ಚಿಕ್ಕಮಗಳೂರು: ಪ್ರತಿಯೊಂದು ಮಗುವಲ್ಲೂ ವಿಶೇಷ ಜ್ಞಾನ, ಕಲೆ ಅಡಗಿರುತ್ತದೆ ಅವುಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವುದಲ್ಲದೇ ಅವರ ಉತ್ತಮ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ ಹಾಗೂ ಪೋಷಕರ ಪಾತ್ರ ಬಹಳಷ್ಠಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಹೇಳಿದರು.
ಮೌಂಟಿ ಎಂಜಲ್ ಇಂಟರ್ ನ್ಯಾಶನಲ್ ಸ್ಕೂಲ್ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶಾಲ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದ ಅವರು ಮಕ್ಕಳು ಕಲಿಕೆ ಹೆಚ್ಚು ಆಸಕ್ತಿ ವಹಿಸಬೇಕು. ಬಾಲ್ಯದಲ್ಲಿ ಮಕ್ಕಳ ಮನಸ್ಸು ಮತ್ತು ಬುದ್ಧಿಶಕ್ತಿ ಹೆಚ್ಚು ಕ್ರೀಯಾಶೀಲತೆಯಿಂದ ಕೂಡಿರುತ್ತದೆ. ಪೋಷಕರು ಇವುಗಳನ್ನು ಅರಿತು ಮಕ್ಕಳನ್ನು ಐಚ್ಚಿಕ ವಿಶಯಗಳಲ್ಲಿ ಕಲಿಯಲು ಪ್ರೋತ್ಸಾಹಿಸಬೇಕು.
ಮಕ್ಕಳು ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿತು ತಂದೆ-ತಾಯಿ, ಗುರು, ಹಿರಿಯರಿಗೆ ಗೌರವಿಸುವುದನ್ನು ಕಲಿಯಬೇಕು. ಶಾಲೆಯೂ ವಿದ್ಯೆ ಜೊತೆಗೆ ಸಮಾಜದ ಅರಿವನ್ನು ಮುಡಿಸುತ್ತದೆ. ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡಿ ಅವರನ್ನು ಸಮಾಜದ ಗೌರವಯುತ ವ್ಯಕ್ತಿಯಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ಎಂದರು ಪೋಷಕರು ಮಕ್ಕಳ ಸ್ವಯಂ ಕಲಿಕೆಗೆ ಅವಕಾಶ ಮಾಡಿಕೊಡಬೇಕು
ಮೌಂಟಿ ಎಂಜಲ್ ಶಾಲೆ ಬಳಿ ರಸ್ತೆ ಮತ್ತು ಸೇತುವೆ ದುರಸ್ಥಿ ಮಾಡುವಂತೆ ಶಾಲಾ ಮುಖ್ಯಸ್ಥರು ಮನವಿ ಮಾಡಿದ್ದು, ಇದರ ಬಗ್ಗೆ ಶಾಸಕರೊಂದಿಗೆ ಚರ್ಚಿಸಿ ತಕ್ಷಣವೇ ದುರಸ್ಥಿ ಮಾಡಿಕೊಡುವ ಭರವಸೆ ನೀಡಿದರು. ಮೌಂಟಿ ಎಂಜಲ್ ಶಾಲೆಯ ಪ್ರಾಂಶುಪಾಲ ಜೋಸೆಫ್ ಮಾತನಾಡಿ. ವಿದ್ಯೆ ಎಂಬುದು ಪ್ರಬಲ ಅಸ್ತ್ರ ಇದನ್ನು ಸರಿಯಾದ ರಿತಿಯಲ್ಲಿ ಉಪಯೋಗಿಸಿಕೊಂಡಲ್ಲಿ ಪ್ರಪಂಚವನ್ನೇ ಬದಲಾಯಿಸಬಹುದು. ಶಿಕ್ಷಣ ಕೇವಲ ಪುಸ್ತಕ ಹಾಗೂ ಪರೀಕ್ಷೆಗೆ ಸೀಮಿತವಲ್ಲ.
ಶಿಕ್ಷಣವೂ ಮಕ್ಕಳಲ್ಲಿ ವ್ಯಕ್ತಿತ ರೂಪಿಸುತ್ತದೆ. ಬದುಕು ನಿರ್ವಹಿಸುವ ಶಕ್ತಿ ನೀಡುತ್ತದೆ. ಒಬ್ಬ ಉತ್ತಮ ವಿದ್ಯಾರ್ಥಿ ಶಿಕ್ಷಣ ಸಂಸ್ಥೆಗೆ ಜೊತೆಗೆ ಸಾಮಾಜದಲ್ಲೂ ಉನ್ನತ ಸ್ಥಾನ ಗಳಿಸುತ್ತಾನೆ. ನಮ್ಮ ಸಂಸ್ಥೆಯು ಮಕ್ಕಳಿಗೆ ಸುಂದರ ಕಲಿಕ ವಾತಾವರಣವನ್ನು ರೂಪಿಸಿ ಪ್ರತಿಯೊಂದು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಗುರಿ ಮುಖ್ಯ. ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಹೊಂದುವುದರ ಮೂಲಕ ತಮ್ಮ ಗುರಿ ತಲುಪಿ ಎಂದರು.
ಕಾರ್ಯಕ್ರಮದಲ್ಲಿ ಮೌಂಟಿ ಎಂಜಲ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸರಿತ ಜೋಸೆಫ್, ಶಾಲಾ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Mount Angel International School School Anniversary