ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಯೇಸುಕ್ರಿಸ್ತರ ಜನ್ಮದಿನವನ್ನು ಕ್ರೈಸ್ತ ಸಮುದಾಯದವರು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ನಗರದ ಸಂತಜೋಸೆಫರ ಪ್ರಧಾನಾಲಯದಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನಡೆಯಿತು. ವಿಶೇಷಪೂಜೆ, ಧಾರ್ಮಿಕ ಕಾರ್ಯವನ್ನು ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಧರ್ಮಾಧ್ಯಕ್ಷರಾದ ಡಾ.ಅಂತೋಣಿಸ್ವಾಮಿ ನೆರವೇರಿಸಿದರು.ಫಾದರ್ ಅಂತೋಣಿಪಿಂಟೋ ಇದ್ದರು.
ಕ್ರೈಸ್ತ ಸಮುದಾಯದವರು ಹೊಸಬಟ್ಟೆಗಳನ್ನು ತೊಟ್ಟು ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.ಯೇಸುಕ್ರಿಸ್ತರ ಜನ್ಮದ ವೃತ್ತಾಂತವನ್ನು ತಿಳಿಸುವ ಗೋದಲಿಯನ್ನು ಮನೆಯಂಗಳದಲ್ಲಿ ನಿರ್ಮಿಸಲಾಗಿದೆ. ಮನೆಯ ಮುಂದೆ ನಕ್ಷತ್ರ ಆಕಾರದ ವಿದ್ಯುತ್ದೀಪಗಳನ್ನು ಅಳವಡಿಸಲಾಗಿದೆ.
ಕ್ರಿಸ್ಮಸ್ ಅಂಗವಾಗಿ ಮನೆಗಳಲ್ಲಿ ತಯಾರಿಸಿದ್ದ ಸಿಹಿತಿನಿಸುಗಳನ್ನು ಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ವಿತರಿಸಲಾಯಿತು. ನಗರದ ಸಂತ ಜೋಸೆಫರ ಪ್ರಧಾನಾಲಯದ ಆವರಣದಲ್ಲಿ ನಿರ್ಮಿಸಿರುವ ಗೋದಲಿ ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.
ಶಾಸಕ ಹೆಚ್.ಡಿ.ತಮ್ಮಯ್ಯ ಅವರು ನಗರದ ಸಂತಜೋಸೆಫರಚರ್ಚ್,ಬಿಸಪ್ಹೌಸ್, ಬೇಲೂರು ರಸ್ತೆಯ ಸಂತ ಆಂದ್ರೆಯಾ ಚರ್ಚ್, ವಿಜಯಪುರದ ಹೋಲಿಫ್ಯಾಮಿಲಿ ಚರ್ಚ್ಗಳಿಗೆ ಭೇಟಿನೀಡಿ ಧರ್ಮಾಧ್ಯಕ್ಷರು ಮತ್ತು ಫಾದರ್ಗಳಿಗೆ ಕೇಕ್ನೀಡಿದರು.
ಶುಭಾಶಯ: ನಗರದ ಎಐಟಿ ವೃತ್ತ ಸಮೀಪದ ಬ್ರಿಷಪ್ ಡಾ.ಟಿ.ಅಂತೋಣಿಸ್ವಾಮಿ ಹಾಗೂ ನಗರದ ಸಂತ ಜೋಸೆಫರ ಪ್ರಧಾನ ದೇವಾಲಯದ ಅಂತೋಣಿ ಪಿಂಟೋ ಸ್ವಗೃಹಕ್ಕೆ ಬುಧವಾರ ತೆರಳಿ ಗುರುಗಳಿಗೆ ಪುಷ್ಪಗುಚ್ಚ ವಿತರಿಸುವ ಮೂಲಕ ಶುಭಾಶಯ ಕೋರಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ಶೆಟ್ಟಿ ಕ್ರಿಸ್ಮಸ್ ದಿನವು ಅತ್ಯಂತ ಶ್ರದ್ದಾ ಯಿಂದ ಸಮುದಾಯದ ಜನತೆ ಆಚರಿಸುವಂತಾಗಬೇಕು. ಪ್ರತಿಯೊಬ್ಬರು ಕ್ರಿಸ್ಮಸ್ನ ಉತ್ತಮ ಸಂದೇ ಶಗಳನ್ನು ತುಂಬಿಕೊಂಡು ಸನ್ನಡತೆಯ ದಾರಿಯಲ್ಲಿ ಸಾಗಿ ಅಭಿವೃದ್ದಿ ಹೊಂದಬೇಕು ಎಂದು ಶುಭ ಕೋರಿ ದರು.
ಬ್ರಿಟಿಷ್ ಡಾ.ಟಿ.ಅಂತೋಣಿ ಮಾತನಾಡಿ ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್ಮಸ್ ಹಬ್ಬವು ಸರ್ವ ಜನತೆಗೆ ಒಳಿತು ಮಾಡುವಂತಾಗಲೀ. ಮನುಷ್ಯನ ಮನಸ್ಸು ಕಲ್ಮಶದಿಂದ ದೂರವಾಗಿ, ಸದ್ಗುಣಗಳನ್ನು ಮೈ ಗೂಡಿಸಿಕೊಂಡು ಎಲ್ಲರಲ್ಲೂ ಪರಸ್ಪರ ಬಾಂಧವ್ಯ ಮೂಡಿಸಲಿ ಎಂದು ಆಶಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ನಗರಾಧ್ಯಕ್ಷ ಕೆ.ಎಸ್.ಪುಷ್ಪರಾ ಜ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಇದ್ದರು.
Christmas celebrated with great enthusiasm in the coffee country