ಚಿಕ್ಕಮಗಳೂರು- ಸರ್ಕಾರ ನೀಡುವ ಸಲಕರಣೆಗಳನ್ನು ಸದುಪಯೋಗಪಡಿಸಿಕೊಂಡು ಮೀನುಗಾರರು ಆರ್ಥಿಕ ಸದೃಢರಾಗಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು.
ಅವರು ಭಾನುವಾರ ಮೀನುಗಾರಿಕೆ ಇಲಾಖೆ ವತಿಯಿಂದ ನೀಡಲಾಗುವ ವಿವಿಧ ಸಲಕರಣೆಗಳನ್ನು ಮೀನುಗಾರ ಫಲಾನುಭವಿಗಳಿಗೆ ವಿತರಿಸಿ ನಂತರ ಮಾತನಾಡಿ ರೈತರಂತೆಯೇ ಮೀನುಗಾರರು ಜನತೆಗೆ ಆಹಾರವನ್ನು ಪೂರೈಕೆ ಮಾಡುವ ಕೆಲಸ ಮಾಡುತ್ತಾರೆ ಅವರ ಜೀವ ರಕ್ಷಣೆಗೂ ಸರ್ಕಾರ ಕ್ರಮ ವಹಿಸಬೇಕಾಗಿರುವುದು ಸರ್ಕಾರದ ಹೊಣೆಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ತಾವೇ ಮೊದಲು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ನಂತರ ರಾಜ್ಯದಾದ್ಯಂತ ಎಲ್ಲಾ ಮೀನುಗಾರರಿಗೆ ಜೀವರಕ್ಷಕ ಜಾಕೆಟ್ಗಳನ್ನು ವಿತರಿಸುವ ಕಾರ್ಯ ಆರಂಭವಾಯಿತು ಎಂದರು.
ತೆಪ್ಪ, ದೋಣಿ, ಬಲೆ ಮತ್ತು ಲೈಫ್ ಜಾಕೆಟ್ಗಳನ್ನು ವಿತರಿಸಲಾಗುತ್ತಿದೆ. ಇದನ್ನು ಪಡೆದ ಮೀನುಗಾರರು ಅದರಲ್ಲಿ ಬರುವ ಆದಾಯದಲ್ಲಿ ಉತ್ತಮ ರೀತಿ ಕುಟುಂಬ ಸಾಗಿಸುವಂತಾಗಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸಿ.ಆರ್.ಕವನ ಮಾತನಾಡಿ, ರಾಜ್ಯ ವಲಯ ಯೋಜನೆಯಿಂದ ೧೦ ಮಂದಿ ಫಲಾನುಭವಿಗಳಿಗೆ ಸಲಕರಣೆ ವಿತರಿಸಲಾಗಿದೆ. ಜಿಲ್ಲಾ ವಲಯ ಯೋಜನೆಯಿಂದ ಮತ್ತೊಮ್ಮೆ ಇತರೆ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಾಜಾ ಸಾಹೇಬ್, ಗ್ರಾ.ಪಂ.ಸದಸ್ಯ ಮಧು ಇತರರು ಹಾಜರಿದ್ದರು.
Take advantage of the facilities provided by the government.