ಚಿಕ್ಕಮಗಳೂರು: ಪತ್ನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಕಳಸ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ನಿತ್ಯಾನಂದಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ನಿತ್ಯಾನಂದ ಅವರ ಪತ್ನಿ ಉಡುಪಿ ಮೂಲದ ಅಮಿತಾ ಅವರು ಶನಿವಾರ ಕಳಸ ಠಾಣೆಗೆ ದೂರು ನೀಡಿದ್ದರು. ‘ನನ್ನ ಮೇಲೆ ನನ್ನ ಪತಿ ಹಲ್ಲೆ ನಡೆಸಿ, ದೌರ್ಜನ್ಯ ಎಸಗಿದ್ದಾರೆ’ ಎಂದು ದೂರಿದ್ದರು. ಪತ್ನಿ ವಿರುದ್ಧ ಅವರು ಕೂಡ ಪ್ರತಿ ದೂರು ದಾಖಲಿಸಿದ್ದರು.
ಮರು ದಿನವೇ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಆದೇಶ ಹೊರಡಿಸಿದ್ದಾರೆ. ‘ಪತ್ನಿ ನೀಡಿರುವ ದೂರು ಮಾತ್ರ ಅಮಾನತಿಗೆ ಕಾರಣವಲ್ಲ. ಅಶಿಸ್ತಿನ ಬೇರೆ ಪ್ರಕರಣಗಳೂ ಇವೆ’ ಎಂದು ಎಸ್ಪಿ ಸ್ಪಷ್ಟಪಡಿಸಿದರು.
Kalasa Police Station Sub-Inspector suspended