ಚಿಕ್ಕಮಗಳೂರು: ಪ್ರಕೃತಿಯ ನಡುವೆ ಜೀವನ ರೂಪಿಸಿಕೊಂಡಿರುವ ಆದಿವಾಸಿಯ ಬುಡ ಕಟ್ಟು ಜನಾಂಗದವರು ಮೊದಲು ಶಿಕ್ಷಣ, ಆರೋಗ್ಯದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿಕೊಂಡು ಸಮರ್ಥ ವ್ಯಕ್ತಿ ಗಳಾಗಬೇಕು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಕರೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ನ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ಧ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.
ಪೂರ್ವಿಕರ ಕಾಲದಿಂದಲೂ ಕಾಡಿನ ಮಧ್ಯೆಯೇ ಬದುಕು ಕಟ್ಟಿಕೊಂಡು ಸಾಗುತ್ತಿರುವ ಜನಾಂಗದವ ರು ತಮ್ಮ ಮಕ್ಕಳ ಭವಿಷ್ಯವನ್ನು ಶಿಕ್ಷಣದಿಂದ ವಂಚಿತಗೊಳಿಸಬಾರದು. ಐಎಎಸ್, ಐಪಿಎಸ್ ಅಥವಾ ಸ ರ್ಕಾರಿ ಹುದ್ದೆಗಳ ಕನಸುಗಳನ್ನು ಹೊತ್ತಿರುವ ಮಕ್ಕಳಿಗೆ ಪಾಲಕರು ಎಲ್ಲಾ ಹಂತದಲ್ಲೂ ಪ್ರೋತ್ಸಾಹಿಸಬೇಕು ಎಂದರು.
ಬುಡಕಟ್ಟು ಸಮುದಾಯವನ್ನು ಮೇಲ್ದರ್ಜೇಗೇರಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರ ಅನೇಕ ಸವಲ ತ್ತುಗಳನ್ನು ಪೂರೈಸಿ ಹೊಸಬದುಕನ್ನು ರೂಪಿಸುತ್ತಿದೆ. ಆ ನಿಟ್ಟಿನಲ್ಲಿ ಜನಾಂಗದ ಮಕ್ಕಳು ಕಠಿಣ ಪರಿಶ್ರಮ, ನಿರಂತರ ಕಲಿಕೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ಜೊತೆಗೆ ಪೂರ್ವಿಕರ ಆಚಾರ-ವಿಚಾರ ,ಪೂಜಾಪದ್ಧತಿ, ಹಿಂದಿನ ಕಸುಬುನ್ನು ಉಳಿಸಬೇಕು ಎಂದು ತಿಳಿಸಿದರು.
ಈಗಾಗಲೇ ಆದಿವಾಸಿ ಪರಿಷತ್ ರಾಜ್ಯಾದ್ಯಂತ ಸಂಘಟನೆಯಲ್ಲಿ ತೊಡಗಿಸಿಕೊಂಡು ಬುಡಕಟ್ಟು ಜನಾ ಂಗದವರನ್ನು ಒಗ್ಗೂಡಿಸುತ್ತಿದೆ. ಪರಿಷತ್ನ ಹೋರಾಟಗಳಿಗೆ ಜನಾಂಗದವರು ಕೈಜೋಡಿಸಬೇಕು. ಅಲ್ಲದೇ ಸಂಕಷ್ಟದ ನೆರವಿಗೆ ಆಸರೆಯಾಗುತ್ತಿರುವ ಪರಿಷತ್ ಮುಖಂಡರುಗಳ ಕೈಬಲಪಡಿಸಬೇಕು ಎಂದರು.
ಆದಿವಾಸಿ ಬುಡಕಟ್ಟು ಪರಿಷತ್ ಗೌರವಾಧ್ಯಕ್ಷ ಡಾ|| ಕೆ.ಎಂ.ಮೈತ್ರಿ ಮಾತನಾಡಿ ತಮಿಳುನಾಡು ಹಾ ಗೂ ಕರ್ನಾಟಕದಲ್ಲಿ ಆದಿವಾಸಿ ಜನಾಂಗವು ನೆಲೆಯೂರಿದೆ. ಪ್ರಸ್ತುತ ರಾಜ್ಯಸರ್ಕಾರ ಸಮುದಾಯಕ್ಕೆ ನೀಡು ತ್ತಿರುವ ಸೌಕರ್ಯವು ತಮಿಳುನಾಡಿನಲ್ಲಿ ಸಿಗುತ್ತಿಲ್ಲ. ಕೇವಲ ಜಾತಿಪ್ರಮಾಣ ಪತ್ರ ಪಡೆಯಲು ನ್ಯಾಯಾಲ ಯದ ಮೆಟ್ಟಿಲೇರಬೇಕಿದೆ ಎಂದರು.
ಬುಡಕಟ್ಟು ಜನತೆಯನ್ನು ಹೊರಕಳಿಸುವ ಕೆಲಸಕ್ಕೆ ಕೈಹಾಕಿದರೆ ಸಮುದಾಯವು ಕ್ಷೀಣಿಸಲಿದೆ. ಹೀಗಾಗಿ ಹೊರತೆರಳಿರುವ ಜನರನ್ನು ಮತ್ತೊಮ್ಮೆ ಕರೆತರುವ ಪ್ರಯತ್ನಕ್ಕೆ ಮುಂದಾಗುವ ಮೂಲಕ ಸರ್ಕಾರದ ಮುಂ ದೆ ಶಕ್ತಿ ಪ್ರದರ್ಶಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಜನಾಂಗದ ಸಂತತಿ ಅವಿನಾಶದತ್ತ ಸಾಗಲಿದೆ ಎಂದು ಎಚ್ಚರಿ ಸಿದರು.
ಮುಂದಿನ ಪೀಳಿಗೆಯ ಮಕ್ಕಳಿಗೆ ಕಾಡುವೃಕ್ಷಗಳನ್ನು ಪೂಜಿಸುವ ಸಂಪ್ರದಾಯ, ಪದ್ಧತಿಗಳನ್ನು ಪರಿಚ ಯಿಸುವುದು ಅತಿಮುಖ್ಯ. ಆಧುನಿಕತೆಗೆ ಒಗ್ಗಿದರೆ ಕಾಲಕ್ರಮೇಣ ಎಲ್ಲಾವು ಮರೆಯಾಗಲಿದೆ. ಜೊತೆಗೆ ಪರಿಷ ತ್ನ ಸಭೆ, ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಿಂದಿನಂತೆ ವೃಕ್ಷದಡಿ ಅಥವಾ ಜಲಪಾತಗಳ ಸಮೀಪ ನಡೆಸಬೇಕು ಎಂದು ಕಿವಿಮಾತು ಹೇಳಿದರು.
ಇತ್ತೀಚೆಗೆ ಅಲೆಮಾರಿ ಜನಾಂಗದ ಮಕ್ಕಳನ್ನು ಅತ್ಯಾಚಾರಗೈದು ಮುಚ್ಚಿಹಾಕುವ ಪ್ರಕರಣಗಳು ಬಲಾಡ್ಯ ಜನಾಂಗವು ಮಾಡುತ್ತಿದೆ. ಅಲ್ಲದೇ ಸಮಾಜದ ವ್ಯವಸ್ಥೆಯು ಬಲಾಡ್ಯರ ಪರವಾಗಿ ನಿಂತಿರುವುದು ದುರ್ದೈವ ಇದನ್ನು ತಡೆಗಟ್ಟಲು ಪರಿಷತ್ನ ಸಂಘಟನಾತ್ಮಕ ಶಕ್ತಿಯಿಂದ ಮಾತ್ರ ಸಾಧ್ಯವಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ವಿಕ್ರಮ್ ಅಮಟೆ ಮಾತನಾಡಿ ಆದಿವಾಸಿ ಜನಾಂಗದವರ ಮೇ ಲೆ ದೌರ್ಜನ್ಯ, ಶೋಷಣೆ ಅಥವಾ ಇನ್ಯಾವುದೇ ಸಂಕಷ್ಟಗಳು ಎದುರಾದರೆ ಕಾನೂನಾತ್ಮಕವಾಗಿ ಪೊಲೀಸ್ ಇಲಾಖೆ ಸದಾ ಜೊತೆಗಿರಲಿದೆ. ಅಲ್ಲದೇ ಬುಡಕಟ್ಟು ಸಮುದಾಯವು ಎಲ್ಲಾ ರೀತಿಯಲ್ಲೂ ಸಹಕಾರವು ಅತ್ಯ ವಶ್ಯ ಎಂದು ತಿಳಿಸಿದರು.
ಅ.ಭಾ.ಆದಿವಾಸಿ ವಿಕಾಸ ಪರಿಷತ್ ದಕ್ಷಿಣ ಪ್ರಾಂತಿಯ ಅಧ್ಯಕ್ಷ ತಿರುಕೇಶವನ್, ಸದಸ್ಯ ತಿರುಮಾ ಧವನ್, ತಮಿಳುನಾಡು ಅಧ್ಯಕ್ಷ ಡಿ.ಲೋಕನಾಥನ್ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯಾಧ್ಯಕ್ಷ ಮಹಾಂತೇಶ್ ಎಸ್.ಕೌಲಗಿ, ಕಾನೂನು ಸಲಹೆಗಾರ ಡಾ. ಮಧುಕುಮಾರ್, ಕ.ಆ.ರ.ಪರಿಷತ್ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್, ಖಜಾಂಚಿ ಶ್ರೀನಿವಾಸ್ಗೌಡ, ಸಂಚಾಲಕ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಡೆನೆರಳು ಶಂಕರ್, ಲ್ಯಾಂಪ್ಸ್ ಮಹಾಮಂಡಳ ಅಧ್ಯಕ್ಷ ಬಿ.ಕಾವೇರ, ಹರಿಣಾಶಿಕಾರಿ ಬುಡಕಟ್ಟಿನ ಮುಖಂಡ ಸಿದ್ದಣ್ಣ ಕಾಳೆ, ಹಕ್ಕಿ ಪಿಕ್ಕಿ ಬುಡಕಟ್ಟು ಮುಖಂಡ ಶಿಕಾರಿ ರಾಮು, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮಾಣಿಕ್ ಮತ್ತಿತರರು ಉಪ ಸ್ಥಿತರಿದ್ದರು.
Focus on tribal education and health