ಚಿಕ್ಕಮಗಳೂರು: : ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶವು ಹೊಸ ವಿಶ್ವಾಸ ಜೊತೆಗೆ ಸಂತೋಷ ತಂದಿದೆ. ಇದರೊಂದಿಗೆ ದೆಹಲಿ ವಿಧಾನ ಸಭೆಯಲ್ಲಿ ಸತತ ಮೂರನೇ ಬಾರಿಗೆ ಶೂನ್ಯ ಸಾಂಪಾದನೆ ಮೂಲಕ ಸೋಲನುಭವಿಸಿ ದಿಕ್ಕಾಪಾಲಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕು ನನ್ನ ಅಭಿನಂದನೆಗಳನ್ನು ತಿಳಿಸುತ್ತೇನೆಂದು ಕಾರ್ಕಳಾ ಶಾಸಕ ಸುನಿಲ್ ಕುಮಾರ್ ಹೇಳಿದರು.
ದೆಹಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ನಗರದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ನಗರದ ಬಿಜೆಪಿ ಕಚೇರಿಯಿಂದ ಆಜಾದ್ ವೃತ್ತದ ವರೆಗೆ ಮೋದಿ ಕಟೌಟ್ ಹಿಡಿದು ಮೆರವಣಿಗೆ ಮಾಡಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿ ನಂತರ ಮಾತನಾಡಿದ ಅವರು.ದೇಶದ ರಾಜಧಾನಿಯಲ್ಲಿ ಕೇಸರಿ ಆಡಳಿತ ಮುಂದುವರಿಯುತ್ತಿದೆ. ಇನ್ನು ಐದು ವರ್ಷ ಡಬಲ್ ಇಂಜೀನ್ ಸರ್ಕಾರದ ಮೂಲಕ ವಿಶ್ವಾಸದ ಆಡಳಿತ ನೀಡಲು ಬಿಜೆಪಿ ಸರ್ಕಾರ ಮುಂದಾಗಿದೆ. ನರೇಂದ್ರ ಮೋದಿ ಯವರ ಜನಪ್ರೀಯತೆಗೆ ದೆಹಲಿಯ ಮತದಾರರು ದೊಡ್ಡ ಪ್ರಮಾಣದ ಗೆಲುವನ್ನು ನೀಡಿದ್ದಾರೆ ಎಂದರು.
ದೇಶದ ಅಖಂಡತೆ ವಿರುದ್ಧ ಸಧಾ ಕಾಲಾ ಮಾತನಾಡುತಿದ್ದ ಕೇಜ್ರಿವಾಲ್ರವರನ್ನು ಜನ ತಿರಸ್ಕರಿಸಿದ್ದಾರೆ. ಭಾಷಣಗಳಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡಿ ಆಡಳಿತದಲ್ಲಿ ಭ್ರಷ್ಟಾಚಾರವನ್ನೆ ಅಸ್ತ್ರವಾಗಿರಿಸಿ, ಅಣ್ಣ ಅಜಾರೆಯವರ ಹೋರಾಟವನ್ನು ದುರುಪಯೋಗೊಳಿಸಿಕೊಂಡು ದೇಶದ ಜನತೆಗೆ ನಿರಂತರ ಸುಳ್ಳುಗಳನ್ನು ಹೇಳಿ ಆಡಳಿತ ನಡೆಸುತ್ತಿದ್ದ ಹತ್ತು ವರ್ಷಗಳ ಅವರ ಅಧಿಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿ ದೆಹಲಿಯ ವಿಜಯ ಯಾತ್ರೆ ಕರ್ನಾಟಕದಲ್ಲು ಮುಂದುವರೆಯುವಂತೆ ಮಾಡಲಾಗುತ್ತದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ ದೆಹಲಿ ವಿಧಾನ ಚುನಾವಣೆಯಲ್ಲಿ ಬಹುಮತ ಪಡೆದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಕೇಜ್ರಿವಾಲ್ರವರ ದುಷ್ಟ ಆಡಳಿತಕ್ಕೆ ಅಂತ್ಯವಾಡಿದೆ. ದೇಶದ ಜನತೆಗೆ ದೆಹಲಿ ಚುನಾವಣಾ ಫಲಿತಾಂಶವು ಉತ್ತಮ ಸಂದೇಶವನ್ನು ನೀಡಿದೆ ಎಂದ ಅವರು ದೇಶದಲ್ಲಿ ಕೇವಲ ಬೆರಳೆಣಿಕೆ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರವು ಪತನಗೊಳ್ಳುವ ಕಾಲ ಹತ್ತಿರದಲ್ಲಿದೆ ಎಂದರು.
ವಿಜಯೋತ್ಸವದಲ್ಲಿ ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರಾದ ಕಲ್ಮರುಡಪ್ಪ, ಕೋಟೆ ರಂಗನಾಥ್, ಬಿ.ರಾಜಪ್ಪ, ಪ್ರೇಮ್ಕುಮಾರ್, ಪುಷ್ವರಾಜ್, ಜದಂತಾ ಅನಿಲ್ ಕುಮಾರ್, ಜಯವರ್ಧನ್, ಸಂತೋಷ್ ಕೋಟ್ಯಾನ್, ಕೆ.ಪಿ.ವೆಂಕಟೇಶ್, ಕವೀಶ್, ಪುಟ್ಟಸ್ವಾಮಿ ಜಯ್ಯಣ್ಣ, ಮತ್ತಿತರ ಕಾರ್ಯಕರ್ತರು ಪಾಲ್ಗೊಂಡಿದ್ದರು.
Delhi Assembly victory for BJP: BJP workers celebrate in the city