ಚಿಕ್ಕಮಗಳೂರು: ಕ್ರೀಡಾಕೂಟದಲ್ಲಿ ಭಾಗವವಿಸುವುದರಿಂದ ಕ್ರಿಯಾಶೀಲತೆಯ ಜೊತೆಗೆ ಸಮಾಜದಲ್ಲಿ ಇತರರೊಂದಿಗೆ ಪರಸ್ಪರ ಸೌಹಾರ್ದತೆ ಹೆಚ್ಚಿಸುತ್ತದೆ ಎಂದು ವಾಣಿಜ್ಯ ತೆರಿಗೆ ಆಯುಕ್ತರಾದ ಟಿ.ಕೆ ಸುನಿಲ್ ಕುಮಾರ್ ಹೇಳಿದರು.
ಜಿಲ್ಲಾ ಆದಾಯ ಮತ್ತು ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಕ್ರೀಡೆಯು ಉತ್ತಮ ಮಾರ್ಗವಾಗಿದೆ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯಯುತ ಜೀವನ ನಿರ್ವಹಿಸಿ ಎಂದರು.
ಆದಾಯ ತೆರಿಗೆ ಅಧಿಕಾರಿ ಕೆ.ಯು ಪ್ರವೀಣ್ಮಾತನಾಡಿ ಅಧಿಕಾರಿಗಳು ಕೆಲಸದ ಒತ್ತಡದಿಂದ ಹೊರಬರಲು ಪ್ರತಿನಿತ್ಯ ಕ್ರೀಡಾಭ್ಯಾಸ ಮಾಡಬೇಕು ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಿಹಿಸುವಿಕೆ ಮುಖ್ಯ ಎಂದರು.
ಜಿಲ್ಲಾ ಆದಾಯ ಮತ್ತು ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷೆ ಶ್ಯಾಮಲಾ ಎಂ ರಾವ್ ಮಾತನಾಡಿ ಕ್ರೀಡೆಯಿಂದ ದೇಹ ಮತ್ತು ಮನಸ್ಸನ್ನು ಸಧೃಡವಾಗಿರಿಸಿಕೊಂಡು ಆರೋಗ್ಯವಂತರಾಗಿರಬಹುದು. ಆಡಿಟರ್ಸ್ ಅಸೋಶಿಯೆಷನ್ ವತಿಯಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಕ್ರೀಡಾಪಟುಗಳ ಉತ್ಸಾಹ ಮತ್ತು ಭಾಗವಹಿಸುವಿಕೆಯು ಇನ್ನು ಹೆಚ್ಚಿನ ಪಂದ್ಯಾವಳಿಗಳನ್ನು ಆಯೋಜಿಸಲು ಪ್ರೆರೇಪಿಸುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಎನ್ ಮಂಜುನಾಥ್, ಖಜಾಂಚಿಗಳಾದ ಆಡಿಟರ್ ರವಿ, ಆದಾಯ ತೆರಿಗೆ ಅಧಿಕಾರಿಗಳಾದ ದೀಪಕ್, ಚಂದ್ರು, ವಿನಿತ್ ಇತರರು ಉಪಸ್ಥಿತರಿದ್ದರು.
Cricket tournament program organized at BGS Stadium, AIT College