ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ದಿನ ನಿತ್ಯ ಜೀವನದಲ್ಲಿ ಅಂತರ್ಜಾಲವನ್ನು ಉಪಯೋಗಿಸಿಕೊಂಡೆ ತಮ್ಮ ಎಲ್ಲಾ ಕೆಲಸವನ್ನು ಕುಳಿತ ಜಾಗದಲ್ಲೇ ಮಾಡುತ್ತಿದ್ದಾರೆ. ಆದರೆ ಈ ಅಂತರ್ಜಾಲ ಜನರನ್ನು ಮೋಸದ ಬಲೆಗೆ ಬೀಳಿಸುವ ಮಾಯಜಾಲವಾಗಿ ಪರಿವರ್ತನೆಯಾಗಿದೆ ಎಂದು ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ ಹೇಳಿದರು.
ಇಂದು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿ ಯುವ ಜನತೆಯಂತೂ ಪ್ರತೀಕ್ಷಣವೆಂಬಂತೆ ಅಂತರ್ಜಾಲದಲ್ಲಿ ಜಾಲಾಡುವುದನ್ನು ಕಾಣಬಹುದು. ಇದೊಂದು ರೀತಿಯ ಮಾಯಾಜಾಲ. ಇಂದು ಪ್ರತಿಯೊಬ್ಬರೂ ಸ್ಮಾರ್ಟ್ಫೋನ್ ಹೊಂದಿದ್ದು, ಇಂಟರ್ನೆಟ್ ಕೂಡಾ ಬಳಸುತ್ತಿರುತ್ತಾರೆ. ಆದರೆ ಇಂಟರ್ನೆಟ್ ಬಳಸುವ ಪ್ರತಿಯೊಬ್ಬರಿಗೂ ಸುರಕ್ಷತೆಯ ಅಂತರ್ಜಾಲ ಬಳಕೆಯ ಕುರಿತು ತಿಳಿದಿರುವುದಿಲ್ಲ.
ಈ ಪ್ರಭಾವಿ ಅಂತರ್ಜಾಲ ಪ್ರಪಂಚ ಮಕ್ಕಳಿಂದ ಹಿಡಿದು ಹಿರಿಯರವರೆಗೂ ವ್ಯಾಪಿಸಿದೆ. ಸದ್ಯ ಕಚೇರಿ ಕೆಲಸಗಳನ್ನು ಕುಳಿತಲ್ಲಿಂದಲೇ ಮಾಡುವ ಪರಿಣತಿಯನ್ನು ಹೊಂದಿದ ಬಳಕೆದಾರರು ಅನೇಕರಿದ್ದಾರೆ. ಅ?ರ ಮಟ್ಟಿಗೆ ಇಂಟರ್ನೆಟ್ ಬಳಕೆ ಮತ್ತು ಅದರ ಉಪಯೋಗವಾಗುತ್ತಿದೆ. ಆದರೆ ಇ?ಲ್ಲಾ ಪ್ರಯೋಜನ ಒದಗಿಸುವ ಇಂಟರ್ನೆಟ್ನಿಂದ ತೊಂದರೆಯೂ ಇದೆ ಎಂದು ಹೇಳಿದರು.
ಪೇಜ್ಗಳಿಂದ ಯಾವುದೇ ಆಪ್ಗಳನ್ನು ಡೌನಲೋಡ್ ಮಾಡಿಕೊಳ್ಳದಿರಿ. ನೀವು ಗೂಗಲ್ ಪ್ಲೇ ಸ್ಟೋರ್ನಿಂದ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವುದು ಉತ್ತಮ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಅಸುರಕ್ಷಿತ ಆಪ್ಗಳಿಂದ ಅಪಾಯ ಸಾಧ್ಯತೆ ಹೆಚ್ಚು. ಆದ್ದರಿಂದ ಇಂಥ ಅಸುರಕ್ಷಿತ ಆಪ್ಗಳನ್ನು ದೂರವಿಡಿ ಎಂದರು.
ಸುರಕ್ಷತೆಯ ಕುರಿತು ಪೋ?ಕರು ಮಕ್ಕಳೊಂದಿಗೆ ಮುಕ್ತ ಸಂವಾದ ನಡೆಸಿ. ಸೈಬರ್ ವಂಚಕರು ತಮ್ಮ ವೈಯಕ್ತಿಕ ವಿವರಗಳನ್ನು ಬಹಿರಂಗಪಡಿಸಲು ಮಕ್ಕಳನ್ನು ಪ್ರಚೋದಿಸಬಹುದು. ಹುಟ್ಟಿದ ದಿನಾಂಕ ಅಥವಾ ವಿಳಾಸದಂತಹ ವೈಯಕ್ತಿಕ ಮಾಹಿತಿಯನ್ನು ವಿಶೇ?ವಾಗಿ ಅಪರಿಚಿತರಿಗೆ ಬಹಿರಂಗಪಡಿಸದಂತೆ ಮಕ್ಕಳಿಗೆ ತಿಳಿಸಿ. ನಿಮ್ಮ ಮಕ್ಕಳಿಗೆ ಅನುಮಾನಾಸ್ಪದ ಚಟುವಟಿಕೆ ಬಗ್ಗೆ ತಿಳಿದರೆ , ತಕ್ಷಣವೇ ನಿಮಗೆ ಹೇಳಲು ತಿಳಿಸಬೇಕು. ನಿಮ್ಮ ಸ್ಮಾರ್ಟ್ಫೋನ್ಗೆ ಪಾಸ್ವರ್ಡ್ ಸ್ಟ್ರಾಂಗ್ ಇರಲಿ,.
ಫೇಸ್ಬುಕ್, ಯೂಟ್ಯೂಬ್, ಜೀಮೇಲ್, ಗೂಗಲ್ ಮ್ಯಾಪ್ ಮತ್ತು ಗೂಗಲ್ ಅಕೌಂಟ್ ಸೇರಿದಂತೆ ನೀವು ಬಳಸುವ ಎಲ್ಲ ಸಾಮಾಜಿಕ ತಾಣಗಳಲ್ಲಿ ನಿಮ್ಮ ಮಾಹಿತಿ ಇರುತ್ತದೆ. ಹೀಗಾಗಿ ಈ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಕಠಿಣ ಪಾರ್ಸ್ವರ್ಡ್ ಇಡಬೇಕು. ಇದರಿಂದ ನಿಮ್ಮ ಅಂತರ್ಜಾಲ ಮಾಹಿತಿ ಸೋರಿಕೆ ತಡೆಯಬಹುದು ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಎನ್.ಐ.ಸಿಯ ಸೂಚನಾಧಿಕಾರಿ ಚಂದ್ರುಪ್ರಕಾಶ ಮಾತನಾಡಿ ಆನ್ಲೈನ್ ಮತ್ತು ವಿಡಿಯೋ ಕರೆ ಮಾಡಿ. ಪೋ?ಕರಿಗೆ ಅಥವಾ ಮಕ್ಕಳಿಗೆ ಡಿಜಿಟಲ್ ಬಂಧನವೆಂದು ನಿಮ್ಮನ್ನು ಭಯಪಡಿಸಬಹುದು ಅದರಿಂದ ಅಪರಿಚಿತ ಸಂಖ್ಯೆಯಿಂದ ಕರೆಗಳು ಬಂದರೆ ನಿರ್ಲಕ್ಷಿಸಿ ಯಾವುದಾದರು ಆಪ್ ಅಥವಾ ವೆಬ್ಸೈಟ್ ಬಳಸಬೇಕಾದರೇ ಅವರು ನಿಮ್ಮ ಕಡೆಯಿಂದ ನಿಮ್ಮ ಕಾಂಟ್ಯಾಕ್ಟ್ಸ್, ಲೊಕೇ?ನ್, ಕ್ಯಾಲೆಂಡರ್, ಕ್ಯಾಮೆರಾ ಹೀಗೆ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿ ಕೋರುತ್ತಾರೆ.
ಆಗ ಅನಗತ್ಯವಾಗಿ ಎಲ್ಲ ಡಾಟಾ ಮಾಹಿತಿ ಹಂಚಿಕೆಗೆ ಅನುಮತಿ ನೀಡಬೇಡಿ. ಇದರಿಂದ ನಿಮ್ಮ ವೈಯಕ್ತಿಕ ದಾಖಲೆಗಳು ಸೋರಿಕೆಯಾಗುತ್ತದೆ ಹಾಗೂ ವ್ಯಕ್ತಿಯ ಖಾಸಗಿ ಮಾಹಿತಿ, ಬ್ಯಾಂಕ್ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.ಕಾರ್ಯಗಾರದಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಜ್ ಗೋಪಾಲ್, ಜಿಲ್ಲಾ ಸಹಾಯಕ ಕಾರ್ಯದರ್ಶಿ ನಯನ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.
Safer Internet Day program workshop