ಚಿಕ್ಕಮಗಳೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೇಂದ್ರ ಬಜೆಟ್ ಸರ್ವಜನ ಸ್ನೇಹಿ ಹಾಗೂ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಪಥದಲ್ಲಿನ ಮೈಲಿಗಲ್ಲಾಗಿದೆ ಎಂದು ಆರ್ಥಿಕ ತಜ್ಞ ವಿಶ್ವನಾಥ್ ಭಟ್ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಕೇಂದ್ರ ಬಜೆಟ್ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮತನಾಡಿದ ಅವರು ನಂರೇದ್ರ ಮೋದಿಯವರು ಬಜೆಟ್ ಮಂಡನೆಯಾದ ನಂತರದಲ್ಲೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲು ಬಜೆಟ್ ಕುರಿತು ಉದ್ಯಮದಾರರು, ಚಾರ್ಟೆಡ್ ಅಕೌಂಟ್, ಇಂಜಿನಿಯರ್ಗಳು, ಸಮಾಜ ಚಿಂತಕರನ್ನು ಒಳಗೊಂಡಂತೆ ವಿವಿಧ ಜನ ಸಾಮಾನ್ಯರೊಂದಿಗೆ ಹಿಂದಿನ ಬಜೆಟ್ ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳು, ತೆರಿಗೆ, ಹೂಡಿಕೆ ಸೇರಿದಂತೆ ಹಲವಾರು ವಿಷಯಗಳನ್ನು ಸಂವಾದ ನಡೆಸುವ ಮಹತ್ವದ ಉದ್ದೇಶವನ್ನು ಹೊಂದಿದ್ದಾರೆ. ಆದರೆ ೫೭ ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈ ಉತ್ತಮ ಕಾರ್ಯವನ್ನು ನಿರ್ವಹಿಸುವ ಯೋಚನೆ ಕೂಡ ಬಂದಿಲ್ಲ. ಸರ್ಕಾರದ ಕರ್ತವ್ಯವನ್ನೇ ಮರೆತಿದ್ದರೂ ಅಥವಾ ಅವರ ಬಜೆಟ್ ಮಂಡನೆ ವಿಷಯದಲ್ಲಿ ಅವರಿಗೆ ಸ್ವತಹ ವಿಶ್ವಾಸವಿಲ್ಲದಿರುವುದನ್ನು ಸೂಚಿಸುತ್ತದೆ ಎಂದರು.
ರಷ್ಯಾ ಮತ್ತು ಉಕ್ರೇನ್, ಇಸ್ರೇಲ್ ಮತ್ತು ಹಾಮಾಸ ನಡುವಿನ ಭೌಗೋಳಿಕ ರಾಜಕೀಯ ಸಂಘರ್ಷ ಜಗತ್ತಿನಾದ್ಯಂತ ಅಂತರಾಷ್ಟ್ರೀಯ ವ್ಯಾಪರ ವಹಿವಾಟು ತೀವ್ರವಾಗಿ ಕುಸಿದು ಆಹಾರ ಪಾದಾರ್ಥಗಳು ಸೇರಿದಂತೆ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಸಮಾಜದಲ್ಲಿ ತಪ್ಪು ಮಾಹಿತಿಯನ್ನು ಅರಿಬಿಡುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.
ದೇಶದ ಬಹುತೇಕ ರಾಜ್ಯಗಳು ಸಬ್ಸಿಡಿ ಹಣವನ್ನು ವಿಪರೀತವಾಗಿ ನೀಡಿ ಮೂಲ ಸೌಕರ್ಯಗಳ ಹೂಡಿಕೆಗೆ ಹಣವಿಲ್ಲದಂತಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಭಾರತದ ಗ್ರಾಮೀಣಾ ಹಾಗೂ ನಗರ ಪ್ರದೇಶಗಳಲ್ಲಿ ಬಹು ಆಯಾಮದ ಬಡತನ ರೇಖೆಯೂ ಶೇಕಡಾ ೫ ಕ್ಕಿಂತ ಕಡಿಮೆಯಾಗಿದೆ ಎಂದು ತಿಳಿಸಿದೆ.
ದೇಶದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಲಯಗಳಲ್ಲಿ ೨೦೦೪ ರಿಂದ ೨೦೧೪ರ ವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಐ ಸರ್ಕಾರದಲ್ಲಿ ೨ ಕೋಟಿ ೯೦ ಲಕ್ಷ ಉದ್ಯೋಗ ಸೃಷ್ಠಿಯಾಗಿತ್ತು ಆದರೆ ೨೦೧೪ ರಿಂದ ೨೦೨೪ ರವರೆಗೆ ೧೭.೯ ಕೋಟಿ ಹೊಸ ಉದ್ಯೋಗಗಳು ನಿರ್ಮಾಣವಾಗಿದೆ ಹಾಗೂ ನರೆಂದ್ರ ಮೋದಿಯವರಿಗೆ ಅಧಿಕಾರವನ್ನು ಹಸ್ತಾಂತರ ಮಾಡುವಾಗ ಸಾಲದ ಶೇಕಡ ೧೪.೫೮ ರಷ್ಠಿದ್ದ ೨೦೨೪ ರಲ್ಲಿ ಅಂತ್ಯಗೊಂಡ ತ್ರೈ ಮಾಸಿಕದಲ್ಲಿ ಭಾರತದ ರಾಷ್ಟ್ರೀಕೃತ ಬ್ಯಾಂಕ್ಗಳ ಸಮಗ್ರ ಕೆಟ್ಟ ಸಾಲವು(ಜಿಎಂಪಿ) ಯು ೩.೧೨ ಕ್ಕೆ ಇಳಿದು ಬ್ಯಾಂಕ್ಗಳು ಲಾಭದಾಯಕವಾಗಿವೆ ಈ ರೀತಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಯನ್ನು ಏರಿಕೆ ಧರದಲ್ಲಿ ಕೊಂಡೊಯ್ಯುತ್ತಿದೆ ಎಂದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ೩ನೇ ಅವಧಿಯ ೨ನೇ ಬಜೆಟ್ನಲ್ಲಿ ನಿರುದ್ಯೋಗ ಸಮಸ್ಯೆಯನ್ನು ಕೇಂದ್ರವಾಗಿರಿಸಿಕೊಂಡು ಉತ್ಪಾದನಾ ವಲಯದಲ್ಲಿ ಕ್ರಾಂತಿಯನ್ನು ತರಿಸಿ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ದೇಶದಲ್ಲಿ ಅಭಿವೃದ್ಧಿಯ ಪರ್ವವನ್ನು ಪ್ರಾರಂಭಿಸುವ ಯೋಜನೆ ಇದಾಗಿದೆ ಎಂದರು ಅವರು ಕೇಂದ್ರದ ಬಜೆಟ್ ಸರ್ವ ವ್ಯಾಪಿಯಾಗಿದೆ ಎಂದರು
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದಲ್ಲಿನ ರಾಷ್ಟ್ರೀಯ ಸಮಸ್ಯೆಗಳ ಜೊತೆಗೆ ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳಂತ ಹಲವಾರು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಈ ಬಾರಿಯ ಬಜೆಟ್ನಲ್ಲು ನಿರುದ್ಯೋಗ ಸಮಸ್ಯೆಯನ್ನು ಬುಡದಿಂದ ಕಿತ್ತೊಗೆದು ಅಭಿವೃದ್ಧಿ ಹೋಂದಿದ ಭಾರತವನ್ನು ನಿರ್ಮಿಸಲು ಶ್ರಮವಹಿಸುತಿದ್ದಾರೆ. ಹೂಡಿಕೆ, ಮಹಿಳಾ ಸಬಲೀಕರಣ, ಮಧ್ಯಮ ವರ್ಗದವರ ಆರ್ಥಿಕ ಸುಧಾರಿಕೆ ಒಳಗೊಂಡಂತೆ ಸಾಮಾಜದ ಎಲ್ಲಾ ವರ್ಗದ ಜನರಿಗೆ ಬಜೆಟ್ ಸ್ನೇಹ ಮಾಯವಾಗಿದೆ ಎಂದ ಅವರು ವಿರೋಧಿಸುವವರ ಮಾತಿಗೆ ತಲೆದೂರದೇ ಬಜೆಟ್ನ ಹಿಂದಿನ ಉದ್ದೇಶವನ್ನು ಅರಿತು ಸಾರ ಸತ್ಯತೆಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಜವಬ್ದಾರಿ ನಮ್ಮದು ಎಂದರು
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಡಾ. ನರೇಂದ್ರ, ಕಲ್ಮರುಡಪ್ಪ, ಬಸವರಾಜ್, ಸೇರಿದಂತೆ ಉದ್ಯಮಿಗಳು, ವಿವಿಧ ಸಂಘದ ಪದಾಧಿಕಾರಿಗಳು, ವೈದ್ಯರು, ಕಾಲಜು ವಿದ್ಯಾರ್ಥಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Union Budget Dialogue Program organized at BJP office