ಚಿಕ್ಕಮಗಳೂರು: ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹಾಗೂ ದಲಿತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆಯನ್ನು ತೇಗೂರು ಗಿರಿಧಾಮ ಬುದ್ಧ ವಿಹಾರದಲ್ಲಿ ಡಿ.೨೯ ರಂದು ಭಾನುವಾರ ಮಧ್ಯಾಹ್ನ ೨.೩೦ಕ್ಕೆ ಆಯೋಜಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಂಬೇಡ್ಕರ್ ಅಧ್ಯಯನ ಸಂಸ್ಥೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲೆಯ ಪರಿಶಿ? ಜಾತಿ, ವರ್ಗಗಳ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಶ್ರೇಯೋಭಿವೃದ್ಧಿಯ ಧ್ಯೇಯೋದ್ದೇಶಗಳೊಂದಿಗೆ ಕಳೆದ ೧೦ ವ?ಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಸಾಹಿತ್ಯ ಲೋಕದಲ್ಲಿ ಸದಾ ಬೆಳಗುವ ದೃವತಾರೆಯಾಗಿರುವ ಕುವೆಂಪುರವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಅನಿಷ್ಠಗಳ ವಿರುದ್ಧ ಪ್ರತಿಭಟನೆಯ ರೂಪದಲ್ಲಿ ಪರಿಣಾಮಕಾರಿ ಸಂದೇಶಗಳನ್ನು ನೀಡುವ ಮೂಲಕ ಮನುಜಮತ-ವಿಶ್ವಪಥ ಎಂಬ ತತ್ವ ವಾಕ್ಯದ ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ದಾರಿಯಲ್ಲಿ ಸಾಗುವುದು ಇಡೀ ಜಗತ್ತಿಗೆ ಪ್ರಸ್ತುತವಾಗಿದ್ದು, ಸರ್ವಜನಾಂಗ ಶಾಂತಿಯತೋಟದ ಘೋ?ವಾಕ್ಯದೊಂದಿಗೆ ಸಾಗಲು ಮನನ ಮಾಡಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಖ್ಯಾತ ಅಂಕಣಕಾರರೂ ಸಾಹಿತಿಗಳೂ ಆಗಿರುವ ಬಿ.ಚಂದ್ರೇಗೌಡು ಕುವೆಂಪುರವರನ್ನು ಕುರಿತು ಪ್ರದಾನ ಭಾ?ಣ ಮಾಡಲಿದ್ದಾರೆ. ಹಿರಿಯರೂ ಪ್ರಸಿದ್ಧ ವೈದ್ಯರಾಗಿರುವ ಡಾ.ಜೆ.ಪಿ ಕೃ?ಗೌಡ ಕುವೆಂಪುರವರ ಭಾವಚಿತ್ರ ಅನಾವರಣಗೊಳಿಸಲಿದ್ದು, ಶಾಸಕರಾದ ಹೆಚ್.ಡಿ.ತಮ್ಮಯ್ಯ, ಶ್ರೀಮತಿ ನಯನ ಮೋಟಮ್ಮ, ವಿಧಾನ ಪರಿ?ತ್ ಸದಸ್ಯರಾದ ಸಿ.ಟಿ.ರವಿ ಇತರ ಗಣ್ಯವ್ಯಕ್ತಿಗಳಾದ ಡಾ.ಕೆ.ಪಿ.ಅಂಶುಮಂತ್, ಎ.ಎನ್.ಮಹೇಶ್, ಶಿವಾನಂದ ಸ್ವಾಮಿ, ಸೂರಿಶ್ರೀನಿವಾಸ್, ರವಿಶ್ ಬಸಪ್ಪ, ಹೆಚ್.ಹೆಚ್.ದೇವರಾಜ್, ಹೆಚ್.ಎಸ್.ಮಂಜಪ್ಪ ಗುರುಶಾಂತಪ್ಪ, ಎಚ್.ಎಂ.ರುದ್ರಸ್ವಾಮಿ ವಕೀಲರಾದ ಅನಿಲ್ಕುಮಾರ್, ಪರಮೇಶ್ ಸೇರಿದಂತೆ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಬುದ್ಧ, ಬಸವ, ಅಂಬೇಡ್ಕರ್ ಮುಂತಾದ ಮಹಾನ್ ದಾರ್ಶನಿಕರುಗಳ ಜಯಂತಿ ಕಾರ್ಯಕ್ರಮಗಳೂ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಈ ಸ್ಥಳವನ್ನು ಒಂದು ಜ್ಞಾನ ಪ್ರಸಾರದ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸುವ ಮೂಲಕ ಒಟ್ಟಾರೆ ಎಲ್ಲಾ ಸಮಾಜಗಳ ಒಳಿತಿಗಾಗಿ ಕಾರ್ಯ ಸ್ಥಾನವನ್ನಾಗಿ ಮಾಡುವ ಹಲವಾರು ಉದ್ದೇಶಗಳನ್ನಿಟ್ಟುಕೊಂಡು ನಿರಂತರವಾಗಿ ಕಾರ್ಯ ಚಟುವಟಿಕೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದೆಂದರು. ಇದೇ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ಹುತಾತ್ಮರಾದ ಯೋಧರಿಗೆ ಚಿರಶಾಂತಿ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ದ.ಸಂ.ಸ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಹುಣಸೆಮಕಿ ಲಕ್ಷ್ಮಣ, ಹರೀಶ್ಮಿತ್ರ, ಹರಿಯಪ್ಪ, ಕೃ?ಯ್ಯ ಉಪಸ್ಥಿತರಿದ್ದರು
National poet Kuvempu’s birthday is celebrated on December 29th.