ಸಖರಾಯಪಟ್ಟಣ: ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯಿಂದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ ಅಪ್ರತಿಮ ವ್ಯಕ್ತಿ ಎಂದು ಒಕ್ಕಲಿಗ ಸಂಘದ ಹೋಬಳಿ ಘಟಕದ ಅಧ್ಯಕ್ಷ ಎಸ್.ಆರ್.ಯೋಗೀಂದ್ರ ಹೇಳಿದರು.
ಸಖರಾಯಪಟ್ಟಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬೆಂಗಳೂರು ನಗರಕ್ಕೆ ಗಡಿ ಗೋಪುರ ನಿರ್ಮಿಸುವ ಮೂಲಕ ಭವಿಷ್ಯದ ನಗರದ ರೂಪರೇಷೆಯನ್ನು ಅಂದೇ ನಿರ್ಮಿಸಿದ್ದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.
ನಿವೃತ್ತ ಲೆಕ್ಕಪರಿಶೋಧಕ ವೆಂಕಟೇಶ್ , ವಿಜಯನಗರದ ಅರಸರ ಮೇಲ್ಪಂಕ್ತಿಯನ್ನು ಅನುಸರಿಸಿದ ಕೆಂಪೇಗೌಡರು, ತಮ್ಮ ಆಡಳಿತದಲ್ಲಿ ಕೃಷಿ ಮತ್ತು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿ ಬೆಂಗಳೂರಿನ ಇತಿಹಾಸದಲ್ಲಿ ಅಜರಾಮರರಾದರು ಎಂದರು.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಬೈಕ್ ಜಾಥಾ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಚೇತನ್, ಗಣೇಶಗೌಡ, ಅರುಣ್ಗೌಡ, ದೊಡ್ಡಮ್ಮ, ಮುಖಂಡರಾದ ರಾಮಲಿಂಗು, ಪುಟ್ಟಸ್ವಾಮಿ, ಸ. ರಾ. ಸತೀಶ್, ಮಿಥುನ್, ದರ್ಶನ್, ಉಲ್ಲಾಸ್, ಧರಣೇಶ್, ಪ್ರಮೋದ್, ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
Nadaprabhu Kempegowda is an unparalleled figure of forward thinking.