ಚಿಕ್ಕಮಗಳೂರು : ಕಾಶ್ಮೀರದಲ್ಲಿ ಪ್ರವಾಸಿಗರು ನಡೆಸಿದ ಉಗ್ರರ ದಾಳಿ ಯಿಂದ ಕೊಪ್ಪ ತಾಲೂಕಿನ ಕುಣಿಮಕ್ಕಿ ಮೂಲದ ಮಂಜುನಾಥ್ ರಾವ್ ಸಾವನ್ನಪ್ಪಿದ್ದಾರೆ.
ಮಂಜುನಾಥ್ ರಾವ್ ತಂದೆ ಶಿವಮೊಗ್ಗ ಮ್ಯಾಮ್ ಕೋಸ್ ನಲ್ಲಿ ಮ್ಯಾಮೇಜರ್ ಆಗಿದ್ದರು.ನಿವೃತ್ತಿ ಬಳಿಕ 20 ವರ್ಷಗಳ ಹಿಂದೆಯೇ ಶಿವಮೊಗ್ಗ ತೆರಳಿದ್ದರು.
ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ಮಾಡಿಕೊಂಡಿಕೊಂಡಿದ್ದ ಮಂಜುನಾಥ್ ರಾವ್ ಪತ್ನಿ ಪಲ್ಲವಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್ ನಲ್ಲಿ ಮ್ಯಾನೇಜರ್ ಆಗಿದ್ದಾರೆ.
19 ರಂದು ಮಗನ ಜೊತೆ ದಂಪತಿಗಳು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು.ಮಗನ ಪಿಯುಸಿ ಪರೀಕ್ಷೆ ಮುಗಿದ ಬಳಿಕ 6 ದಿನಗಳ ಪ್ಯಾಕೇಜ್ ನಲ್ಲಿ ಕಾಶ್ಮೀರ ಪ್ರವಾಸ ಹಮ್ಮಿಕೊಂಡಿದ್ದರು.
ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್ ಕರೆ ಮಾಡಿ 24ನೇ ತಾರೀಕು ವಾಪಸ್ ಬರ್ತೀವಿ ಎಂದಿದ್ದರು ಎಂದು ಹೇಳಲಾಗಿದೆ.
Manjunath Rao a native of Kunimakki Koppa taluk was killed in a terrorist attack