ಚಿಕ್ಕಮಗಳೂರು:ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕರಾಗಿ ಎಂ.ಎಸ್ ಜಯಚಂದ್ರ ಹಾಗೂ ಉಪಾಧ್ಯಕ್ಷರಾಗಿ ಷಕೀಲ್ಅಹಮದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜ್ ಡಿ.ಟಿ. ಘೋಷಿಸಿದರು
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಮಾಜ ಸೇವಕರಾದ ಮೈಲಿಮನೆ ಪೂರ್ಣೆಶ್ ಅಭಿನಂದಿಸಿ ಮಾತನಾಡಿ ರೈತರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿಸುತ್ತಾರೆಂಬ ಬಹಳ ನಿರೀಕ್ಷೆ ಇದೆ ಎಂದ ಅವರು ತಮ್ಮ ಆಡಳಿಯ ಅವದಿಯಲ್ಲಿ ಹೆಚ್ಚು ಪರೋಪಕಾರಿ ಕಾರ್ಯಗಳನ್ನು ನಿರ್ವಹಿಸಲಿ ಎಂದು ತಿಳಿಸಿದರು.
ಸಹಕಾರ ಸಂಘದ ವತಿಯಿಂದ ಕೃಷಿಕರಿಗೆ ವ್ಯಾಪಾರಸ್ಥರಿಗೆ ಮತ್ತು ವಾಹನ ಸಾಲವನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸಂಘದ ಅಭಿವೃದ್ಧಿಯ ಜೊತೆಗೆ ನೀವು ಸಹ ಅಭಿವೃದ್ಧೀ ಹೊಂದಬೇಕೆಂದು ತಿಳಿಸಿದರು.
ಮೈಲಿಮನೆ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್ಗೌಡ ಮಾತನಾಡಿ ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಸುಮಾರು ೧೦೦ ವರ್ಷಗಳ ಇತಿಹಾಸವಿದೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕರುಗಳು ಈ ಸಂಘದ ಬೆಳವಣಿಗೆಗೆ ಸಹಕರಿಸಬೇಕು ರೈತರ ಯಾವ ಸಮಸ್ಯೆಗಳನ್ನು ಸಾಮಾನ್ಯವಾಗಿ ಪರಿಗಣಿಸಿ ಕಡೆಗಣಿಸದೇ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥಿತವಾದ ಪರಿಹಾರ ನೀಡಿ ಸಂಘವನ್ನು ಇನ್ನಷ್ಟು ಭದ್ರಗೊಳಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ಜಯಚಂದ್ರ ಮಾತನಾಡಿ. ಸಂಘದ ಸದಸ್ಯರೆಲ್ಲರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಈ ಸಹಕಾರ ಸಂಘದಲ್ಲಿ ೪ ಸಾವಿರಕ್ಕು ಹೆಚ್ಚು ಸದಸ್ಯರಿದ್ದು ಅಗತ್ಯ ಇರುವವರಿಗೆ ಸಾಲ ಸೌಲಭ್ಯಗಳನ್ನು ಎಲ್ಲಾ ನಿರ್ದೇಶಕರುಗಳ ಸಹಕಾರ ಪಡೆದು ನೀಡುವುದಾಗಿ ತಿಳಿಸಿದರು.
ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಷಕೀಲ್ ಅಹಮದ್ ಮಾತನಾಡಿ. ಸಂಘದ ಉಪಾಧ್ಯಕ್ಷ ಸ್ತಾನ ದೊರಕಿರುವುದು ಸಂತೋಷವಾಗಿದೆ ನನ್ನ ಕರ್ತವ್ಯ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು
ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಬಿ.ಬಿ ನಿಂಗಯ್ಯ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಟಿ.ಡಿ ಮಲ್ಲೇಶ್, ನಿರ್ದೇಶಕರಾದ ರತೀಶ್ ಕುಮಾರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಧ ಸತೀಶ್ ನಿರ್ದೇಶಕರಾದ ಮುಗುಳುವಳ್ಳಿ ನಿರಂಜನ್, ನಿರ್ದೇಶಕರುಗಳಾದ ಎಂ.ಜಿ ಪೂರ್ಣೇಶ್, ಹಫೀಜುರ್ ರೆಹಮಾನ್, ಮಹಮದ್ ತಾಹೇರ್ ಏಕ್ಬಾಲ್, ಅನು ರಾಜೇಗೌಡ, ಸರ್ವರಿಬೇಗಮ್, ದೇವರಾಜು, ಕಿಶನ್, ಅರ್ಪಿತ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಪವನ್ ಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಹೆಚ್ ವೆಂಕಟೇಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರನು ಅಭಿನಂದಿಸಿದರು.
M.S. Jayachandra elected as new president of Mailimane P.K.S. Sangha