ಚಿಕ್ಕಮಗಳೂರು: ಕಾಳ್ಗಿಚ್ಚು, ನೆರೆ, ಪ್ರವಾಹ ಹಾಗೂ ವನ್ಯಮೃಗಗಳ ಹಾವಳಿಯಿಂದ ರೈತರು ಬೆಳೆದ ಶ್ರೀಗಂಧದ ಸಸಿ, ಮರ ದ್ವಂಸಗೊಂಡರೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದ ಮಾತನಾಡಿದ ಸಂಘದ ಅಧ್ಯಕ್ಷ ಡಾ|| ಕೆ.ಸುಂದರಗೌಡ ತರೀಕೆರೆ ತಾಲ್ಲೂಕಿನ ಶಿವಪುರ ಗ್ರಾಮದ ವಿಶುಕುಮಾರ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಬೆಲೆಬಾಳುವ ಶ್ರೀಗಂಧ, ಗಾಳಿಮರ, ಮಾವು, ತೆಂಗು, ನುಗ್ಗೆಯ ತೋಟಕ್ಕೆ ಕಾಳ್ಗಿಚ್ಚು ತಗುಲಿ ಮರ ಗಳು ಹೊತ್ತಿ ಉರಿದು ಲಕ್ಷಾಂತರ ಮೌಲ್ಯದ ಆಸ್ತಿ ಹಾನಿಯಾಗಿದೆ ಎಂದರು.
ಕೆಲವೇ ವರ್ಷಗಳಲ್ಲಿ ಉತ್ತಮ ಫಸಲನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ರೈತನ ಸ್ಥಿತಿ ಕಂಗಾಲಾಗಿದೆ. ಈ ಕುರಿತಾಗಿ ಶೀಘ್ರವೇ ನ್ಯಾಯಯುತವಾದ ಪರಿಹಾರವನ್ನು ನೊಂದ ರೈತನಿಗೆ ನೀಡಬೇಕು. ಜೊತೆಗೆ ಈ ರೀತಿಯ ಘಟನೆಗಳು ರಾಜ್ಯದ ಯಾವ ಮೂಲೆಗಳಲ್ಲಿ ಸಂಭವಿಸಿದರೂ ಸರ್ಕಾರ ಕೂಡಲೇ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಯಿಂದ ಎಲ್ಲೆಂದರಲ್ಲಿ ಬೆಂಕಿಯ ಅವಘಡಗಳು ಸಂಭ ವಿಸುತ್ತಿದೆ. ಹತ್ತಾರು ವರ್ಷಗಳ ಬೆಳೆಸಿದ ಶ್ರೀಗಂಧ, ತೇಗ, ಮಹಾಘೋನಿ, ಬೀಟೆ, ರಕ್ತಚಂದನ ವೃಕ್ಷಗಳು ಬೆಂಕಿಗೆ ಆಹುತಿಯಾಗಲಿವೆ. ಇದು ಕಷ್ಟಪಟ್ಟು ಬೆಳೆಸಿದ ರೈತರಿಗೆ ನುಂಗಲಾರದ ತುತ್ತಾಗಿ ಪರಿಣಿಮಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ರೈತ ಸಮುದಾಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿವೆ. ಹನಿ ನೀರಿಗೂ ತತ್ಪಾರವಿರು ವ ಈ ವಿಷಮ ಸಮಯದಲ್ಲಿ ರೈತರ ಕಂಬನಿ ಒರೆಸುವ ಕೆಲಸವು ಸರ್ಕಾರ ಮಾಡಬೇಕಿದೆ. ಶ್ರೀಗಂಧ ಅರ ಣ್ಯ ಇಲಾಖೆಯಡಿಯಲ್ಲಿ ಇರುವುದರಿಂದ ನೈಸರ್ಗಿಕ ವಿಕೋಪಗಳಿಂದ ಉಂಟಾದ ಬದಲಾವಣೆಗೂ ಉತ್ತ ರದಾಯಿತ್ವ ಅರಣ್ಯ ಇಲಾಖೆಯಾಗಿದೆ ಎಂದರು.
ಆದ್ದರಿಂದ ಆಕಸ್ಮಿಕ ಬೆಂಕಿಗಾಹುತಿ ಅಥವಾ ಪ್ರವಾಹ ಪರಿಸ್ಥಿತಿ ಎದುರಾದರೆ ಪರಿಹಾರ ಕುರಿತಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಶ್ರೀಗಂಧ ಬೆಳೆಗಾರರ ಬವಣೆ ಪರಿಹರಿಸಲು ಕೋರಿ ದೆ. ಈ ಅಪರೂಪದ ಪ್ರಕರಣಗಳನ್ನು ಪರಿಹರಿಸಲು ಅವಕಾಶವಿದ್ದರೆ ಪರಿಹಾರ ಘೋಷಣೆ ಮಾಡಲು ಸಹ ಸಂಘವು ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಚಾಲಕ ವಿಶುಕುಮಾರ್ ಹಾಗೂ ಕುಟುಂಬಸ್ಥರು, ಪರಿಹಾರ ಕಾಂಕ್ಷಿಗಳು ಹಾಜರಿದ್ದರು.
Valuable trees destroyed by forest fire: Demand for compensation