ಚಿಕ್ಕಮಗಳೂರು: ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ ಅವರೊಬ್ಬ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ವಿಧಾನ ಸಭೆ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಡಿದರು.
ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ಥಂಭಗಳಾಗಿದೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಅವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಿಂದ ತೆರೆದುಕೊಳ್ಳಬೇಕಿದೆ ಎಂದರು.
ಸಮಾನತೆಯ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಯನದ ಶಿಸ್ತು, ಕಾರ್ಯಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ಇಡೀ ಜಗತ್ತನ್ನೇ ಬೆಳಗಿದರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದರು. ಅವರು ಕೌಟುಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ದೇಶಕ್ಕೆ ನೀಡಿದ ಸಂವಿಧಾನದ ಆಶಯಕ್ಕೆ ಚ್ಯುತಿಯಾಗದಂತೆ ಪ್ರತಿಯೊಬ್ಬರು ಅದನ್ನು ಉಳಿಸುವ ಪ್ರಯತ್ನ ಮಾಡಿದಾಗ ಅಂಬೇಡ್ಕರ್ ಜಯಂತಿಗೆ ಪರಿಪೂರ್ಣ ಅರ್ಥ ದೊರೆಯುತ್ತದೆ ಎಂದು ಹೇಳಿದರು
ಒಂದು ಧರ್ಮವೇ ಅತ್ಯುನ್ನತ, ಅದರ ಸಾರವೇ ಶ್ರೇಷ್ಠ ಎನ್ನುವವರು ಕೋಮುವಾದಿಗಳು. ಇನ್ನೊಂದು ಧರ್ಮವನ್ನು ಸಹ ಪ್ರೀತಿ ವಿಶ್ವಾಸದಿಂದ ಕಂಡಾಗ, ಸಂವಿಧಾನದ ಆಶಯದಂತೆ ಸರ್ವಧರ್ಮ ಭಾವೈಕ್ಯತೆಯ ಸಂದೇಶವನ್ನು ಪಸರಿಸಬಹುದು ಅಂಬೇಡ್ಕರ್ ಅವರು ತಮ್ಮ ಮನಸ್ಸಿನ ಮೇಲಾದ ಗಾಯಕ್ಕೆ ಪ್ರತಿಯಾಗಿ ಸೆಟೆದು ನಿಂತು, ಶಿಕ್ಷಣದ ಕ್ರಾಂತಿಯನ್ನು ಹುಟ್ಟು ಹಾಕಿದರು. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕದಿದ್ದರೆ, ಅಸ್ಪೃಶ್ಯತೆ ಹಾಗೂ ಅಸಮಾನತೆಯು ಸಮಾಜದಿಂದ ನಿರ್ಮೂಲನೆಯಾಗುವುದಿಲ್ಲ ಎಂದು ಹೇಳಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಉಪನ್ಯಾಸ ನೀಡಿ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ : ಭಾರತ ಭವ್ಯ ಭಾಗ್ಯದ ನೇತಾರ!’ನೋವಲ್ಲಿ ಹುಟ್ಟಿ ನೋವಲ್ಲೇ ಬೆಳೆದು ನೋವೆಂದರೇನೆಂದು ಕ್ಷಣಕ್ಷಣವೂ ಅನುಭವಿಸಿದ ಧೀರ ಮಾನಸ ತ್ಯಾಗಿ.ತಾನುಂಡ ನೋವು, ಮತ್ತಾರಿಗೂ ಬೇಡೆಂದು ತನ್ನ ಜೀವನವನ್ನೇ ತೇದು ಅರಿವಿನಹಣತೆ ಬೆಳಗಿದ ಅನನ್ಯ ಕಾಯಕ ಯೋಗಿ!ಬಾಬಾ ಸಾಹೇಬ ಡಾ, ಬಿ.ಆರ್. ಅಂಬೇಡ್ಕರನಿಮ್ಮ ತತ್ವ ಸಂದೇಶಗಳು ಜಗದ ಎಲ್ಲೆಡೆ ಹರಡಿ,ನಲಿವ ತರಲಿ, ಮನುಜ ಕುಲದ ನೋವ ನೀಗಿ’.
ಮಧ್ಯಪ್ರದೇಶದ ಮಾವು ಗ್ರಾಮದ ಮಿಲಿಟರಿ ಕ್ಯಾಂಪ್. ಇಲ್ಲಿ ಮಿಲಿಟರಿ ಶಾಲೆಯ ಉಪಾದ್ಯಾಯರು ಮಹರ್ ಸಮುದಾಯದ ರಾಮಜಿ ಮಲೋಜಿ ಸಂಕಪಾಲ್. ಪತ್ನಿ ಭೀಮಾ ಬಾಯಿ, ಈ ಪುಣ್ಯ ದಂಪತಿಗಳಿಗೆ ೧೪ ನೇ ಮಗುವಾಗಿ ೧೮೯೧ ರ ಏಪ್ರಿಲ್ ೧೪ ರಂದು ಹುಟ್ಟಿದ ಮಗು ಭೀಮರಾವ್ ೧೪ ಮಕ್ಕಳು ಒಡಹುಟ್ಟಿದರೂ ಉಳಿದಿದ್ದು ಐದೇ ಜನ. ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್.
ಸತಾರದಲ್ಲಿ ಭೀಮರಾವ್ ಪ್ರಾಥಮಿಕ ಶಿಕ್ಷಣ ಆರಂಭವಾಯಿತು ಆದರೆ, ಆರು ವ?ದ ಎಳೆತನದಲ್ಲೇ ತಾಯಿಯ ಮರಣದ ನೋವು ಬಾಲಕನ ಮೇಲೆ ಅಪಾರ ಪರಿಣಾಮ ಬೀರಿತು. ಆ ನೋವನ್ನು ಕಿಂಚಿತ್ತಾದರೂ ಶಮನ ಮಾಡುವ ಹೊಣೆಯನ್ನು ತಂದೆಯ ತಂಗಿ, ಸೋದರತ್ತೆ ಮೀರಬಾಯಿ ವಹಿಸಿಕೊಂಡರು.
ಮನೆಯ ನೋವನ್ನು ಹೇಗೋ ನುಂಗಬಹುದು, ಆದರೆ, ಶಾಲೆ? ಆರನೇ ವಯಸ್ಸಿನಲ್ಲೇ, ಭೀಮರಾ??ಗೆ ಶಾಲೆಯಲ್ಲಿ ಅಸ್ಪೃಶ್ಯತೆಯ ಕರಾಳ ಮುಖದ ಪರಿಚಯ ಆಗತೊಡಗಿತು. ತರಗತಿಯ ಹೊರಗೆ ಕುಳಿತು ಪಾಠ ಕೇಳಬೇಕಾದ ದುರ್ಭರ ಸ್ಥಿತಿ ಈ ಪುಟ್ಟ ಮಗುವಿನ ಮನವನ್ನು ಘಾಸಿ ಮಾಡಿತ್ತು. ಆದರೆ ಇದು ಆರಂಭ ಮಾತ್ರ, ಮುಂದಿನ ಶಾಲಾ ದಿನಗಳೆಲ್ಲಾ ಇವೇ, ಹೀಗೆ ಎಂಬ ಅರಿವು ಹೆಚ್ಚಿದಾಗ ಶಿಕ್ಷಣ ಪಡೆಯುವುದೇ ಅಸಹ್ಯ ಅನುಭವವಾಯಿತು. ಇಂಥ ದಿನಗಳಲ್ಲಿ ಸಹನೀಯರೆನಿಸಿದ ಒಬ್ಬರೇ ಗುರುಗಳು ಫೆಂಡಸೇ ಅಂಬೇಡ್ಕರ್. ಇವರ ಕಾರಣದಿಂದಲೇ ಭೀಮರಾವ್ ಹೆಸರಿನ ಮುಂದೆ ರಾಮಜಿ ಅಂಬೇಡ್ಕರ್ ಹೆಸರು ಶಾಶ್ವತವಾಗಿ ಸೇರುವಂತಾಯಿತು. ಮುಂದೆ ಮಾಧ್ಯಮಿಕ ಶಿಕ್ಷಣಕ್ಕೆ ಬಾಂಬೆ ಸರ್ಕಾರಿ ಪ್ರೌಢಶಾಲೆ, ಎಲಿಫ??ಸ್ಟನ್ ಹೈಸ್ಕೂಲಿಗೆ ಬಂದಾಗ ಪಟ್ಟಣದ ಶಿಕ್ಷಣ ಸಹನೀಯ ಆಗಬಹುದೇನೋ ಎನ್ನುವ ನಿರೀಕ್ಷೆಯು ಪೂರ್ಣ ತಲೆಕೆಳಕಾಗಿ ಹಳ್ಳಿಗಿಂತಲೂ ಹೆಚ್ಚಿನ ಶೋ?ಣೆ, ಅನ್ಯಾಯ, ಚುಚ್ಚುಮಾತು, ಅವಮಾನಗಳಿಗೆ ಒಳಗಾಗಬೇಕಾಯಿತು. ಕಹಿ ಅನುಭವಗಳ ಮಧ್ಯೆಯೇ (೧೯೧) ರಲ್ಲಿ ೧೦ ನೇ ತರಗತಿ ಉತ್ತೀರ್ಣರಾದದ್ದು ಇಡೀ ಸಮುದಾಯದ ಹೆಮ್ಮೆಯಾಗುತ್ತದೆ. ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಕೆ.ಎ. ಕೆಲಸ್ಕರ್ ರವರು ನೀವು ನಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕು’ ಎಂದು ಹರಸಿ, ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡುವುದಾಗಿ ವಚನವನ್ನು ನೀಡುತ್ತಾರೆ. ಅವರು ಅಂದು ನೀಡಿದ ಭಗವಾನ್ ಬುದ್ದನ ಚರಿತೆ ಬುದ್ದನ ಬಗೆಗಿನ ಅಂಬೇಡ್ಕರ್ ಭಾವಧಾರೆಗೆ ಅಡಿಗಲ್ಲಾಯಿತು.
೧೯೧೩ ರಿಂದ ೧೯೧೬ ರವರೆಗೆ ಅಮೇರಿಕಾದಲ್ಲಿ ಅಂಬೇಡ್ಕರ್ ಕಳೆದ ಸಮಯ ಅವರ ಜೀವನದ ಅತ್ಯಂತ ಮಹತ್ವದ ಕ್ಷಣಗಳಾಗಿದ್ದುವು. ಆ ಮುಕ್ತ ಪರಿಸರ ಅವರ ಪ್ರತಿಭೆಗೆ ಉತ್ತಮ ಅವಕಾಶ ನೀಡಿತು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ತರ್ಕಶಾಸ್ತ್ರ, ರಾಜ್ಯಶಾಸ್ತ್ರಗಳ ಅಧ್ಯಯನ, ೧೯೧೬ ರಲ್ಲಿ ‘ಭಾರತದಲ್ಲಿ ರಾಷ್ಟ್ರೀಯ ಪ್ರಾಚೀನ ಭಾರತದ ವಾಣಿಜ್ಯ ಉತ್ಪನ್ನಪ್ರಬಂಧಕ್ಕೆ ಪಿ.ಹೆಚ್.ಡಿ ‘ಭಾರತೀಯ ಜಾತಿಗಳು’ ‘ಭಾರತದಲ್ಲಿ ರಾಷ್ಟ್ರೀಯ ಹಣಕಸಿನ ವಿಕಾಸ’ ಮುಂತಾದ ಪ್ರಬಂಧಗಳು ಅಂಬೇಡ್ಕರ್ ಅವರಿಗೆ ವಿಶೇ? ಹೆಸರು ತಂದುಕೊಟ್ಟವು.
ಭಾರತದಲ್ಲಿ, ಎಲ್ಲಿ ಕಾಲಿಟ್ಟರು ಮತ್ತೇ ಮತ್ತೇ ಅದೇ ಯಾತನೆ ಶೋ?ಣೆ ಅಪಮಾನಗಳ ಪುನಾರಾವರ್ತನೆ. ವಿದೇಶದ ವಾಸ ಕೊಟ್ಟಿದ್ದ ಗಟ್ಟಿತನದಲ್ಲಿ ಅಂಬೇಡ್ಕರ್ ಅಂದೇ ಪ್ರತಿಜ್ಞೆ ಮಾಡಿದರು, ತನಗಲ್ಲ ತನ್ನವರಿಗಾಗಿ. ಶತ ಶತಮಾನಗಳಿಂದ ಶೋ?ಣೆಗೆ ಒಳಗಾಗಿ ದಮನಿಸಲ್ಪಟ್ಟವರಿಗಾಗಿ ॒ಆ ನೋವು ಶೋ?ಣೆಗಳಿಗೆ ಒಂದು ತಾತ್ವಿಕ ಅಂತ್ಯ ನೀಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.
ಈಗ ಅವರಿಗೆ ‘ಮನು? ವಿಧಿಯ’ ಕೈಗೊಂಬೆ ಅಲ್ಲ, ಅವನ ಭವಿ?ವನ್ನು ಅವನೇ ರೂಪಿಸಿಕೊಳ್ಳಬಲ್ಲ. ಹಿರಿಯ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ದೊಡ್ಡವನಾಗಲಾರ ಎಂದು ಸಾವಿರ ವ?ಗಳ ಹಿಂದೆಯೇ ಸಾರಿ ಸಾರಿ ಹೇಳಿದ್ದ ಬುದ್ದನ ಮಾತುಗಳು ಪ್ರಿಯವಾಗತೊಡಗಿದವು. ‘ಭಾರತದಲ್ಲಿ ಜಾತಿಗಳು, ಅವುಗಳ ರಚನೆ, ಉತ್ಪತ್ತಿ ಮತ್ತು ಬೆಳವಣಿಗೆ’ ಕೃತಿರಚನೆಯ ವೇಳೆಗೆ ಅವರು ಬೌದ್ದ ಸಾಹಿತ್ಯದ ಅಮೂಲಾಗ್ರವನ್ನು ಅಧ್ಯಯನ ಮಾಡಿದ್ದರು.
ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಅಗತ್ಯ ಬಹಳ ಹೆಚ್ಚಿದೆ ಎಂದು ಪ್ರತಿಪಾದಿಸಿದ್ದ ಜ್ಯೋತಿ ಬಾ ಫುಲೆ ರಾಜಕೀಯ ತತ್ವಶಾಸ್ತ್ರಗಳ ಅಪೂರ್ವ ಚಿಂತಕ ಎಂ.ಜಿ ರಾನಡೆ, ಅವರ ಅಪಾರ ಪ್ರಭಾವವೂ ಅಂಬೇಡ್ಕರ್ ಅವಿರಿಗಾಯಿತು.
ಮತ್ತೇ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಲು ಸಿಕ್ಕಿದ ಅವಕಾಶವನ್ನು ಸಾರ್ಥಕ ಮಾಡಿಕೊಂಡ ಅಂಬೇಡ್ಕರ್ ಅಲ್ಲಿ ವರ್ತಮಾನ, ವಾಸ್ತವಿಕ ಸಮಸ್ಯೆಗಳನ್ನು ಚರಿತೆ, ಮತ, ಧರ್ಮ, ರಾಜ್ಯಾಶಾಸ್ತ್ರ, ಅರ್ಥಶಾಸ್ತ್ರಗಳಂತಹ ವಿ?ಯಗಳ ಒಳಗೆ ಇಳಿದು ಅಂತರಾಷ್ಟ್ರೀಯ ಅಧ್ಯಯನದ ಮೂಲಕ ವಿಶ್ಲೇಷಿಸಿದರು ಇಲ್ಲಿಯೂ ಪದವಿಗಳ ಸರಮಾಲೆಯನ್ನೇ ತೊಡಿಸಿಕೊಂಡರು. ಒಂದು ಅಧ್ಯಯನದ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಪದವಿ ಪಡೆದ, ಅತಿ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.
ಮೂಕನಾಯಕ ಪತ್ರಿಕೆ, ಬಹಿ?ತ ಹಿತಕಾರಣಿ ಸಭಾ, ಮಹತ್ ಸತ್ಯಾಗ್ರಹಿ, ದೇಗುಲ ಪ್ರವೇಶ ಮುಂತಾದ ಹೋರಾಟಗಳು ಅಂಬೇಡ್ಕರ್ ಜೀವನದ ಭಾಗಗಳಾಗಿದ್ದವು. ಈ ಹೋರಾಟದ ಸಂದರ್ಭದಲ್ಲೇ ಅಂಬೇಡ್ಕರ್ ಹಿಂದೂ ಮನಃ ಪರಿವರ್ತನೆಯ ಮೂಲಕ ಅಸ್ಪೃಶ್ಯರ ಏಳಿಗೆಯ ಕನಸು ನನಸಾಗಲಾರದು. ಅಸ್ಪೃಶ್ಯ ಸಮಾಜಕ್ಕೆ ಈಗ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ, ಮೀಸಲಾತಿ ಮತ್ತು ರಾಜಕೀಯ ಹಕ್ಕುಗಳು ಎನ್ನುವುದನ್ನು ಮನಗಂಡರು. ಇದಾದ ಮೇಲೆ ಅವರ ಗುರಿ ಪಾರ್ಲಿಮೆಂಟಿನ ಪ್ರಜಾ ಪ್ರಭುತ್ವದ ಕಡೆಗೆ ಹೊರಳಿತು. ೧೯೩೦ ರ ನಂತರ ಅಂಬೇಡ್ಕರ್ ಪ್ರಬಲ ಸಾಮಾಜಿಕ ಕ್ರಾಂತಿಕಾರಿ ಆದರು. ಬ್ರಿಟೀ?ರ ಒಡೆದು ಆಳುವ ನೀತಿಯ ಕಾರಣದಿಂದ ಆ ಸಮಯದ ಭಾರತ ಛಿದ್ರ ಛಿದ್ರವಾಗುತ್ತಿತ್ತು, ಬಲಿ?ವಾಗುತ್ತಿದ್ದ ರಾಷ್ಟ್ರೀಯ ಚಳುವಳಿಯಲ್ಲಿ ದೇಶೀಯ ರಾಜರು; ಮುಸ್ಲಿಂ ಸಮುದಾಯ; ದಲಿತರು; ಅಲ್ಪಸಂಖ್ಯಾತರು, ಇವರ ಸ್ಥಾನಮಾನಗಳು ತಳುಕು ಹಾಕಿಕೊಂಡು ಗೊಂದಲಮಯ ವಾತಾವರಣ ಉಕ್ಕತೊಡಗಿತ್ತು.
ರಾಜಕೀಯ ಏಳು ಬೀಳುಗಳು ಅಂಬೇಡ್ಕರ್ ಮನವನ್ನು ಹಿಂಡಿ ಹಿಪ್ಪೆ ಮಾಡಿದರೂ ಬೌದ್ಧಿಕವಾಗಿ ಅವರು ಪ್ರಜ್ವಲಿಸುತ್ತಲೇ ಬೆಳೆದರು. ೧೯೪೬ ರಲ್ಲಿ ಬಂಗಾಳದಿಂದ ಆಯ್ಕೆಯಾಗಿ ೧೯೪೭ರ ದೇಶದ ವಿಭಜನೆಯ ಕಾರಣದಿಂದ ಮತ್ತೇ ಬಾಂಬೆ ವಿಧಾನಸಭೆ ಮೂಲಕ ಸಂಸತ್ ಪ್ರವೇಶಿಸಿ ಸಂವಿಧಾನ ರಚನಾ ಸಭೆಗೆ ನೇಮಕಗೊಂಡಿದ್ದು ನಮ್ಮ ಇತಿಹಾಸದ ಸುವರ್ಣ ಕ್ಷಣಗಳು. ನೆಹರೂ ಮಂತ್ರಿಮಂಡಲದಲ್ಲಿ ಕಾನೂನು ಮಂತ್ರಿಯಾಗಿ, ಭಾರತದ ಸಂವಿಧಾನದ ಕರಡು ಪ್ರತಿಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಕ್ಷಣ ಕಾಲದ ವಿಶ್ರಾಂತಿಯೂ ಇಲ್ಲದೇ ದುಡಿದ ಅಪ್ರತಿಮ ತ್ಯಾಗಿಯಾದರು. ನವಭಾರತವು ಚಿರಕಾಲ ಬದುಕಬೇಕೆಂಬ ಆಶಯದಿಂದ ಅದಕ್ಕೆ ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವದ ಭದ್ರ ಬುನಾದಿ ಹಾಕಿ ಸಂವಿಧಾನ ರಚಿಸಿದರು. ಪ್ರಜಾಪ್ರಭುತ್ವ ಎಂದರೆ ಅಂಬೇಡ್ಕರ್ ಪಾಲಿಗೆ ಕೇವಲ ಆಡಳಿತ ಕ್ರಮ ಆಗಿರಲಿಲ್ಲ, ಅದು ಭಾರತೀಯ ಜೀವನ ವಿಧಾನವೇ ಆಗಿತ್ತು.
ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಈಗ ಹೆಸರಿಗೆ ಮಾತ್ರ ಮಹಾರಾ?ದವರು! ಆದರೆ ಅಕ್ಷರಶಃ ಅವರು ಭಾರತದ ಮನೆಮನೆಯ ಬೆಳಕು! ಇಡೀ ಭಾರತೀಯರಿಗೆ ‘ತಮ್ಮತನ’ ವನ್ನು ಕಲ್ಪಿಸಿಕೊಟ್ಟ, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಮನದಾಳದಿಂದ ಅಭಿವಂದಿಸಬೇಕು.ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿ.ಆರ್ ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ಮಾಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ. ಯುವ ಜನಾಂಗ ಅವರ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.
ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ, ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿದೆ. ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಪ್ರಭುತ್ವ ರಾಷ್ಟವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ,ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್,ಹಾಗೂ ದಲಿತ ಸಂಘದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಆವರಣದಲ್ಲಿರು ಡಾ.ಬಿ ಆರ್ ಅಂಬೇಡ್ಕರ್ ಪುತ್ತಳಿಗೆಗೆ ಗಣ್ಯರಿಂದ ಮಾಲರ್ಪಣೆ ನಡೆಯಿತು. ನಂತರ ನಗರದ ತಾಲ್ಲೂಕು ಕಛೇರಿಯಿಂದ ಕುವೆಂಪು ಕಲಾಮಂದಿರದ ವೆರೆಗೆ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ರವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.
Dr. B.R. Ambedkar was a multi-faceted cosmologist