ಚಿಕ್ಕಮಗಳೂರು: ಹಿರಿಯ ನಾಗರೀಕರಿಗೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾ ಹಿರಿಯ ನಾಗರೀಕರ ಒಕ್ಕೂಟ ಇಂದು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಸ್ ನಂಜುಂಡರಾವ್ ಈಗಾಗಲೇ ಸಾರಿಗೆ ಬಸ್ಸುಗಳಲ್ಲಿ ಶೇ.೨೫ ರ? ರಿಯಾಯಿತಿ ನೀಡುತ್ತಿದ್ದು, ಈ ಹಿಂದೆ ಶೇ.೫೦ರ? ರಿಯಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ವೃದ್ದಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷ ಈ ವೇತನಗಳಿಗೆ ನೀಡುತ್ತಿರುವ ವೇತನ ಬಹಳ ಕಡಿಮೆಯಾಗಿದ್ದು, ಕಾರಣ ಎಲ್ಲಾ ಔ?ಧಿಯ ಬೆಲೆಯು ಹೆಚ್ಚಾಗಿರುವುದರಿಂದ ದಯಮಾಡಿ ಈಗ ನೀಡುತ್ತಿರುವ ವೇತನಕ್ಕೆ ೨ರ? ಹಣ ಹೆಚ್ಚಿಸಬೇಕೆಂದು ಈ ಮೂಲಕ ಮನವಿ ಮಾಡಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗೆ ವೈದ್ಯರ ಸಹಿತ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಮತ್ತು ಬ್ಯಾಂಕ್ ಹಾಗೂ ಸರ್ಕಾರಿ ಕಛೇರಿಗಳಲ್ಲಿ ಹಿರಿಯ ನಾಗರೀಕರ ಕೆಲಸ ತುರ್ತಾಗಿ ನಿರ್ವಹಿಸಿ ಕೊಡಬೇಕೆಂದು ಆಗ್ರಹಿಸಿದರು.
ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಿರಿಯ ನಾಗರೀಕರಿಗೆ ಇರುವ ಮೀಸಲು ಸೀಟುಗಳನ್ನು ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು. ಬ್ಯಾಂಕ್ಗಳಲ್ಲಿ ಹಿರಿಯ ನಾಗರೀಕರಿಗೆ ಶೌಚಾಲಯಗಳನ್ನು ಕಲ್ಪಿಸುವುದು. ನ್ಯಾಯಬೆಲೆ ಅಂಗಡಿಗಳಲ್ಲಿ ಮೊದಲಿನಂತೆ ಹಿರಿಯ ನಾಗರೀಕರಿಗೆ ಎಪಿಎಲ್ ಹಾಗೂ ಬಿಪಿಎಲ್ ಸಾರ್ವಜನಿಕ ವಿತರಣೆ ಆಧ್ಯತೆ ಮೇರೆಗೆ ನೀಡುವುದರ ಜೊತೆಗೆ ಎಪಿಎಲ್ ಕಾರ್ಡ್ ಹೊಂದಿದ ಹಿರಿಯ ನಾಗರಿಕರಿಗೆ ನಿಲ್ಲಿಸಿರುವ ಪಡಿತರವನ್ನು ಪುನಃ ಪ್ರಾರಂಭಿಸುವಂತೆ ಒತ್ತಾಯಿಸಿದರು.
ಈ ಹಿಂದೆ ಹಿರಿಯ ನಾಗರೀಕರಿಗೆ ರೈಲ್ವೆಯಲ್ಲಿ ಶೇ.೪೦ ಪುರು?ರಿಗೆ ಶೇ.೫೦ ರ? ಮಹಿಳೆಯರಿಗೆ ರಿಯಾಯಿತಿಯನ್ನು ನೀಡುತ್ತಿದ್ದು, ಈ ರಿಯಾಯಿತಿಯನ್ನು ಕೊರೋನ ವೇಳೆಯಲ್ಲಿ ರದ್ದು ಪಡಿಸಿರುವುದರಿಂದ ಹಿರಿಯ ನಾಗರೀಕರಿಗೆ ತುಂಬಾ ತೊಂದರೆಯಾಗಿದೆ. ಹಿರಿಯ ನಾಗರೀಕರು ವಿನಾ ಕಾರಣ ಪ್ರಯಾಣ ಮಾಡುವುದಿಲ್ಲ ಎಂದು ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.
ರಿಯಾಯಿತಿಯನ್ನು ಪುನರ್ ಪ್ರಾರಂಭಿಸಬೇಕಾಗಿ ಹಾಗೂ ಈಗ ನೀಡುತ್ತಿರುವ ತಿಂಗಳ ವೇತನ ೧೨೦೦/- ರೂ.ಗಳು ಬಹಳ ಕಡಿಮೆ ಆಗಿದ್ದು, ಹಿರಿಯ ನಾಗರೀಕರಿಗೆ ನೂರಾರು ಖಾಯಿಲೆಗಳಿದ್ದು, ಹಾಗೂ ಔ?ಧಿಗಳ ಬೆಲೆಯು ಗಗನಕ್ಕೇರಿವುದರಿಂದ ತಿಂಗಳ ವೇತನವನ್ನು ಐದು ಸಾವಿರಗಳಿಗೆ ಹೆಚ್ಚಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗೋಪಾಲಕೃಷ್ಣ, ಕೃಷ್ಣಮೂರ್ತಿ, ಸಿ.ಆರ್.ಶಿವಾನಂದ, ಸತ್ಯನಾರಾಯಣ, ಮುನೀರ್ ಅಹಮದ್, ಎಸ್.ರಾಮಚಂದ್ರ, ಎನ್.ಜಿ.ರಾಜಶೇಖರ್, ಎಸ್.ಕೆ.ಭಾಷಾ, ಗೋವಿಂದಪ್ಪ, ಆನಂದ್ರಾವ್ ಮತ್ತಿತರರಿದ್ದರು.
Appeal to provide various government facilities to senior citizens