ಚಿಕ್ಕಮಗಳೂರು: ಜಿಲ್ಲಾ ಬಿಜೆಪಿಯ ಸೇವಾ ಪ್ರಾಕ್ಷಿಕ ಅಭಿಯಾನ ಮತ್ತು ಕಾರ್ಯಾಗಾರ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯ ಕಚೇರಿಯಲ್ಲಿ ಇಂದು ನಡೆಯಿತು.
ಭಾರತ ಮಾತೆ ಫೋಟೋಗೆ ಪು?ರ್ಚನೆ ಮಾಡುವ ಮೂಲಕ ಚಾಲನೆ ನೀಡಿದ ಸಿ.ಟಿ.ರವಿ ಮಾತನಾಡಿ, ಸೇವೆ ಮಾಡುವ ಉದ್ದೇಶವೇ ಸೇವಾ ಪ್ರಾಕ್ಷಿಕ ಅಭಿಯಾನ. ವಿಶ್ವದ ನಾಲ್ಕನೇ ಶಕ್ತಿಯಾಗಿದ್ದೇವೆ. ಪರಾವಲಂಬಿಯಾಗಿಸುವ ಮೂಲಕ ದೇಶಕ್ಕೆ ಪೆಟ್ಟು ಕೊಡುವ ಯತ್ನ ನಡೆಯುತ್ತಿದೆ. ಅದನ್ನು ಜಾಗೃತಿಯಿಂದ ಎದುರಿಸಬೇಕು ಎಂದರು.
ಸ್ವದೇಶಿ ವಸ್ತುಗಳಿಗೆ ಒತ್ತು, ಸ್ವಚ್ಛತಾ ಆಂದೋಲನದಲ್ಲಿ ಸಮಾಜವನ್ನು ತೊಡಗಿಸಬೇಕು. ನರೇಂದ್ರ ಮೋದಿಯವರ ಸಾಧನೆಗಳನ್ನು ಜನರಿಗೆ ತಿಳಿಸಬೇಕು ಎಂದು ತಿಳಿಸಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಬ್ರಹ್ಮಾಂಡ ಸಾಲವನ್ನು ರಾಜ್ಯ ಸರ್ಕಾರ ಮಾಡಿರುವುದನ್ನು ಜನರಿಗೆ ತಿಳಿಸಬೇಕು. ಕೇಂದ್ರ ಸರ್ಕಾರದ ತೆರಿಗೆ ಕಡಿತದಿಂದಾಗಿರುವ ಲಾಭಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ಕಾರ್ಯಕ್ರಮಗಳು, ನೀತಿಗಳನ್ನು ಪ್ರತಿ ಮನೆಗೆ ಮುಟ್ಟಿಸುವ ಕೆಲಸಗಳನ್ನು ಪಕ್ಷದ ಪ್ರತಿಯೊಬ್ಬರೂ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ ಬೆಳವಾಡಿ, ಪುಣ್ಯಪಾಲ್, ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ಬಿ. ರಾಜಪ್ಪ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಕೋಟಿಯಾನ್, ಮುಖಂಡ ವೆನಿಲ್ಲಾ ಭಾಸ್ಕರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್, ರಾಜೇಶ್ವರಿ ಉಪಸ್ಥಿತರಿದ್ದರು.
District BJP Service Fortnightly Campaign