ಶೃಂಗೇರಿ: ಶೃಂಗೇರಿ ಶಾರದಾಪೀಠದ ಶ್ರೀಶಾರದಾಮಹಾರಥೋತ್ಸವ ಬಲು ವಿಜೃಂಭಣೆಯಿಂದ ನೆರವೇರಿತು.
ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನೆರವೇರಿದ ರಥೋತ್ಸವಕ್ಕೆ ಶ್ರೀಮಠದ ಆನೆಗಳು,ಛತ್ರಿ ಚಾಮರಗಳು,ವೇದ,ವಾದ್ಯಗೋಷ್ಠಿಗಳು,ರಂಗವಲ್ಲಿ ಚಿತ್ತಾರಗಳು,ತಳಿರು ತೋರಣಗಳು ಮೆರಗು ನೀಡಿದವು.ಮುಖ್ಯರಸ್ತೆಯಲ್ಲಿ ಸಾಗಿ ಬಂದ ರಥೋತ್ಸವದಲ್ಲಿ ನಾನಾಪ್ರಾಂತ್ಯಗಳಿಂದ ಆಗಮಿಸಿದ ಸದ್ಭಕ್ತರು ಭಾಗಿಯಾದರು.ಪಟ್ಟಣದ ಸದ್ಭಕ್ತರು ಜಗದ್ಗುರುಗಳಿಗೆ ಫಲಗಳನ್ನು ಸಮರ್ಪಿಸಿ ಧನ್ಯತಾಭಾವ ಪಡೆದರು.
ಶ್ರೀ ಶಾರದಾಂಬಾ ರಥೋತ್ಸವ ಪ್ರಯುಕ್ತ ಶ್ರೀಶಾರದಾಪೀಠದಲ್ಲಿ ಫೆ.೧೧ರಿಂದ ಶ್ರೀಶಕ್ತಿಗಣಪತಿ ಸನ್ನಿಧಿಯಲ್ಲಿ ಪೂಜೆ,ವಿಶೇಷ ಪ್ರಾರ್ಥನೆ,ಧ್ವಜಾರೋಹಣ,ಮಂತ್ರಜಪ,ವೇದಪಾರಾಯಣಿ ಪ್ರಾರಂಭ,ಸಹಸ್ರಮೋದಕ ಗಣಹೋಮ,ಯಾಗಶಾಲಾ ಪ್ರವೇಶ,ಜಗದ್ಗುರುಗಳಿಂದ ಶತಚಂಡೀಯಾಗದ ಸಂಕಲ್ಪ,ಋತ್ವಿಜರಿಂದ ಚಂಡೀಪಾರಾಯಣಿ,ಕ್ಷೇತ್ರಪಾಲಕ ಬ್ರಹ್ಮ ಸನ್ನಿಧಿಯಲ್ಲಿ ವಿಶೇಷಪೂಜೆ,ಬ್ರಹ್ಮ ಸಂತರ್ಪಣೆ,ಶ್ರೀ ಶಾರದಾಮ್ಮನವರ ಬೀದಿ ಉತ್ಸವ,ಉತ್ಸವದಲ್ಲಿ ಶ್ರೀಮಲಹಾನಿಕರೇಶ್ವರ ದೇವಸ್ಥಾನದಿಂದ ಶ್ರೀಭವಾನಿ ಅಮ್ಮನವರು ಶ್ರೀ ಶಾರದಾಮ್ಮ ಸನ್ನಿಧಿಗೆ ಚಿತ್ತೈಸುವುದು,ಜಗದ್ಗುರುಗಳಿಂದ ಶ್ರೀಶಾರದೆಗೆ ವಿಶೇಷ ಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಭಾನುವಾರ ಜಗದ್ಗುರುಗಳ ಉಪಸ್ಥಿತಿಯಲ್ಲಿ ಶತಚಂಡೀಯಾಗದ ಪೂರ್ಣಾಹುತಿ,ಓಕಳಿ ಉತ್ಸವ,ತೆಪ್ಪೋತ್ಸವ,ಬೀದಿ ಉತ್ಸವ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದೆ.ಸೋಮವಾರ ಮಹಾಸಂಪ್ರೋಕ್ಷಣೆ ನೆರವೇರಲಿದೆ.
The Shree Sharada Maharathotsava of Sringeri Sharada Peetha was celebrated with great pomp and show.