ಚಿಕ್ಕಮಗಳೂರು: : ಆಧುನಿಕ ಕೃಷಿ ಉಪಕರಣಗಳಿಂದ ಪ್ರಸ್ತುತ ರೈತರ ಜೀವನ ಸುಗಮವಾಗಿರುವ ಜೊತೆಗೆ ಕೃಷಿ ಕಾರ್ಮಿಕರ ಕೊರತೆ ನೀಗಿಸಲು ಕೃಷಿ ಪರಿಕರಗಳು ಸಹಕಾರಿಯಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.
ಅವರು ಇಂದು ಎಐಟಿ ಕಾಲೇಜು ವೃತ್ತದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕೃಷಿಪರಿಕರಗಳ ಮಾರಾಟಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ ಈ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಸಭೆ ಆರಂಭಿಕ ಶೂರತ್ವವಾಗದೆ ಶಾಶ್ವತವಾಗಿರಬೇಕು ಯಾವುದೇ ಸಂಘಟನೆಗಳು ಏಕ ವ್ಯಕ್ತಿಯಿಂದ ನ್ಯಾಯ ಒದಗಿಸಲಾಗದು ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಅಗತ್ಯವಾದಾಗ ಮಾತ್ರ ತಮ್ಮ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಸಾಧ್ಯ ಎಂದರು.
ಶೇ.೭೦ರ? ಕೃಷಿ ಪ್ರಧಾನವಾಗಿರುವ ಭಾರತ ದೇಶದಲ್ಲಿ ಆರ್ಥಿಕಸ್ಥಿತಿ ಉತ್ತಮವಾಗಿರಬೇಕಾದರೆ ಕೃಷಿ, ವಾಣಿಜ್ಯ, ರೈತ ಸಮೂಹ ಸಂತೃಪ್ತಿಯಿಂದ ಇರಬೇಕು ಈ ಮೂರು ವರ್ಗಗಳು ದೇಶದ ಆರ್ಥಿಕ ಪ್ರಗತಿಗೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿ ಕೃಷಿ ಕ್ಷೇತ್ರ ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಹೋರಾಟ ನಡೆಸಿದರು ಬಹಳ ವ?ಗಳಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಯಶಸ್ವಿಯಾಗಲು ಸಾಧ್ಯವಾಗಿಲ್ಲ ಎಂದು ವಿ?ಧಿಸಿದರು.
ಉತ್ತಮ ಮಳೆಯಾದರೆ ನಿರೀಕ್ಷಿತ ಮಟ್ಟಕ್ಕಿಂತ ಮೀರಿ ಬೆಳೆ ಬೆಳೆಯುತ್ತಾರೆ ಅದಕ್ಕೆ ಪೂರಕವಾಗಿ ಬೆಲೆ ನಿಗಧಿ ಮಾಡುವ ಬಹುದೊಡ್ಡ ಜವಾಬ್ದಾರಿ ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲಿದೆ ಎಂದು ತಿಳಿಸಿದರು.
ಕೃಷಿ ಪರಿಕರಗಳು ಇರುವುದರಿಂದ ಕೃಷಿಪದ್ಧತಿ ಸುಗಮವಾಗಿದೆ ಇದಕ್ಕೆ ತಾಂತ್ರಿಕವಾದ ಕೃಷಿ ಪರಿಕರಗಳು ಸಹಕಾರಿಯಾಗಿದ್ದು, ಔ?ಧಿ ಸಿಂಪರಣೆಗೆ, ಬೆಳೆಕಟಾವಿಗೆ, ಕಣ ಕೆಲಸಕ್ಕೆ ಉಪಕರಣಗಳು ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಿದೆ ಎಂದರು.
ವೈವಿಧ್ಯಮಯ ಬೆಳೆಗಳ ಪ್ರಯೋಗ ಮಾಡಿ, ಸಸ್ಯರೋಗ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳು ಸಂಶೋಧನೆ ಮಾಡಿ ಕೃಷಿ ಕ್ಷೇತ್ರದ ಬಲವರ್ಧನೆಗೆ ಮುಂದಾಗಿದ್ದಾರೆ ಎಂದು ಶ್ಲಾಘಿಸಿದರು.
ನೂತನ ವ?ದ ಕ್ಯಾಲೆಂಡರ್ ಡೈರಿ ಬಿಡುಗಡೆ ಮಾಡಿ, ಮಾತನಾಡಿದ ವಿಧಾನ ಪರಿ?ತ್ ಸದಸ್ಯ ಸಿ.ಟಿ.ರವಿ ಭಾರತದ ಆರ್ಥಿಕತೆಯ ಮೂಲವಾಗಿರುವ ಕೃಷಿ ಸಂಸ್ಕೃತಿ ನಾಶದ ಅಂಚಿನಲ್ಲಿದೆ ಎಂದು ವಿ?ಧಿಸಿದರು.
ಕೃಷಿಕರಿಗೆ ತಮ್ಮ ಮೂಲ ಕಸುಬಿನ ಬಗ್ಗೆ ವಿಶ್ವಾಸ ಉಳಿಯದಿರುವ ಈ ಸಂದರ್ಭದಲ್ಲಿ ಕೃಷಿ ಪರಿಕರಗಳ ಮಾರಾಟ ಮತ್ತು ಪತ್ತಿನ ಸಹಕಾರ ಸಂಘ ಸ್ಥಾಪನೆಯಿಂದ ಸಮಸ್ಯೆ ಬಗೆ ಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಸಲಹೆ ನೀಡಿದ ರವಿ ಜಿಲ್ಲಾಧಿಕಾರಿಗಳು ಮತ್ತು ನಗರಾಭಿವೃದ್ಧಿ ಆಯುಕ್ತರಿಗೆ ಕೃಷಿ ಪರಿಕರ ಮಾರಾಟ ಸಂಘಕ್ಕೆ ನಿವೇಶನ ನೀಡುವಂತೆ ಶಿಫಾರಸ್ಸು ಮಾಡುವುದಾಗಿ ಭರವಸೆ ನೀಡಿದರು.
ರೈತರಿಗೆ ಕಳಪೆಬೀಜ, ಕಳಪೆಕೀಟನಾಶಕ, ಗೊಬ್ಬರ ಮಾರಾಟ ಮಾಡುತ್ತಿರುವ ಕುರಿತು ವಿಶೇ?ವಾದ ಎಚ್ಚರಿಕೆ ವಹಿಸಬೇಕು ಎಂದ ಅವರು ಮಾರಾಟಗಾರರು ಮೋಸ ಹೋದರೆ ರೈತರಿಗೆ ಅನ್ಯಾಯವಾಗುತ್ತದೆ ಈ ನಿಟ್ಟಿನಲ್ಲಿ ವಿಶ್ವಾಸ-ನಂಬಿಕೆಯಿಂದ ಕೆಲಸ ಮಾಡಿ ಎಂದು ವಿನಂತಿಸಿದರು.
ವಿಧಾನ ಪರಿ?ತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಕೃಷಿ ಬದುಕಿಗೆ ಸಾವಿರಾರು ವ?ಗಳ ಇತಿಹಾಸವಿದ್ದು, ನಮ್ಮ ಪೂರ್ವಿಕರು ಕೃಷಿ ಚಟುವಟಿಕೆ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಿದ್ದಾರೆ ಗುಣಮಟ್ಟದ ಕೃಷಿ ಪರಿಕರ ಪಡೆದುಕೊಂಡು ಆಧುನಿಕ ಕೃಷಿ ಪದ್ಧತಿಯ ಮೂಲಕ ರೈತರು ಆರ್ಥಿಕ ಸದೃಢರಾಗಬೇಕೆಂದು ಕರೆ ನೀಡಿದರು.
ಇತ್ತೀಚೆಗೆ ಕೃಷಿ ಬದುಕು ದೂರವಾಗುತ್ತಿದೆ, ಆದರೆ ನಗರದ ಸುತ್ತಮುತ್ತಲ ಹಳ್ಳಿಗಳಲ್ಲಿ ಉತ್ತಮವಾದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ ಕೃಷಿ ಬದುಕು ಲಾಭದಾಯಕ ಎಂಬುದನ್ನು ಮಕ್ಕಳಿಗೆ ಪರಿಚಯಿಸುತ್ತಾರೆ ವೈಜ್ಞಾನಿಕವಾಗಿ ಕೃಷಿ ಮಾಡಲು ಮುಂದಾಗುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ.ಆರ್.ಯೋಗೀಶ್ ಮಾತನಾಡಿ, ಸಂಘಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಕೃಷಿ ಪರಿಕರಗಳ ಮಾರಾಟಗಾರರು ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಹುದು, ಸಂಘದ ಅಭಿವೃದ್ಧಿಗೆ, ಎಲ್ಲಾ ಸದಸ್ಯರ ಸಲಹೆ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪ ಕೃಷಿ ನಿರ್ದೇಶಕ ವೆಂಕಟೇಶ್ ಚವ್ಹಾಣ್, ಕರ್ನಾಟಕ ರಾಜ್ಯ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಉಪಾಧ್ಯಕ್ಷ ಡಾ.ಮಹಾಬಲ ಮಾಧ್ಯಮ ವರಿದಿಗಾರರಾದ ಹಿರೇನಲ್ಲೂರು ಶಿವು, ಉಪಾಧ್ಯಕ್ಷ ಟಿ.ಡಿ ತಿಮ್ಮಯ್ಯ, ಉದಯ್ ಪೈ, ಕಾರ್ಯದರ್ಶಿ ಜಿ.ಸಿ ಮನೂಪ್, ಖಜಾಂಚಿ ಶ್ರೀಕಾಂತ್ ಶೆಟ್ಟಿ ಇತರರು ಉಪಸ್ಥಿತರಿದ್ದರು.
Annual General Meeting of the District Agricultural Implements Dealers Association