವಿಧಾನಸಭೆಯಲ್ಲಿ ಅದಕ್ಕೆ ಆದ ಪರಂಪರೆ ಇದೆ. ವಿಧಾನಸಭೆಯಲ್ಲಿ ಕೆಂಗಲ್ ಹನುಮಂತಯ್ಯ ಅವರಿಂದ ಹಿಡಿದು ಇಂದು ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವಾರು ಮಹನೀಯರು ಉತ್ತಮ ಸಂದೇಶಗಳನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಸಿ.ಟಿ.ರವಿಯವರ ಹೇಳಿಕೆಗಳು ಸಮಾಜದಲ್ಲಿ ರಾಜಕಾರಣಿಗಳ ಬಗ್ಗೆ ಕೆಟ್ಟ ಸಂದೇಶ ಕೊಟ್ಟಂತಾಗುತ್ತದೆ. ಹೇಡಿತನದ ನಡಿಗೆಯನ್ನು ಸಿ.ಟಿ.ರವಿ ನೀಡುವುದನ್ನು ಬಿಟ್ಟು ಕೂಡಲೇ ಸಮಾಜದ ಕ್ಷಮೆಯನ್ನು ಕೇಳಬೇಕೆಂದು ಹೇಳಿದ್ದಾರೆ.
ನೆಹರು, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಸಮಾಜದ ದೊಡ್ಡ ವ್ಯಕ್ತಿಗಳ ಬಗ್ಗೆ ಕೀಳು ಮಟ್ಟದ ಹೇಳಿಕೆಗಳನ್ನು ಕೊಟ್ಟು ಸಮಾಜದಲ್ಲಿ ದೊಡ್ಡ ಮನುಷ್ಯರಾಗಬೇಕೆಂದು ನಿಮಗೆ ಬ್ರಾಂತು ಎದ್ದು ಕಾಣುತ್ತಿದೆ. ರಾಹುಲ್ ಗಾಂಧಿಯವರ ಬಗ್ಗೆ ಹೇಳಿಕೆಗಳನ್ನು ಕೊಟ್ಟಿದ್ದೀರಿ ಹಿಂದಿನ ದಿನದ ರಾತ್ರಿಯ ನಶೆಯಿಂದ ಹೊರಬರದೆ, ಈ ಹೇಳಿಕೆಯನ್ನು ಕೊಟ್ಟಿದ್ದೀರಾ ಎಂದಿದ್ದಾರೆ.
ರಾಹುಲ್ ಗಾಂಧಿಯವರು ಇಡೀ ದೇಶದಲ್ಲಿ ಮಹಿಳೆಯರ, ಕಾರ್ಮಿಕರ, ರೈತರ, ದೀನ ದಲಿತರ, ಹಿಂದುಳಿದ ವರ್ಗದವರ ಧ್ವನಿಯಾಗಿ ಲೋಕಸಭೆಯಲ್ಲಿ ಒಳಗೆ ಮತ್ತು ಹೊರಗೆ ವಿರೋಧ ಪಕ್ಷದ ನಾಯಕರಾಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ಈ ರೀತಿಯ ಹೇಳಿಕೆಗಳಿಂದ ನೀವು ದೊಡ್ಡವರಾಗುವುದಿಲ್ಲ. ರಾಹುಲ್ ಗಾಂಧಿಯವರನ್ನು ಸಣ್ಣವರನ್ನಾಗಿ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ಸಿ.ಟಿ.ರವಿ ಏನೆಂದು ಚಿಕ್ಕಮಗಳೂರು ಜನತೆ ಈಗಾಗಲೇ ತಮಗೆ ಪಾಠ ಕಲಿಸಿದ್ದಾರೆ. ಈ ರೀತಿಯ ಕೀಳು ಮಟ್ಟದ ಹೇಳಿಕೆಗಳನ್ನು, ಕ್ರಿಮಿನಲ್ ಬುದ್ದಿಯಿಂದ ಹೊರಬಂದರೆ ನಿಮಗೂ ಕೂಡ ಮುಂದೆ ಒಳ್ಳೆಯದಾಗಲಿದೆ.
ಬಿಜೆಪಿ ಮತ್ತು ಸಿ.ಟಿ.ರವಿ ಅವರಿಗೆ ಎಚ್ಚರಿಕೆ ಕೊಡಲು ಬಯಸುತ್ತೇನೆ. ಮಹಿಳಾ ವಿರೋಧಿ ಹೇಳಿಕೆಯಿಂದ ದೂರ ಉಳಿಯಬೇಕು. ಸಿ.ಟಿ.ರವಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಅಮಾನತ್ತು ಮಾಡಬೇಕು ಅವರ ಪರವಾಗಿ ಬಿಜೆಪಿ ನಿಂತರೆ ಪಕ್ಷಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
Amit Shah’s derogatory statement is like a stab in the soul of the country