ಚಿಕ್ಕಮಗಳೂರು: ಶಿಕ್ಷಣವೂ ಮಕ್ಕಳಲ್ಲಿ ವ್ಯಕ್ತಿತ ರೂಪಿಸುತ್ತದೆ. ಶಿಕ್ಷಕರು ವಿದ್ಯೆಯ ಜೊತೆಗೆ ತಂದೆ-ತಾಯಿ, ಗುರು, ಹಿರಿಯರಿಗೆ ಗೌರವಿಸುವ ನೈತಿಕ ಪಾಠಗಳನ್ನು ಮಕ್ಕಳಲ್ಲಿ ತುಂಬಬೇಕು ಎಂದು ನಗರ ಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಹೇಳಿದರು.
ಮೊಂಟಿ ಏಂಜಲ್ಸ್ ಇಂಟರ್ ನ್ಯಾಶನಲ್ ಸ್ಕೂಲ್ ವತಿಯಿಂದ ನಗರದ ಕುವೆಂಪು ಕಲಾ ಮಂದಿರದಲ್ಲಿ ಆಯೋಜಿಸಿದ್ದ ಶಾಲ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಕಲಿಕೆ ಹೆಚ್ಚು ಆಸಕ್ತಿ ವಹಿಸಬೇಕು. ಶಿಕ್ಷಣ ಕೇವಲ ಪುಸ್ತಕ ಹಾಗೂ ಪರೀಕ್ಷೆಗೆ ಸೀಮಿತವಲ್ಲ. ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡಿ ಅವರನ್ನು ಸಮಾಜದ ಗೌರವಯುತ ವ್ಯಕ್ತಿಯಾಗಿ ರೂಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಬಳಕೆ ಹೆಚ್ಚು ಮಾರುಹೋಗಿದ್ದು ಮನುಷ್ಯರೊಂದಿಗಿನ ಮಾತು ಕ್ಷೀಣಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ವ್ಯವಹಾರಿಕವಾಗಿ ಇಂಗ್ಲೀಷ್ ಮಾದ್ಯಮ ಅಗತ್ಯವಾಗಿದೆ ಆದರೆ ಮಾತೃ ಭಾಷೆಯನ್ನು ಮನದಾಳದಲ್ಲಿ ಇರಿಸಿ ಹೆಚ್ಚು ಬಳಕೆ ಮಾಡಬೇಕು.
ಮಕ್ಕಳೊಂದಿಗೆ ಕನ್ನಡದಲ್ಲಿ ಸಂವಹನ ನಡೆಸಿ ಭಾಷಾ ಪ್ರೇಮವನ್ನು ಮೆರೆಯಬೇಕು ಎಂದ ಅವರು ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಆಸಕ್ತಿಯನ್ನು ಗುರುತಿಸಿ ಅವರ ಆಸಕ್ತಿಯ ವಿಷಯಗಳಲ್ಲಿ ಗುರಿ ತಲುಪಲು ಪ್ರೋತ್ಸಾಹಿಸಬೇಕು ಎಂದರು.
ಮೊಂಟಿ ಏಂಜಲ್ ಶಾಲೆಯ ಅಧ್ಯಕ್ಷ ಜೋಸೆಫ್ ಮಾತನಾಡಿ ನಮ್ಮ ಶಾಲೆಯಲ್ಲಿ ನುರಿತ ಶಿಕ್ಷರಿಂದ ಶಿಕ್ಷಣ ನೀಡುವುದರ ಸಂಸ್ಕಾರಯುತ ಶಿಕ್ಷಣವನ್ನುನೀಡಲಾಗುತ್ತದೆ ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆನರ ಬ್ಯಾಂಕ್ ಮ್ಯಾನೇಜರ್ ಬೀಷಮ್ ನವ್ಲಾನಿ, ಮೊಂಟಿ ಏಂಜಲ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸರಿತ ಜೋಸೆಫ್, ಶಾಲಾ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Monty Angels International School School Anniversary