ಚಿಕ್ಕಮಗಳೂರು: ಯಾವುದೇ ಅಧಿಕಾರಿ ಸಾರ್ವಜನಿಕರೊಂದಿಗೆ ಸಂಪರ್ಕದಲಿದ್ದು ಉತ್ತಮ ಭಾಂದವ್ಯ ಹೊಂದಿದ್ದರೆ ವ್ಯವಸ್ಥಿತವಾದ ಕರ್ತವ್ಯ ಸುಲಭ ರೀತಿಯಲ್ಲಿ ನಿರ್ವವಹಿಸಬಹುದು ಎಂದು. ಇಂಡಸ್ಟ್ರಿಯಲ್ ಏರಿಯಾ ಸಾಮಿಲ್ ಮಾಲೀಕರು ಮತ್ತು ಬಾಡಿಗೆದಾರರ ಸಂಘ ಅಧ್ಯಕ್ಷ ಸುರೇಂದ್ರ ಶೆಟ್ಟಿ ಹೇಳಿದರು.
ಗೌಡನಹಳ್ಲೀಯ ಚೌಡೇಶ್ವರ ದೇವಸ್ಥಾನದ ಆವರಣದಲ್ಲಿ ಇಂಡಸ್ಟ್ರಿಯಲ್ ಏರಿಯಾ ಸಾಮಿಲ್ ಮಾಲೀಕರು ಮತ್ತು ಬಾಡಿಗೆದಾರರ ಸಂಘ ವತಿಯಿಂದ ಆಯೋಜಿಸಿದ್ದ ನಿವೃತ್ತಿ ಅಗಲಿರುವ ಉಪ ವಲಯ ಅರಣ್ಯ ಅಧಿಕಾರಿ ಕೆಕೆ ರಮೇಶ್ ಅವರಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಅರಣ್ಯ ಅಧಿಕಾರಿಗಳು ವಿನಹ ಕಾರಣ ಸಾರ್ವಜನಿಕರಿಗೆ ತೊಂದರೆ ನೀಡದೆ ಕಾನೂನು ರೀತಿಯ ಕ್ರಮಗಳನ್ನು ಅನುಸರಿಸಿ ಅರಣ್ಯ ರಕ್ಷಣೆ ಕಾರ್ಯದಲ್ಲಿ ತೊಡಗಿಕೊಳ್ಳ ಬೇಕು.ಅರಣ್ಯ ಅಧಿಕಾರಿ ಜೆ.ಕೆ ರಮೇಶ್ ರವರು ೨೦೧೯ ರಲ್ಲಿ ಈ ಭಾಗದ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಎಲ್ಲಾ ಸಾಮಿಲ್ ಮಾಲೀಕರೊಂದಿಗೆ ಉತ್ತಮ ಭಾಂದವ್ಯ ಬೆಳೆಸಿಕೊಂಡು ನಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಕೊಡುವುದರೊಂದಿಗೆ ಅರಣ್ಯ ರಕ್ಷಣಾ ಕಾರ್ಯದಲ್ಲು ಮುಂಚುಣಿಯಲ್ಲಿದ್ದರು ಇಂತಹ ದಕ್ಷ ಅಧಿಕಾರಿಗಳು ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗುವುದಲ್ಲದೇ ವಿವಿಧ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.
ನಿವೃತ್ತ ಅರಣ್ಯಾಧಿಕಾರಿ ಜೆ.ಕೆ ರಮೇಶ್ ಮತನಾಡಿ ನಮ್ಮ ಅವದಿಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ೧೯೯೬ ರಿಂದ ಚಿಕ್ಕಮಗಳೂರು ವಲಯದ ವಿವಿಧ ಪ್ರದೇಶಗಳಲ್ಲಿ ಹಾಗೂ ಅರಣ್ಯ ಇಲಾಖೆಯ ವಿವಿಧಗಳಲ್ಲಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಪ್ರತಿಯೊಂದು ಪ್ರದೇಶದಲ್ಲಿ ಕಾನೂನು ರೀತಿಯ ಎಲ್ಲಾ ಕ್ರಮಗಳನ್ನು ಅನುಸರಿಸಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ ಜೊತೆಗೆ ಅಲ್ಲಿನ ಸ್ಥಳೀಯರು ತಮ್ಮ ಕುಟುಂಬದ ಸದಸ್ಯನಂತೆ ಭಾವಿಸಿ ಪ್ರತಿಯೊಬ್ಬರು ಸೇವೆಗೆ ಸಹಕರಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಡಸ್ಟ್ರಿಯಲ್ ಏರಿಯಾ ಸಾಮಿಲ್ ಮಾಲೀಕರು ಮತ್ತು ಬಾಡಿಗೆದಾರರ ಸಂಘದ ಉಪಾಧ್ಯಕ್ಷ ಬಿ.ಮಲ್ಲಿಕಾರ್ಜುನ ರಾವ್, ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ಸೋಮಶೇಖರ್,ಎಸ್, ಖಜಾಂಚಿ ಬಾಬಣ್ಣ, ಸದಸ್ಯರುಗಳಾದ ಸಿ.ಎಸ್.ಸುಬ್ಬರಾವ್, ಕೃಷ್ಣೇಗೌಡ.ವಿ.ಪಿ, ಬಿ.ಎಂ.ಶರತ್ಕುಮಾರ್, ಸುಮಿಥ್ ಬನ್ಸಾಲಿ, ಸಿ.ಉಮೇಶ್, ಅರಣ್ಯ ಇಲಾಖೆ ಗಾರ್ಡ್ಗಳಾದ ಮಂಜಣ್ಣ, ಪುಟ್ಟಸ್ವಾಮಿ, ಉಪಸ್ಥಿತರಿದ್ದರು.
Farewell ceremony for retiring Sub-Zonal Forest Officer K K Ramesh