ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಬನಶಂಕರಿ ಅಮ್ಮನವರ ಬನದ ಹುಣ್ಣಿಮೆಯ ಜಾತ್ರಾಮಹೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ದೇವಾಂಗ ಸಂಘ ಮತ್ತು ಬನಶಂಕರಿ ಮಹಿಳಾ ಸಂಘದ ವತಿಯಿಂದ ಆಯೋಜಿಸಿದ್ದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಳ್ಳುವ ಮೂಲಕ ಬನಶಂಕರಿ ದೇವಿಯ ಕೃಪೆಗೆ ಪಾತ್ರರಾದರು.
ದೇವಾಂಗ ಸಂಘದ ಅಧ್ಯಕ್ಷ ಭಗವತಿಹರೀಶ್ ಮಾತನಾಡಿ ದೇವಾಂಗ ಸಮಾಜದ ಕುಲದೇವತೆ ಬನಶಂಕರಿ ಅಮ್ಮನವರ ೧೦ ನೇ ವರ್ಷದ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದ್ದು, ವಿಶೇಷ ಪೂಜೆ, ಹೋಮ, ಮದ್ಯಾಹ್ನ ಅನ್ನ ಸಂತರ್ಪಣೆ ನೆಡೆಸಲಾಗುತ್ತಿದ್ದು, ಸಂಜೆ ೫ ಗಂಟೆಗೆ ರಾಜ ಬೀದಿಗಳಲ್ಲಿ ಬನಶಂಕರಿ ಅಮ್ಮನವರ ಉತ್ಸವ ಮೆರವಣಿಗೆ ಮತ್ತು ೮ ಗಂಟೆಗೆ ಪ್ರಸಾದ ವಿತರಿಸಲಾಗುವುದು,
ಅನಂತ ಶರ್ಮ ಅವರ ನೇತೃತ್ವದಲ್ಲಿ ಕುಲದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗಣಪತಿ ಪೂಜೆ, ಬನಶಂಕರಿ ಹೋಮ ಮಂತ್ರಗಳ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ ೧ ಗಂಟೆಯ ಪೂರ್ಣಾಹುತಿ ಬಳಿಕ ಪ್ರಸಾದ ವಿನಿಯೋಗ ಮಾಡಲಾಯಿತು ಎಂದು ತಿಳಿಸಿದರು.
ದೇವಾಂಗ ಸಂಘದ ಗೌರವಾಧ್ಯಕ್ಷ ಶ್ರೀನಿವಾಸ್ ಮಾತನಾಡಿ ದೇವಾಂಗ ಸಂಘವು ಬನದ ಹುಣ್ಣಿಮೆಯ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವಕ್ಕೆ ವಿವಿಧ ಭಾಗಗಳಿಂದ ಅನೇಕ ಭಕ್ತರು ಪ್ರತಿ ವರ್ಷ ಆಗಮಿಸುತ್ತಿದ್ದರು ಲೋಕಕಲ್ಯಾಣಾಥವಾಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿ ದೇವಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಬನಶಂಕರಿ ಅಮ್ಮನವರ ೧೦ನೇ ವರ್ಷದ ಬನದ ಹುಣ್ಣಿಮೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದ್ದು, ಬಾದಾಮಿ ಬನಶಂಕರಿ ದೇವಾಲಯದಲ್ಲಿ ಇಂದು ಜಾತ್ರೋತ್ಸವ ನಡೆಯುತ್ತಿದ್ದು, ಇಂದು ಬೆಳಿಗ್ಗೆ ಆಂಜನೇಯ ದೇವಸ್ಥಾನದಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸಿ ಹೋಮ ನಡೆಸಲಾಯಿತು, ಸಂಜೆ ೫ ಗಂಟೆಗೆ ಬನಶಂಕರಿ ಅಮ್ಮನವರ ಉತ್ಸವ ನಡೆಸಲಾಗುತ್ತಿದೆ ಹಾಗೂ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣಕೇಶವಮೂರ್ತಿ ಮಾತನಾಡಿ ಕಳೆದ ೨೦೧೩ ರಿಂದ ಬನಶಂಕರಿ ಅಮ್ಮನವರ ಜಾತ್ರಾಮಹೋತ್ಸವವನ್ನು ದೇವಾಂಗ ಸಮಾಜದ ಬಂಧುಗಳು ಒಗ್ಗಟ್ಟಾಗಿ ಆಚರಣೆ ಮಾಡುತ್ತಾ ಬಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಮಡಿಲು ತುಂಬುವ ಸೇವೆ, ಪ್ರಾರ್ಥನೆ, ಮೆರವಣಿಗೆ ಭಕ್ತರನ್ನು ಸೆಳೆಯುವಂತೆ ಮಾಡುತ್ತಿತ್ತು ಎಂದರು. ಹೋಮ ಕಾರ್ಯಕ್ರಮದಲ್ಲಿ ನಾಗಶ್ರೀ ತ್ಯಾಗರಾಜ್ ಭಾಗವಹಿಸಿದ್ದರು,
ಈ ಸಂಧರ್ಭದಲ್ಲಿ ಉಪಾಧ್ಯಕ್ಷರಾದ ಸಿ.ಎನ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ. ತ್ಯಾಗರಾಜ್, ಖಜಾಂಚಿ ಜೆಎಸ್ ರವಿಶಂಕರ್, ಲೋಹಿತ್, ಕೃಷ್ಣಮೂರ್ತಿ, ಗೌರೀಶ್, ಚಂದ್ರು ನಿರ್ದೇಶಕರಾದ ರಾಮಚಂದ್ರ, ಮೋಹನ್ಕುಮಾರ್, ಗೋವಿಂದಶೆಟ್ಟಿ, ರಾಜಕುಮಾರ್, ಪ್ರಕಾಶ್, ನವೀನ್ಕುಮಾರ್, ಶಿವರಾಜ್, ನಗರಸಭೆ ಸದಸ್ಯರಾದ ದೀಪರವಿಕುಮಾರ್, ಧನಲಕ್ಷ್ಮೀಗೋಕುಲ್, ಉಪಾಧ್ಯಕ್ಷೆ ರಾಧರಾಜ್ಕುಮಾರ್, ನಿರ್ದೇಶಕರಾದ ಭಾಗ್ಯಮೋಹನ್, ಶ್ಯಾಮಲಾರಾಜು, ಮಂಜುಳಾಪುಟ್ಟರಾಜು, ರತ್ನರವಿಕುಮಾರ್ ಉಪಸ್ಥಿತರಿದ್ದರು.
The grand festival of Sri Banashankari Amman was held