ಚಿಕ್ಕಮಗಳೂರು: ಕಾಫಿನಾಡು ಜಿಲ್ಲೆಯಲ್ಲಿ ೨೦೨೩ನೇ ಸಾಲಿನಲ್ಲಿ ನಡೆದಿರುವ ಅಪರಾಧ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಕಳೆದ ೨೦೨೪ ರಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಂದು ವ?ದಲ್ಲಿ ಒಟ್ಟು ೫೯೦೪ ಪ್ರಕರಣಗಳು ದಾಖಲಾಗಿವೆ. ೨೦೨೩ರಲ್ಲಿ ಜಿಲ್ಲೆಯಲ್ಲಿ ೬೨೪೧ ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವ? ೫೯೦೪ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಳೆದ ವ? ೭೭೫ ಅಸ್ವಾಭಾವಿಕ ಸಾವುಗಳು ಸಂಭವಿಸಿದ್ದು, ೫೫ ವಂಚನೆ ಪ್ರಕರಣಗಳು ದಾಖಲಾಗಿವೆ. ಕೆ.ಪಿ. ಆಕ್ಟ್ ಅಡಿಯಲ್ಲಿ ೨೦೨೩ರಲ್ಲಿ ೮೭೧೨ ಕೇಸುಗಳು ದಾಖಲಾಗಿದ್ದು, ಈ ವ?ದಲ್ಲಿ ೧೨೩೬೫ ಪ್ರಕರಣಗಳು ದಾಖಲಾಗಿವೆ. ಕೆ.ಪಿ.ಆಕ್ಟ್ ಅಡಿಯಲ್ಲಿ ಪ್ರಕರಣ ಹೆಚ್ಚು ಮಾಡುವುದು ಜನರಲ್ಲಿ ಕಾನೂನಿನ ಬಗ್ಗೆ ಅರಿವಾಗಲಿ ಎಂಬ ಕಾರಣಕ್ಕಾಗಿ ಎಂದ ಅವರು, ಅದೇ ರೀತಿ ಧೂಮಪಾನ ವಿರುದ್ಧದ ಕೇಸಗಳ ಸಂಖ್ಯೆಯೂ ಕೂಡ ಹೆಚ್ಚಳವಾಗಿದೆ. ಅಂದರೆ, ೧೮೫೨ ಪ್ರಕರಣ ದಾಖಲು ಮಾಡಲಾಗಿದೆ ಎಂದು ವಿವರಿಸಿದರು.
ಕಳೆದ ವ? ಜಿಲ್ಲೆಯಲ್ಲಿ ೨೮ ಕೊಲೆ, ೫೧ ಕೊಲೆಗೆ ಯತ್ನ, ೪೪ ದೊಂಬಿ ಹಾಗೂ ೫೨೧ ಹಲ್ಲೆ ಪ್ರಕರಣಗಳು ನಡೆದಿವೆ. ಕಳೆದ ವ?ಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೊಲೆ ಪ್ರಕರಣಗಳು ಸಂಭವಿಸಲು ಪ್ರಮುಖವಾದ ಕಾರಣ ಅನೈತಿಕ ಸಂಬಂಧ, ಕುಟುಂಬ ಸದಸ್ಯರ ನಡುವಿನ ಕಲಹ, ಆಸ್ತಿ ವಿವಾದ, ಕ್ಷುಲ್ಲಕ ಕಾರಣ, ಹಳೆ ದ್ವೇ?, ಮಾನಸಿಕ ಅಸ್ವಸ್ಥ ವ್ಯಕ್ತಿಯಿಂದ ಕೊಲೆಗಳು ಆಗಿವೆ ಎಂದು ತಿಳಿಸಿದರು.
ಸ್ವತ್ತು ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವ? ೪ ಡಕಾಯತಿ, ೪ ಸುಲಿಗೆ, ೫ ಸರ ಅಪಹರಣ, ೨೨ ಹಗಲು ಕಳ್ಳತನ, ೭೪ ರಾತ್ರಿ ಮನೆ ಕಳ್ಳತನ, ೧೬ ಮನೆ ಕಳುವು, ೧೯೪ ಸಾಮಾನ್ಯ ಕಳವು ಪ್ರಕರಣಗಳು ದಾಖಲಾಗಿವೆ. ೨೦೨೩ಕ್ಕೆ ಹೋಲಿಕೆ ಮಾಡಿದರೆ ಈ ಎಲ್ಲಾ ಪ್ರಕರಣಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ.
ಕಳವು ಪ್ರಕರಣಗಳು ಇಳಿಮುಖವಾಗಲು ಕಾರಣ, ರಾತ್ರಿ ವೇಳೆಯಲ್ಲಿ ಓಡಾಡುವವರ ಮೇಲೆ ನಿಗಾ ಇಡಲಾಗಿದ್ದು, ಸ್ಥಳದಲ್ಲೇ ಅವರ ಕೈ ಬೆರಳಚ್ಚು ಪಡೆದು, ಈ ಹಿಂದೆ ಕಳವು ಆಗಿರುವ ಪ್ರಕರಣಗಳಲ್ಲಿ ಪಡೆದಿರುವ ಬೆರಳುಗಳ ಗುರುತು ಒಂದಕ್ಕೊಂದು ಹೋಲಿಕೆಯಾದರೆ ಅಂತಹ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದ ಅವರು, ೨೦೨೩ರಲ್ಲಿ ೮೩೦೦ ವ್ಯಕ್ತಿಗಳನ್ನು ಈ ಮಾದರಿಯಲ್ಲಿ ಪರಿಶೀಲನೆ ನಡೆಸಿದಾಗ ೧೦೭ ವ್ಯಕ್ತಿಗಳನ್ನು ಪತ್ತೆಹಚ್ಚಲಾಗಿದೆ. ಈ ವ?ದಲ್ಲಿ ೨೬೬೮೪ ಮಂದಿಯನ್ನು ಪರಿಶೀಲಿಸಲಾಗಿದ್ದು ಈ ಪೈಕಿ ೪೨೬ ವ್ಯಕ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.
೨೦೨೩ರಲ್ಲಿ ೬.೨೬ ಕೋಟಿ ರೂಗಳ ಸ್ವತ್ತು ಕಳುವಾಗಿದ್ದು, ಈ ಪೈಕಿ ೨.೧೬ ಕೋಟಿ ರೂಗಳ ಸ್ವತ್ತನ್ನು ವಶಕ್ಕೆ ಪಡೆದು, ಇವುಗಳಲ್ಲಿ ೧.೯೭ ಕೋಟಿ ರೂಗಳ ಸ್ವತ್ತನ್ನು ಹಿಂದಿರುಗಿಸಲಾಗಿದೆ. ೨೦೨೪ರಲ್ಲಿ ೪.೧೮ ಕೋಟಿ ರೂಗಳ ಸ್ವತ್ತುಗಳು ಕಳುವಾಗಿದ್ದು, ಈ ಪೈಕಿ ೨.೫೧ ಕೋಟಿ ರೂಗಳ ಸ್ವತ್ತು ವಶಕ್ಕೆ ಪಡೆದು, ಸಂಬಂಧಪಟ್ಟ ಮಾಲೀಕರಿಗೆ ೧.೫೪ ಕೋಟಿ ರೂಗಳ ಸ್ವತ್ತನ್ನು ನೀಡಲಾಗಿದೆ ಎಂದು ಹೇಳಿದರು.
ದಾವಣಗೆರೆ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಸಂಬಂಧಪಟ್ಟ ೨೯ ವಿವಿಧ ಪ್ರಕರಣಗಳಲ್ಲಿ ೨೯.೫೩ ಲಕ್ಷ ರೂಗಳ ಸ್ವತ್ತನ್ನು ಚಿಕ್ಕಮಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿಸಿದರು.
ಕಳೆದ ವ? ಜಿಲ್ಲೆಯಲ್ಲಿ ಒಂದು ವರದಕ್ಷಿಣಿ ಸಾವು ಸಂಭವಿಸಿದ್ದು, ೯ ಅತ್ಯಾಚಾರ, ೬ ವರದಕ್ಷಿಣಿ ಕಿರುಕುಳ, ೭೭ ಪತಿ ಮತ್ತು ಸಂಬಂಧಿಕರಿಂದ ಕಿರುಕುಳ, ೧೫೨ ಪ್ರಕರಣಗಳು ಮಹಿಳೆಯ ಶೀಲಭಂಗ ಮಾಡುವ ಉದ್ದೇಶದಿಂದ ಅಪರಾಧಿ ಬಲ ಪ್ರಯೋಗ ಮಾಡುವ ಕೇಸುಗಳಾಗಿವೆ ಎಂದರು.
ಜಿಲ್ಲೆಯಲ್ಲಿ ಒಂದು ಕೊಲೆ, ೬೯ ಅಪಹರಣ, ೧೨೧ ಪೋಕ್ಸೋ, ೨ ಬಾಲ್ಯ ವಿವಾಹ ತಡೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಕೃ?ಮೂರ್ತಿ, ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ, ತರೀಕೆರೆ ಡಿವೈಎಸ್ಪಿ ಹಾಲಮೂರ್ತಿರಾವ್ ಉಪಸ್ಥಿತರಿದ್ದರು.
Number of crime cases in Chikkamagaluru district declines