ಚಿಕ್ಕಮಗಳೂರು: ತಾಲ್ಲೂಕಿನ ತೇಗೂರು ಸಮೀಪವಿರುವ ಪಿಎಂಶ್ರೀ ಕೇಂದ್ರಿಯ ವಿದ್ಯಾಲಯಕ್ಕೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಂಗಳವಾರ ದಿಡೀರ್ ಭೇಟಿ ನೀಡಿ ಶಾಲಾ ಆಡಳಿತ ವ್ಯವಸ್ಥೆ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಬಗ್ಗೆ ಸಮಗ್ರ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು ಶಾಲಾ ಆಡಳಿತಕ್ಕೆ ಶಿಕ್ಷಕರು, ಸಿಬ್ಬಂದಿಗಳು ನೇಮಿಸುವುದು, ಮಕ್ಕಳನ್ನು ಶಾಲೆಗೆ ದಾಖಲಿಸುವ ಹಾಗೂ ಮೂಲಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಶಾಲಾ ಪೋಷಕರ ಸಂಘದೊಂ ದಿಗೆ ಸಮಗ್ರ ಚರ್ಚೆ ನಡೆಸಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವ ಮೂಲಕ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಮುಖ್ಯವಾಗಿ ವಿದ್ಯಾಲಯದಲ್ಲಿ ಹೆಚ್ಚುವರಿಯಾಗಿ ಪಿಯು ಶಿಕ್ಷಣ ಆರಂಭಿಸುವ ಕಲ್ಪನೆ ಮತ್ತು ಹೊಸ ವಿದ್ಯಾಭ್ಯಾಸದ ನೀತಿಯನ್ನು ಅನುರಿಸುವ ಅಗತ್ಯವಿದೆ. ಅಲ್ಲದೇ ೧ ರಿಂದ ೧೦ನೇ ತರಗತಿವರೆಗೆ ವಿದ್ಯಾರ್ಥಿ ಗಳಿಗೆ ರೂಪಿಸಿರುವ ಎಲ್ಲಾ ಯೋಜನೆಗಳನ್ನು ಅನುಷ್ಟಾನಗೊಳ್ಳಲಿದೆ ಎಂದು ಹೇಳಿದರು.
ವಿದ್ಯಾಲಯದಲ್ಲಿ ಬಾಲ್ಯಮಕ್ಕಳಿಗೆ ಎಲ್ಕೆಜಿ ಮತ್ತು ಯುಕೆಜಿ ಮಾದರಿಯಲ್ಲಿ ಶಾಲೆಗಳನ್ನು ತೆರೆಯುವ ಅಲೋಚನೆಯಿದೆ. ಈ ಎಲ್ಲಾ ವ್ಯವಸ್ಥೆ ಕೈಗೊಳ್ಳಲು ಪಟ್ಟಿಗಳನ್ನು ತಯಾರಿಸಲಾಗುತ್ತಿದೆ. ಮುಂದೆ ಅಧಿವೇಶ ನದಲ್ಲಿ ಅವಶ್ಯಕತೆಗಳನ್ನು ಚರ್ಚಿಸಿ ಸಮಗ್ರ ಅನುಕೂಲತೆ ತಕ್ಕಂತೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ವ್ಯವಸ್ಥೆಯಿದೆ. ಕೆಲವು ವಿಷಯಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೋಧಿಸಲಾಗುತ್ತಿದೆ. ಜೊತೆಗೆ ಶಾಲೆಯ ಹೊರಾಂಗಣದ ರಸ್ತೆ ಡಾಂಬರೀಕರಣಗೊಳಿಸುವ ನಿಟ್ಟಿನಲ್ಲಿ ಪೋಷಕರ ಆಗ್ರಹದಂತೆ ಸಲಹೆಗಳನ್ನು ಪಡೆದು ಅನುದಾನ ಸಂ ಗ್ರಹಿಸಿ ಸೂಕ್ತ ರಸ್ತೆಗೆ ಸಹಕರಿಸಲಾಗುವುದು ಎಂದರು.
ಶಾಲೆಯಲ್ಲಿ ಶಾಶ್ವತ ಪ್ರಾಂಶುಪಾಲರನ್ನು ನೇಮಿಸುವ ಸಂಬಂಧ ಪಾಲಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವ ರು ಕೇಂದ್ರಿಯ ವಿದ್ಯಾಲಯಗಳಲ್ಲಿ ಬೇರೆ ರಾಜ್ಯಗಳಿಂದ ಶಿಕ್ಷಕರನ್ನು ಹಾಕುವ ಜೊತೆಗೆ ವರ್ಗಾವಣೆಯಾಗ ಲಿದೆ. ಕೇಂದ್ರ ಸರ್ಕಾರ ವಿದ್ಯಾಲಯದ ನಿಯಮದ ಪ್ರಕಾರ ಶಿಕ್ಷಕರು ಬಾರದಿದ್ದ ವೇಳೆಯಲ್ಲಿ ತುರ್ತಾಗಿ ಪರಿ ಣಿತ ಶಿಕ್ಷಕರನ್ನು ನೇಮಿಸಿ ಬೋಧಿಸುವ ಕಾರ್ಯ ಮಾಡಲಾಗಿದ್ದು ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಇನ್ನೊಂದು ವರ್ಷ ಸಮಯಾವಕಾಶಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರಿಯ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್, ಮುಖಂಡರಾದ ದೀಪಕ್ದೊಡ್ಡಯ್ಯ, ಪ್ರದೀಪ್, ಶಶಿಆಲ್ದೂರು, ರಾಕೇಶ್ ಹಾಗೂ ಮಕ್ಕಳು ಪೋಷಕರು ಹಾಜರಿದ್ದರು.
MP Kota Srinivas Pujari Didir visit to PM Shri Kendriya Vidyalaya