ಚಿಕ್ಕಮಗಳೂರು: ನಗರದ ಅಂಡೆಛತ್ರ ಮುಸಾಫಿರ್ ಖಾನ್, ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಂಜುಮನ್ ವೆಲ್ಫೇರ್ ಗ್ರೂಪ್ ಭರ್ಜರಿ ಜಯಸಾದಿಸಿದೆ.
ನಗರದ ಐ.ಜಿ ರಸ್ತೆಯಲ್ಲಿರುವ ಉರ್ದು ಪ್ರಾಥಮಿಕ ಸರಕಾರಿ ಶಾಲೆಯಲ್ಲಿ ಮತದಾನ ನಡೆಯಿತು. ೫೭ ಮಂದಿ ಸ್ಪರ್ಧಾ ಕಣದಲ್ಲಿದ್ದರು. ಅಂಜುಮನ್ ವೆಲ್ಫೇರ್ ಗ್ರೂಪ್ನಿಂದ ೧೭ ಮಂದಿ ಕಣದಲ್ಲಿದ್ದು ಅದರಲ್ಲಿ ೧೪ ಮಂದಿ ವಿಜೇತರಾಗಿದ್ದಾರೆ. ಸಿಡಿಎ ಅಧ್ಯಕ್ಷ ನಯಾಜ್ ಅಹ್ಮದ್ ಅವರ ತಂಡದಿಂದ ೧೭ ಮಂದಿ ಚುನಾವಣೆಯಲ್ಲಿ ಸ್ಪರ್ದಿಸಿದ್ದು ಅದರಲ್ಲಿ ೫ ಮಂದಿ ಮಾತ್ರ ಗೆಲುವು ಸಾದಿಸಿದ್ದಾರೆ. ಯಾವುದೇ ಗ್ರೂಪ್ಗೆ ಸೇರದೆ ಪಕ್ಷೇತರರಾಗಿ ೨ ಮಂದಿ ವಿಜಯಶಾಲಿಗಳಾಗಿದ್ದು ಒಟ್ಟು ೨೧ ಮಂದಿ ಅಂಜುಮನ್ ಇ ಇಸ್ಲಾಮಿಯಾ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ವಿಜಯ ಗಳಿಸಿದವರಲ್ಲಿ ಅಬ್ದುಲ್ರಜಾಕ್, ಹಫೀಜ್ ಮೊಹಮದ್ರಿಯಾಜ್ಖಾನ್, ಮಸೂದ್ ಅಹ್ಮದ್, ನಜೀರ್ ಅಹ್ಮದ್, ನಾಸೀರ್ಖಾನ್, ಸಿ.ಪಿ.ಬಾಬರ್, ಸಿ.ಎ.ಮೊಹಮದ್ ಇಸ್ಮಾಯಿಲ್, ಅಬ್ರಾರ್ಖಾನ್, ಮೊಸಿನ್ಖಾನ್, ಹಸನ್ ಸಲೀಂ, ಮೊಹಮ್ಮದ್ಇರ್ಷಾದ್, ಮೊಹಮದ್ ಉಮರ್, ಶಿರಾಜ್ಖಾನ್, ಮೊಹಮದ್ ಜಿಯಾ, ಮೊಹಮ್ಮದ್ರಾಹಿಲ್ಪಾಷಾ, ನೂರ್ ಮೊಹಮದ್, ತಬ್ರೀಜ್ ಅಹ್ಮದ್, ಸಯದ್ಜಬೀ, ಮೊಹಮದ್ ಅಜ್ಮಲ್ಬಾಗಿ, ಅಜ್ಮಲ್, ಮೊಹಮದ್ ಅಬ್ರಾರ್ ಇವರುಗಳು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಕಾರಿ ನಿಸಾರ್ ಅಹ್ಮದ್ ತಿಳಿಸಿದ್ದಾರೆ
Anjuman-e-Islamia Organization.