ಚಿಕ್ಕಮಗಳೂರು: ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಶಿಬಿರದಲ್ಲಿ ಪಾಲ್ಗೊಂಡು ಸದೃಢ ದೇಹ ಮತ್ತು ಮನಸ್ಸನ್ನು ಹೊಂದಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಮಕ್ಕಳಿಗೆ ಕಿವಿಮಾತು ಹೇಳಿದರು.
ಭಾನುವಾರ ನಗರದ ಪೊಲೀಸ್ ಮೀಸಲು ಪಡೆ ಆಟದ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ೧೦ ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಿವಿಧ ಆಟೋಟ ಸೇರಿದಂತೆ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.
ಶಿಬಿರದಲ್ಲಿ ವಿವಿಧ ಆಟೋಟಗಳ ಜತೆಗೆ ಶೈಕ್ಷಣಿಕ ಪ್ರವಾಸ, ಹಾಲು ಉತ್ಪಾದನಾ ಕೇಂದ್ರ, ಕಾಫಿ ಎಸ್ಟೇಟ್, ಲೈಫ್ಲೈನ್ ಇಂಡಸ್ಟಿçà ಹಾಗೂ ಬೇಲೂರು, ಹಳೇಬೀಡಿಗೆ ಪ್ರವಾಸ ಕರೆದೊಯ್ಯಲಾಗುವುದು ಎಂದ ಅವರು, ಮಕ್ಕಳು ಬೆಳಿಗ್ಗೆ ೧೦ಗಂಟೆಯಿAದ ಮಧ್ಯಾಹ್ನ ೧ಗಂಟೆಯವರೆಗೂ ಶಿಬಿರದಲ್ಲಿ ಪಾಲ್ಗೊಂಡು ಉತ್ಸಹದಿಂದ ಇಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಯೋಗ ತರಬೇತಿದಾರರು ಯೋಗ ತಿಳಿಸಿಕೊಡಲಿದ್ದಾರೆ. ಹಾಗೇ ರಂಗ ತರಬೇತಿದಾ ರರು ರಂಗ ಕಲೆಯ ಬಗ್ಗೆ ಕಲಿಸಿಕೊಡಲಿದ್ದಾರೆ. ವೈದ್ಯರು ಶಿಬಿರಕ್ಕೆ ಆಗಮಿಸಿ ಪ್ರಥಮ ಚಿಕತ್ಸೆ ಎಂದರೇನು ಎನ್ನುವ ವಿಚಾರಗಳನ್ನು ತಿಳಿಸಿಕೊಡಲಿದ್ದಾರೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ತನ್ನ ಸ್ನೇಹಿತರನ್ನು ಅಕ್ಕಪಕ್ಕದಲ್ಲಿನ ಮಕ್ಕಳನ್ನು ಶಿಬಿರಕ್ಕೆ ಕರೆತಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿದಿನ ನಡೆಯುವ ಇವೆಂಟ್ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಗುವುದು ಎಂದ ಅವರು, ಶಿಬಿರ ಆಯೋಜಿಸುವ ಉದ್ದೇಶ ಬೇಸಿಗೆ ರಜೆಯಲ್ಲಿ ಮಕ್ಕಳು ಬಹುತೇಕ ಮಕ್ಕಳು ಶಿಬಿರಗಳಿಗೆ ಹೋಗುತ್ತಾರೆ. ಆದರೆ, ಪೊಲೀಸ್ ಸಿಬ್ಬಂದಿ ಮಕ್ಕಳು ಸೇರಿದಂತೆ ಇತರೆ ಉದ್ಯೋಗಿಗಳ ಮಕ್ಕಳು ಶಿಬಿರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅಂತವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಮಕ್ಕಳು ಹಾಗೂ ಪೋಷಕರು ಇದ್ದರು.
A strong mind resides in a strong body.