ಚಿಕ್ಕಮಗಳೂರು: ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಸ. ಚಿಕ್ಕಮಗಳೂರು ಇದರ ಆಡಳಿತ ಮಂಡಳಿಗೆ ಚುನಾವಣೆಯು ಫೆಬ್ರವರಿ ೦೨ ರಂದು ನಡೆದಿದ್ದು, ಬ್ಯಾಂಕಿನ ಆಡಳಿತ ಮಂಡಳಿಗೆ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಮತ್ತು ಮುಂದಿನ ೫ ವ?ಗಳ ಅವಧಿಗೆ ಬ್ಯಾಂಕಿನ ಅಧ್ಯಕ್ಷರಾಗಿ ಕುಮಾರಿ ಬಿ.ಸಿ.ಗೀತಾರವರು ಹಾಗೂ ಉಪಾಧ್ಯಕ್ಷರಾಗಿ ಸುಧಾ.ಹೆಚ್.ಆರ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ರಿಟನಿಂಗ್ ಆಫೀಸರ್ ಡಾ.ತೇಜಸ್ವಿನಿ ಡಿ.ಎಸ್ ರವರು ಘೋಷಿಸಿರುತ್ತಾರೆ.ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರುಗಳಾದ.ಸುಜಾತ ಕೃ?ಮೂರ್ತಿ,.ಕಮಲಾ ಬಸವರಾಜ್, ಜಯಶ್ರೀನಂಜರಾಜ್, ಜಯಲಕ್ಷ್ಮೀ ಟಿ.ಪಿ. ಸೌಭಾಗ್ಯ ಗೋಪಾಲನ್, ಬನಶಂಕರಿ ಜೋಷಿ, ತಾರ ಮೋಹನ್, ಆಶಾ ಹೆಚ್.ಓ, ಕವಿತ ಎಂ ರಾಹುಲ್ ನಾಯಕ್, ಮೀನಾ.ಪಿ, ಸ್ಮಿತ ಬಿ.ಎಮ್, ಸೌಜನ್ಯ ಕೆ.ಆರ್ ಹಾಜರಿದ್ದರು.
B.C. Geetha elected unopposed as the President of Karnataka Mahila Sahakari Bank