ಚಿಕ್ಕಮಗಳೂರು: ಕರ್ನಾಟಕ ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳ ಆಯ್ಕೆಯನ್ನು ನಿಯಮಬಾಹಿರ ಮತ್ತು ಅಕ್ರಮವಾಗಿ ಮಾಡಲಾಗಿದೆ ಎಂದು ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ. ವಿಜಯ್ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬೇಕು ಅಥವಾ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಬೇಕು ಹಾಗೂ ಉಪಾಧ್ಯಕ್ಷರಾದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ನಿಯಮ ಒಕ್ಕೂಟದ ಬೈಲಾದಲ್ಲಿ ಇದ್ದರೂ ಅದನ್ನು ಕಡೆಗಣಿಸಿ ಒಕ್ಕೂಟಕ್ಕೆ ಹೊಸದಾಗಿ ಸದಸ್ಯರಾದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ದೂರಿದ್ದಾರೆ.
ಕರ್ನಾಟಕ ಬೆಳೆಗಾರರ ಒಕ್ಕೂಟದ ಬೈಲಾದ ಪ್ರಕಾರ ಒಕ್ಕೂಟದ ಸರ್ವ ಸದಸ್ಯರ ಸಭೆಯನ್ನು ಕರೆದು ಅದರಲ್ಲಿ ಪದಾಧಿಕಾರಿಗಳ ಆಯ್ಕೆಯನ್ನು ಮಾಡಿಲ್ಲ ಅಥವಾ ಚುನಾವಣೆಯನ್ನೂ ನಡೆಸಿಲ್ಲ ಚುನಾವಣೆಗಾಗಿ ನೇಮಿಸಲಾಗಿದ್ದ ಇಬ್ಬರು ಚುನಾವಣಾಧಿಕಾರಿಗಳು ಆಗಮಿಸದೇ ಗೈರಾಗಿದ್ದರೂ. ಪದಾಧಿಕಾರಿಗಳ ಆಯ್ಕೆಯ ವಿವಾದ ನ್ಯಾಯಾಲಯದಲ್ಲಿದ್ದರೂ. ಒಕ್ಕೂಟದ ಆಡಳಿತ ಮಂಡಳಿ ಗುಂಪುಗಾರಿಕೆ ನಡೆಸಿದ್ದಾರೆ
ಕಾನೂನು ನೀತಿ ನಿಯಮಗಳನ್ನು ಗಾಳಿಗೆ ತೂರಿ ಚುನಾವಣೆ ನಡೆಸದೇ ಅಧ್ಯಕ್ಷರನ್ನು ಏಕಾಏಕಿ ಘೋಷಿಸಿದೆ. ಆ ಮೂಲಕ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.
ಒಕ್ಕೂಟದ ಆಡಳಿತ ಮಂಡಳಿ ಕಾನೂನುಬಾಹಿರವಾಗಿ ಮಾಡಿರುವ ಪದಾಧಿಕಾರಿಗಳ ಆಯ್ಕೆಯನ್ನು ಕೂಡಲೇ ರದ್ದುಗೊಳಿಸಬೇಕು. ಒಕ್ಕೂಟದ ಕಾನೂನು ನೀತಿ ನಿಯಮಗಳ ಪ್ರಕಾರ ಚುನಾವಣೆಯನ್ನು ನಡೆಸಿ ಪದಾಧಿಕಾರಿಗಳ ಆಯ್ಕೆಯನ್ನು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
Allegations of irregularities in KGF elections