ಚಿಕ್ಕಮಗಳೂರು: ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿ ಪ್ರಕರಣದಲ್ಲಿ ಜಾಮೀನು ಸಿಕ್ಕಿದ ಬಳಿಕ ನಗರಕ್ಕೆ ಆಗಮಿಸಿದದು, ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು ವಿಶೇಷ ಪೂಜೆ ಸಲ್ಲಿಸಿದರು.
ಅವರ ಬಿಡುಗಡೆಗೆ ಹಲವರು ಹರಕೆ ಹೊತ್ತಿದ್ದರು. ಶನಿವಾರ ರಾತ್ರಿ ಆಗಮಿಸಿದಾಗ ಹಲವು ಕಾರ್ಯಕರ್ತರು ಹರಕೆ ಹೊತ್ತಿದ್ದ ಮಾಹಿತಿ ತಿಳಿದು ಪತ್ನಿ ಪಲ್ಲವಿ ಹಾಗೂ ಹರಕೆ ಹೊತ್ತಿದ್ದ ಕಾರ್ಯಕರ್ತರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು
ನಂತರ ಸುದ್ದಿಗರರೊಂದಿಗೆ ಮಾತನಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ನವರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನಾ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.ಹಮ್ಮುರಾಬಿ ಸಿದ್ದಾಂತದ ಮೇಲೆ ನಂಬಿಕೆ ಇಟ್ಟವರು ಮಾತ್ರ ಕೊಲೆ ಮಾಡುವ ಕೆಲಸ ಮಾಡುತ್ತಾರೆಂದು ಹೇಳಿದರು.
ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಸಂವಿಧಾನದ ಮೇಲೆ ನಂಬಿಕೆ ಇದ್ದಂತೆ ಕಾಣಿಸುತ್ತಿಲ್ಲ. ಅವರಿಗೆ ನಂಬಿಕೆ ಇರುವುದು ಹಮುರಾಬಿ ಸಿದ್ಧಾಂತ ದ ಮೇಲೆ ಎಂಬುದು ಅವರ ಮಾತಿನಲ್ಲಿ ಅರ್ಥವಾಗುತ್ತಿದೆ.ನಾನು ಕೊಟ್ಟ ದೂರನ್ನು ಏಕೆ ದಾಖಲುಮಾಡಿಕೊಂಡಿಲ್ಲ ಇದಕ್ಕೆ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ.ಕಾನೂನಿನಲ್ಲಿ ನ್ಯಾಯ ಪಡೆಯುವ ಅಧಿಕಾರ ನನಗಿಲ್ಲವೇ ಎಂದರು.
ಇವರುಗಳ ದೃಷಿಯಲ್ಲಿ ಗೂಂಡಗಳನ್ನು ಕಳುಹಿಸಿ ನ್ಯಾಯ ಪಡೆಯಬೇಕಾ? ನಾನು ನ್ಯಾಯಂಗ ತನಿಖೆ ಕೇಳಿರುವುದು ನನ್ನ ಪ್ರಕರಣದಲ್ಲಿ ಸತ್ಯಾಸತ್ಯತೇ ಹೊರಬರಲಿ ಎನ್ನುವ ಕಾರಣಕ್ಕೆ ನಿಗೂಢ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದು ಅಪರಿಚಿತರಲ್ಲ, ಕರ್ನಾಟಕದ ಪೊಲೀಸರು ಅವರಿಗೆ ಆಗಾಗ ನಿರ್ದೇಶನ ಬರುತ್ತಿದ್ದುದು ಬರ್ತಾ ಇದ್ದಿದ್ದು ನಿಗೂಡ ಸ್ಥಳದಿಂದ ಅದಕ್ಕೆ ಹೇಳಿದ್ದು ಅವ್ರ ಕಾಲ್ ರೇಕಾರ್ಡ್ ಚೆಕ್ ಮಾಡಲಿ ಎಂದು ಹೇಳಿದರು.
C.T. Ravi visits various temples in the city