ಚಿಕ್ಕಮಗಳೂರು: ಕಳ್ಳತನದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ೮.೫೦ ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಅಯ್ಯಪ್ಪನಗರದ ೧ನೇ ತಿರುವಿನಲ್ಲಿರುವ ಹಸ್ಟೈನ್ ಅಹಮದ್ ಅವರ ಮನೆಯಲ್ಲಿ ಮಾರ್ಚ್ ೨ರಂದು ಸುಮಾರು ೬೭ ಗ್ರಾಂ ಚಿನ್ನದ ಒಡವೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯ ಶೀಘ್ರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಡಾ.ವಿಕ್ರಮ್ ಅಮಟೆ, ಉಪಪೊಲೀಸ್ ಮುಖ್ಯಾಧಿಕಾರಿ ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ಉಪನಿರೀಕ್ಷ ಬಾಬುದ್ದೀನ್, ಸಿಬ್ಬಂದಿಗಳಾದ ದಿನೇಶ್, ನಂಜಪ್ಪ,ಪ್ರದೀಪ. ನವೀನ, ಮಂಜುನಾಥ್ನಾಯ್ಕ, ಮಹಮ್ಮದ್ ರಫೀಕ್ ಘಾಟಿ, ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಕಳವು ಆರೋಪಿತ ಕಡೂರು ಪಟ್ಟಣದ ತ್ಯಾಗರಾಜನಗವರದ ಕಾರ್ಪೆಂಟರ್ ವಿರುಪಾಕ್ಷನನ್ನು ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಆಕದ್ದಮಾಲು ಪತ್ತೆ ಮಾಡಿ ಆತನನ್ನು ಬಂಧಿಸಿ ಚಿನ್ನ ಮತ್ತು ವಜ್ರ ಖಚಿತ ೩ ಬಳೆಗಳು,ಒಂದು ಚಿನ್ನದ ಉಂಗುರ,ಒಂದು ಚಿನ್ನದ ಸರ ಮತ್ತು ವಜ್ರದ ಲಾಕೆಟ್ ಒಟ್ಟು ೬೩ ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ ೮.೫೦ ಲಕ್ಷ ರೂ.ಗಳಾಗಿರುತ್ತದೆ. ಕಳವು ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Accused in theft case arrested – gold ornaments worth Rs 8.50 lakh seized