ಚಿಕ್ಕಮಗಳೂರು: ಅಪಘಾತ, ಸ್ಟ್ರೋಕ್ ಮತ್ತಿತರೆ ತುರ್ತು ಸಂದರ್ಭವನ್ನು ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ವೇಳೆ ಗಾಯಾಳುವನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸದಿದ್ದಲ್ಲಿ ಜೀವಕ್ಕೆ ಅಪಾಯವಿದೆ. ಈ ನಿಟ್ಟಿನಲ್ಲಿ ನಗರದ ಕೆಆರ್ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾಗಿರುವ ನ್ಯೂರೋ ಸರ್ಜಿಕಲ್ ಕೇಂದ್ರ ಜನತೆಗೆ ಸಾಕಷ್ಟು ಅನುಕೂಲ ಕಲ್ಪಿಸಲಿದೆ ಎಂದು ಮ್ಯಾಕ್ಸ್ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ.ನಾರಾಯಣ ಪಣಜಿ ಹೇಳಿದರು.
ನಗರದ ಕೆಆರ್ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭವಾದ ನ್ಯೂರೋ ಸರ್ಜಿಕಲ್ ಸೆಂಟರ್ನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕಮಗಳೂರಿಗೆ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಸಾಕಷ್ಟಿತ್ತು. ದಕ್ಷಿಣ ಕರ್ನಾಟಕದ ಶಿವಮೊಗ್ಗದಲ್ಲಿ ಮೊದಲ ನ್ಯೂರೋ ಸರ್ಜಿಕಲ್ ಕೇಂದ್ರ ಆರಂಭವಾದಾಗ ಅತ್ಯಾಧುನಿಕ ಉಪಕರಣಗಳಿರಲಿಲ್ಲ ಎಂದರು.
ಇಲ್ಲಿ ಉತ್ತಮ ಐಸಿಯು, ಎಂಆರ್ಐ, ಸಿಟಿ ಸ್ಕ್ಯಾನ್ ಮತ್ತಿತರೆ ಅನೇಕ ಆಧುನಿಕ ಸೌಲಭ್ಯಗಳಿವೆ. ಡಾ.ಅವಿನಾಶ್ ಎಸ್.ಕೆ. ಮುಂದಾಳ್ವದಲ್ಲಿ ಇಲ್ಲಿನ ನ್ಯೂರೋ ಸರ್ಜಿಕಲ್ ಸೆಂಟರ್ ಉತ್ತಮ ಕೇಂದ್ರವಾಗಿ ಹೊರಹೊಮ್ಮಲಿದೆ. ಚಿಕಿತ್ಸೆಯ ಯಾವುದೇ ಫಲಿತಾಂಶ ಉತ್ತಮವಾಗಿ ಬರಬೇಕಾದರೆ ಗೋಲ್ಡನ್ ಅವರ್ನಲ್ಲಿ ಆಸ್ಪತ್ರೆಗೆ ಬರಬೇಕು. ಇಲ್ಲಿ ಉತ್ತಮವಾದ ಟ್ರಾಮಾ ಟೀಮ್ ಇದೆ. ಇದರ ಸದುಪಯೋಗವನ್ನು ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ನ್ಯೂರೋ ತಜ್ಞ ಡಾ.ಅವಿನಾಶ್ ಎಸ್.ಕೆ. ಮಾತನಾಡಿ, ಬ್ರೈನ್ ಹ್ಯಾಮರೇಸ್, ಸ್ಪೈನಲ್ ಡಿಸ್ಕ್ಗೆ ಹಾನಿ, ಪಿಡಿಯಾಟ್ರಿಕ್ ನ್ಯೂರೋ ಸರ್ಜರಿ, ಮೆದುಳಿನ ರಕ್ತನಾಳದ ಕಾಯಿಲೆಗಳಿಗೆ ಈ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದೆ. ಉತ್ತಮ ಐಸಿಯು ಇದೆ. ಜನತೆ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕೆಆರ್ಎಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನ್ಯೂರೋ ಸರ್ಜಿಕಲ್ ಕೇಂದ್ರದ ಅಗತ್ಯತೆ ಮನಗಂಡು ಈ ಕೇಂದ್ರ ತೆರೆದಿದ್ದು, ಡಾ.ಅವಿನಾಶ್ ಅವರು ದೊಡ್ಡ ಮನಸ್ಸು ಮಾಡಿ ಇಲ್ಲಿ ಸೇವೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಈ ಹಿಂದೆ ಹೆಡ್ ಇಂಜುರಿ, ಬ್ರೈನ್ ಡ್ಯಾಮೇಜ್ ಆದಲ್ಲಿ ಹಾಸನ ಅಥವಾ ಶಿವಮೊಗ್ಗಕ್ಕೆ ಕೆರೆದುಕೊಂಡು ಹೋಗಬೇಕಿತ್ತು. ಆ ವೇಳೆ ಎಷ್ಟೋ ಮಂದಿ ಮಾರ್ಗಮಧ್ಯೆ ಅಸುನೀಗಿರುವ ನಿದರ್ಶನವಿದೆ. ಹೀಗಾಗಿ ನಗರದಲ್ಲಿ ನ್ಯೂರೋ ಸರ್ಜಿಕಲ್ ಕೇಂದ್ರ ತೆರೆದಿದ್ದು, ಇಲ್ಲಿ ಎಲ್ಲ ತರಹದ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ತಪಾಸಣೆ, ಥೆರಫಿಗಳು ದೊರೆಯುತ್ತವೆ ಎಂದು ತಿಳಿಸಿದರು.
ಒಂದೂವರೆ ಕೋಟಿ ರೂ ವೆಚ್ಚದ ಮೈಕ್ರೋಸ್ಕೋಪ್, ಅತ್ಯಾಧುನಿಕ ಐಸಿಯು, ಯಂತ್ರೋಪಕರಣಗಳು ಇಲ್ಲಿವೆ. ಸ್ಟ್ರೋಕ್ ಆಗಿ ೩-೪ ಗಂಟೆ ಒಳಗೆ ಕರೆತಂದರೆ ಪ್ರಾಣಾಪಾಯದಿಂದ ಪಾರು ಮಾಡಬಹುದು. ಹೆಡ್ ಇಂಜುರಿ ಆದಲ್ಲಿ ಗಾಯಾಳು ಶೀಘ್ರ ಕರೆತಂದಲ್ಲಿ ಗುಣಮುಖರನ್ನಾಗಿ ಮಾಡಬಹುದು. ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಮನವಿ ಮಾಡಿದರು.
ಡಾ.ಮಲ್ಲಿಕಾರ್ಜುನ, ಡಾ.ವಿನಯ್ ಮಾತನಾಡಿದರು. ಶೃತಿಯೋಗೀಶ್ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿ, ಜೆಸ್ಸಿ ವಂದಿಸಿದg
The newly opened Neurosurgical Center at KRS Multi-Specialty Hospital was inaugurated today.