ಚಿಕ್ಕಮಗಳೂರು: ಇಲ್ಲಿನ ಸಖರಾಯಪಟ್ಟಣದಲ್ಲಿ ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ನಡೆಸುತ್ತಿದ್ದ ಶ್ರೀರಾಮ ಕ್ಲಿನಿಕ್ಅನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ಮೊಹರು ಹಾಕಿ ಮುಚ್ಚಿಸಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅಂದರಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವರದರಾಜು. ಆರ್ ಅವರು ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಭೇಟಿನೀಡಿದ ತಂಡಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕ್ಲಿನಿಕ್ನ್ನು ಬಂದ್ ಮಾಡಲಾಗಿದೆ,
ಈ ಸಂಬಂಧ ಜಿಲ್ಲಾ ಅಧಿಕಾರಿ, ಅಧ್ಯಕ್ಷರು ಕೆಪಿಎಂಇ ನೋಂದಣಿ ಪ್ರಾಧಿಕಾರ ಇವರಿಗೆ ಸೂಕ್ತ ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ ಎಂದು ಕೆಪಿಎಂಇ ನೋಡಲ್ ಅಧಿಕಾರಿ ಡಾ. ಶಶಿಕಲಾ.ಎಂ ಇವರು ತಿಳಿಸಿದ್ದಾರೆ.
ವೈದ್ಯಾಧಿಕಾರಿಗಳ ತಂಡದಲ್ಲಿ ಜಿಲ್ಲಾ ಆರ್ಸಿಹೆಚ್ಓ, ಪ್ರಭಾರಿ ಡಿಹೆಚ್ಓ ಡಾ. ಮಂಜುನಾಥ್ ಹೆಚ್.ಕೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಶಶಿಕಲಾ, ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಟಿ.ಪಿ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು
Unauthorized clinic in Sakharayapattana shut down