ಚಿಕ್ಕಮಗಳೂರು: ಹಳ್ಳಿಗಾಡಿನ ಶೋಷಿತ ವರ್ಗದ ಜನತೆಯು ಜೀವಂತವಾಗಿ ಉಳಿ ಯಲು ಹಾಗೂ ಸ್ವಾತಂತ್ರ್ಯವಾಗಿ ಬದುಕು ಕಟ್ಟಿಕೊಳ್ಳಲು ಬಿ.ಕೆ.ಸುಂದರೇಶ್ರವರ ಹೋರಾಟದ ಹಾದಿಗಳೇ ಪ್ರಮುಖ ಕಾರಣಗಳು ಎಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದರು.
ನಗರದ ಜಿಲ್ಲಾ ಸಿಪಿಐ ಕಚೇರಿಯಲ್ಲಿ ಹಮ್ಮಿಕೊಂಡಿದ್ಧ ದಿ|| ಬಿ.ಕೆ.ಸುಂದರೇಶ್ರವರ ಪುಣ್ಯಸ್ಮರಣೆ ಕಾರ್ಯ ಕ್ರಮದಲ್ಲಿ ಭಾವಚಿತ್ರಕ್ಕೆ ಮಂಗಳವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿ ಚಳುವಳಿ ಮುಖಾಂತರ ಬಡವರು, ಶೋಷಿತರಿಗೆ ದಾರಿದೀಪವಾದ ಬಿ.ಕೆ.ಸುಂದರೇಶ್ ಹಗಲು-ರಾತ್ರಿ ಎನ್ನದೇ ಇಡೀ ಜೀವನವನ್ನು ಬಡವರಿಗಾಗಿ ಮುಡಿಪಿಟ್ಟು ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯಬದ್ಧ ಹಕ್ಕುಗಳನ್ನು ಶೋಷಿತರಿಗೆ ಪೂರೈಸಿದ ಮಹಾತ್ಮರು ಎಂದು ಬಣ್ಣಿಸಿದರು.
ಹಲವಾರು ವರ್ಷಗಳ ಕಾಲ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ನಿವಾಸಿಗಳನ್ನು ಏಕಾ ಏಕಿ ಒಕ್ಕಲೆಬ್ಬಿಸದ ವೇಳೆಯಲ್ಲಿ ಧೈರ್ಯವಾಗಿ ಎದೆಯೊಡ್ಡಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಅಪರೂ ಪದ ಜನನಾಯಕ ಎಂದ ಅವರು ಅಲ್ಪಾವಧಿಯಲ್ಲೇ ಜನತೆಯನ್ನು ಬಿಟ್ಟಗಲಿರುವುದು ತುಂಬಲಾರದ ನಷ್ಟ ಉಂಟಾಗಿದೆ ಎಂದರು.
ಫಲಾಪೇಕ್ಷೆ ಇಲ್ಲದೇ ನ್ಯಾಯಕ್ಕಾಗಿ ಹೋರಾಡಿದ ಬಿ.ಕೆ.ಎಸ್. ಸಂಪತ್ತು ಸಾವಿರಾರು ಜನತೆಯ ಸ್ನೇಹ, ವಿಶ್ವಾಸವಾಗಿದೆ. ಇಂದಿನ ಯುವಸಮೂಹ ಸುಂದರೇಶ್ರವರ ವಿಚಾರಧಾರೆ, ಹೋರಾಟದ ಹಾದಿ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಂಡು ಮುನ್ನೆಡೆದರೆ ಮಾತ್ರ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾದಂತೆ ಎಂದು ತಿಳಿಸಿದರು.
೧೯೮೦ರ ಕಾಲಘಟ್ಟದಲ್ಲಿ ನಿವೇಶನ ರಹಿತರ ಪರವಾಗಿ ಚಳುವಳಿ ಆರಂಭಿಸಿದ ಕಮ್ಯೂನಿಸ್ಟ್ ಪಕ್ಷದ ನಾಯಕ ಸುಂದರೇಶ್ರವರು ಸಮಾನ ಮನಸ್ಕರಂತೆ ರೈತ ಸಂಘ ಹಾಗೂ ದಲಿತ ಸಂಘಟನೆಗಳ ಜೊತೆ ಗೂಡಿ ಒಗ್ಗಟ್ಟಾಗಿ ಚಳುವಳಿ ರೂಪಿಸಿದ ಪರಿಣಾಮ ಜನತೆ ಅಭಿಮಾನದಿಂದ ಜಿಲ್ಲೆಯ ವಿವಿಧ ಬಡಾವಣೆ, ಆಟೋ ನಿಲ್ದಾಣಗಳಲ್ಲಿ ಅವರ ಹೆಸರು ನಾಮಕರಣ ಮಾಡಿವೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜಕೀಯ ಮುಖಂಡರು ಜನಪರ ಚಿಂತನೆ, ಸಿದ್ಧಾಂತವಿಲ್ಲದೇ ಕೇವಲ ದೃಶ್ಯ ಮಾಧ್ಯಮಗಳಲ್ಲಿ ಹೆಸರು ಭಿತ್ತವಾದರೆ ದೊಡ್ಡ ನಾಯಕರಾಗುವೆಂಬ ಗುಂಗಿನಲ್ಲಿದ್ದಾರೆ. ಆದರೆ ಸುಂ ದರೇಶ್ರವರ ನಿಸ್ವಾರ್ಥ ಸೇವೆಯನ್ನು ನೈಜವಾಗಿ ಕಣ್ತುಂಬಿಕೊಂಡಿರುವ ಅನೇಕರು ಮನಸ್ಸಿನಲ್ಲಿ ಶಾಶ್ವತವಾ ಗಿ ನೆಲೆಸಿದ್ದಾರೆ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃ? ಮಾತನಾಡಿ ಸರಳ ನಡೆ, ನುಡಿ, ಸಜ್ಜನಿಕೆಯ ವ್ಯಕ್ತಿತ್ವವನ್ನು ಸುಂದರೇಶ್ರಲ್ಲಿ ಕಾಣಸಿಗುತ್ತಿತ್ತು. ಯಾವುದೇ ಸಂದರ್ಭಗಳಲ್ಲಿ ತಾಳ್ಮೆ ಯನ್ನು ಕಳೆದುಕೊಳ್ಳದೇ ಎಲ್ಲವೂ ಸಮರ್ಥವಾಗಿ ನಿಭಾಯಿಸಬಲ್ಲ ಆತ್ಮಶಕ್ತಿ ಹೊಂದಿರುವ ಬಿಕೆಎಸ್ರವರ ಆದರ್ಶಗುಣಗಳನ್ನು ಅಳ ವಡಿಸಿಕೊಳ್ಳಬೇಕು ಎಂದರು.
ವಸತಿ, ನಿವೇಶನ ರಹಿತರಿಗೆ ಸಮಾಜದಲ್ಲಿದ್ಧ ಮಾರಕ ವ್ಯವಸ್ಥೆಯನ್ನು ಬದಲಾಯಿಸಿ, ಹೊಸ ವ್ಯವಸ್ಥೆ ಯತ್ತ ಕೊಂಡೊಯ್ದ ಜನನಾಯಕ ಸುಂದರೇಶ್ ಎಂದ ಅವರು ಯಾವುದೇ ಜಾತಿಗೂ ಸೀಮಿತರಾಗದೇ ಜಾತ್ಯಾತೀತವಾಗಿ ಬಡವರ ಪರವಾಗಿ ಸ್ಪಂದಿಸುವ ಆಲೋಚನೆ ಹೊಂದಿದ ಬಿಕೆಎಸ್ರಿಗೆ ಮಲೆನಾಡು ರತ್ನ ಎಂಬ ಬಿರುದು ನೀಡಬೇಕು ಎಂದು ಆಶಿಸಿದರು.
ಈ ಸಂದಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ರಾಧಾಸುಂದರೇಶ್, ಸಹ ಕಾರ್ಯದರ್ಶಿ ಜಿ.ರಘು, ತಾಲ್ಲೂಕು ಅಧ್ಯಕ್ಷ ಸಿ.ವಸಂತ್ಕುಮಾರ್, ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಸದಸ್ಯ ವಿಜಯ್ಕುಮಾರ್, ಮುಖಂಡರುಗಳಾದ ಸೋಮೇಗೌಡ, ಲೋಬೋ, ತಂಪಿತಗೌಡ, ಜಯಕಜುಮಾರ್, ಮಂಜೇಗೌಡ, ಹೆಡ ದಾಳು ಕುಮಾರ್, ಜಾನಕಿ ಮತ್ತಿತರರಿದ್ದರು.
B.K.Sundaresh was the one who shaped life for the exploited class.