ಚಿಕ್ಕಮಗಳೂರು: ಡಿಜಿಟಲೀಕೃತ ಭೂ ನಕ್ಷೆಯಿಂದ ಭೂ ಅಕ್ರಮವನ್ನು ತಡೆಗಟ್ಟುವುದರ ಜೊತೆಗೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ನಡೆಸಿ ಸ್ಪ?ವಾದ ಮಾಲೀಕತ್ವದ ಮಾಹಿತಿ ಪಡೆಯಲು ಸಹಕಾರಿಯಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಕಂದಾಯ ಇಲಾಖೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಇಂದು ನಗರ ಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನಗರ ಪ್ರದೇಶಗಳಲ್ಲಿ ಆಸ್ತಿಗಳ ಭೂ ದಾಖಲೆಗಳ ರಚನೆ ನಕ್ಷಾ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಯೋಜನೆ ಅಡಿಯಲ್ಲಿ ಪ್ರಾಯೋಗಿಕವಾಗಿ ರಾಜ್ಯದ ೧೦ ನಗರ, ಪಟ್ಟಣಗಳನ್ನು ಆಯ್ಕೆಮಾಡಲಾಗಿದೆ. ಇದರಲ್ಲಿ ಜಿಲ್ಲೆಯ ನಗರ ಸಭೆಯನ್ನು ಆಯ್ಕೆ ಮಾಡಲಾಗಿದ್ದು ಯೋಜನೆಯೂ ನಗರ ಸಭೆ ವ್ಯಾಪ್ತಿಯ ಎಲ್ಲಾ ಸ್ಥಳಿಯ ಸಂಸ್ಥೆಗಳ ಸರಳ ಸರ್ವೆ ಕಾರ್ಯಗಳ ಜೊತೆಗೆ ನಾಗರೀಕರು ಸಾಲ ಮತ್ತು ಇತರ ಪ್ರಯೋಜನಗಳನ್ನು ಬ್ಯಾಂಕ್ ಮತ್ತು ಇನ್ನಿತರ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸುಲಭ ಪ್ರಕ್ರಿಯೆಗೆ ಸಹಕಾರಿಯಾಗಲಿದೆ ಎಂದರು.
ನಕ್ಷಾ ಯೋಜನೆಯನ್ನು ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕೇಂದ್ರ ಬಜೆಟ್ನಲ್ಲಿ ನಗರ ಪ್ರದೇಶಗಳಲ್ಲಿ ಭೂ-ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಸೂಕ್ತ ಹಣಕಾಸಿನ ಬೆಂಬಲದ ಮೂಲಕ ಮುಂದಿನ ೩ ವ?ಗಳಲ್ಲಿ ಪೂರ್ಣಗೊಳಿಸಲು ಪ್ರೋತ್ಸಾಹಿಸಲಾಗುವುದು. ಪ್ರಾಯೋಗಿಕವಾಗಿ ದೇಶದ ೧೫೨ ನಗರ/ಪಟ್ಟಣ ಗಳಲ್ಲಿ ಈ ಯೋಜನೆ ಅನು?ನಗೊಳಿಸಲು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡ್ರನೈಸೇ?ನ್ ಪ್ರೋಗ್ರಾಮ್ ಅಡಿಯಲ್ಲಿ ಯೋಜನೆಯನ್ನು ಅನು?ನಗೊಳಿಸಲು ಆಯ್ಕೆಮಾಡಲಾಗಿದೆ ಎಂದ ಅವರು ಯೋಜನೆ ಮೂಲಕ ನಾಗರೀಕರು ಕೆರೆ ಪ್ರದೇಶ, ಸರ್ಕಾರಿ ಆಸ್ತಿ, ಅಥವಾ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಆಸ್ತಿಗಳನ್ನು ಸೃಜಿಸಿ ಮಾರಾಟ ಮಾಡುವ ಪ್ರಕ್ರಿಯೆಯಂತಹ ಅಕ್ರಮಗಳಿಗೆ ಒಳಗಾಗುವುದು ತಪ್ಪುತ್ತದೆ ಎಂದು ಹೇಳಿದರು.
ಶಾಸಕ ಹೆಚ್.ಡಿ ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ನಕ್ಷಾ ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳ ಭೂ ಸಮೀಕ್ಷೆ ಸರಳೀಕರಣದ ಉದ್ದೇಶದಿಂದ ಜಾರಿ ಮಾಡಲಾಗಿದೆ. ಇದರಿಂದ ಆಸ್ತಿಗಳ ವಿಭಜನೆ, ಅನುವಂಶಿಕ ಬದಲಾವಣೆ, ಉತ್ತರಾಧಿತ್ವ ಪ್ರಕ್ರಿಯೆಗಳು ಸುಲಭವಾಗುತ್ತದೆ. ಕಾರ್ಡ್ ಮೂಲಕ ಲಭ್ಯವಾಗುವ ಗಣಕೀಕೃತ ಭೌಗೋಳಿಕ ಉಲ್ಲೇಖಿತ ನಕ್ಷೆಗಳು ನಾಗರೀಕರಿಗೆ ತಮ್ಮ ಆಸ್ತಿಗಳ ವಿಭಜನೆ ಪ್ರಕ್ರಿಯೆಯನ್ನು ಸ್ವಯಂ ನಿರ್ವಹಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ನಾಗರೀಕರಿಗೆ ಮೊದಲ ಬಾರಿಗೆ ತನ್ನ ಆಸ್ತಿಯ ಮಾಲೀಕತ್ವ ಪ್ರಮಾಣಪತ್ರವನ್ನು ಸರ್ಕಾರದಿಂದ ನೀಡಲಾಗುತ್ತದೆ, ಇದು ಪ್ರತಿ ಆಸ್ತಿಯ ಪಾರದರ್ಶಕ ಮತ್ತು ಸ್ಪ?ವಾದ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ, ಮಾಲೀಕತ್ವದ ವಿವರಗಳು ಮತ್ತು ಅದರ ಹಕ್ಕುಗಳು ಮತ್ತು ಆಸ್ತಿಯ ಮೇಲಿನ ವಿವರಗಳನ್ನು ಕಾರ್ಡ್ ಒಳಗೊಂಡಿರುತ್ತದೆ. ಆದ್ದರಿಂದ ನಾಗರೀಕರು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿ ತಮ್ಮ ಆಸ್ತಿಯ ಗಡಿಗಳನ್ನು ಸ್ಥಳದಲ್ಲಿರುವಂತೆ ಗುರುತಿಸಿಕೊಳ್ಳಬಹುದಾಗಿದೆ ಎಂದ ಅವರು ನಗರ ಪ್ರದೇಶದಲ್ಲಿನ ಭೂ ವಿವಾಧಗಳ ಪರಿಹಾರಕ್ಕೆ ನಕ್ಷಾ ಯೋಜನೆಯೂ ಉತ್ತಮ ಮಾರ್ಗವಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ ನಗರ ಪ್ರದೇಶದ.. ಪ್ರತಿಯೊಂದು ಆಸ್ತಿಯ ಹಕ್ಕು ಅಥವಾ ಮಾಲೀಕತ್ವದ ದಾಖಲೆಯನ್ನು ಕಾನೂನಿನ ಅಡಿಯಲ್ಲಿ ಆಸ್ತಿ ಮಾಲೀಕತ್ವದ ಪುರಾವೆ ಅಥವಾ ಮಾಲೀಕತ್ವದ ಪ್ರಮಾಣಪತ್ರವನ್ನು ಸಿದ್ಧಪಡಿಸುವುದೇ ರಾಷ್ಟ್ರೀಯ ಜಿಯೋಸೋಷಿಯಲ್ ಫಾನ ಆಧಾರಿತ ನಗರ ವಸತಿಗಳ ಭೂ ಸಮೀಕ್ಷೆ (ನಕ್ಷಾ) ಯೋಜನೆಯಾಗಿದೆ. ಈ ಯೋಜನೆಯನ್ನು ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಮತ್ತು ಸರ್ವೆ ಆಫ್ ಇಂಡಿಯಾ ಇವರ ಸಹಭಾಗಿತ್ವದಿಂದ ಯೋಜನೆಯನ್ನು ಅನು?ನಗೊಳಿಸಲಾಗುತ್ತಿದೆ ಎಂದರು.
ನಗರದಲ್ಲಿ ರಸ್ತೆ, ಒಳಚರಂಡಿ, ನೀರು ಪೂರೈಕೆ ಯೋಜನೆಗಳನ್ನು ರೂಪಿಸಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಯೋಜನೆಯು ಅತ್ಯಂತ ಸಹಾಯಕಾರಿಯಾಗಿದೆ. ಜಿಲ್ಲೆಯೂ ಭೌಗೋಳಿಕವಾಗಿ ಉತ್ತಮ ಪರಿಸರವನ್ನು ಹೊಂದಿದ್ದು ಯೋಜನೆ ಮೂಲಕ ಹಲವಾರು ಅಭಿವೃದ್ದಿ ಕಾರ್ಯಗಳನ್ನು ನಿರ್ವಹಿಸಿ ಅಭಿವೃದ್ಧಿ ಹೊಂದಿದ ನಗರ ನಿರ್ಮಾಣ ಮಾಡಬಹುದು. ಎಂದ ಅವರು ಯೋಜನೆಯಲ್ಲಿ ಡೋನ್ ಫೆಯಿಂಗ್ ನಿಂದ ಜೆಯೋ ರೆಫರೆನೈಡ್ ನಕ್ಷೆಯನ್ನು ತಯಾರಿಸಲಾಗುವುದು. ವಿಚಾರಣಾಧಿಕಾರಿಗಳು ನೀಡಿದ ದಾಖಲೆಗಳ ಮೇಲೆ ಕರಡು ಆಸ್ತಿ ಪತ್ರ ನೀಡಲಾಗುವುದು. ತಕರಾರು ಸಲ್ಲಿಸಿದಲ್ಲಿ, ವಿಚಾರಣೆ ಮಾಡಿ ಅಂತಿಮ ಆಸ್ತಿ ಪತ್ರವನ್ನು ನೀಡಲಾಗುತ್ತದೆ. ಸಾರ್ವಜನಿಕರ ಸಹಕಾರವಿದ್ದಲ್ಲಿ ಸರ್ವೇ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಭೂ ಸಂಬಂಧ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ನಗರ ಸಭೆ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳು, ಖಾಲಿ ನಿವೇಶನಗಳು, ಸಾರ್ವಜನಿಕ ಆಸ್ತಿಗಳು, ನಗರ ಸಭೆ ಆಸ್ತಿಗಳು, ದೇವಸ್ಥಾನ, ಬಸ್ ನಿಲ್ದಾಣ, ರಸ್ತೆ, ಹಳ್ಳ, ಕೆರೆ, ಕಟ್ಟೆ, ಸ್ಮಶಾನ ಮತ್ತು ಇತರೆ ಸರ್ಕಾರಿ ಆಸ್ತಿಗಳನ್ನು ಒಳಗೊಂಡಂತೆ ನೀರಿನ ಪೈಪ್ ಲೈನ್, ವಿದ್ಯುತ್ ಲೈನ್, ಯು.ಜಿ.ಡಿ ಲೈನ್, ಟೆಲೆಪೋನ್ ಲೈನ್ ಮತ್ತು ಸ್ಥಳದಲ್ಲಿ ದೊರೆಯುವ ಇತರೆ ಆಸ್ತಿಗಳನ್ನು ಅಳತೆಗೆ ಒಳಪಡಿಸಿ ನಿಖರವದ ಸರ್ವೆಕಾರ್ಯ ನಡೆಸಲು ಸಹಕರಿಯಾಗಲಿದ್ದು ತೆರಿಗೆ ವಸೂಲಿಗೂ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ನಗರ ಸಭೆ ಆಯುಕ್ತ ಬಿ.ಸಿ ಬಸವರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನ ನಿರ್ದೇಶಕಿ ನಾಗರತ್ನ, ಭೂ ದಾಖಲೆಗಳ ಉಪನಿರ್ದೇಶಕ ಲೋಹಿತ್.ಟಿ.ಕೆ. ಸಹಾಯಕ ನಿರ್ದೇಶಕ ರುದ್ರೇಶ್, ಸರ್ವೇ ಸೂಪರ್ವೈಸರ್ ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.
Inauguration of the mapping project for the creation of land records of properties in urban areas