ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದ್ದಾರೆ.
ಅವರು ಒಕ್ಕಲಿಗರ ಸಮುದಾಯ ಭವನದಲ್ಲಿ ೨೦೨೫-೨೬ನೇ ಸಾಲಿನ ಜಿಲ್ಲಾ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಯ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದ್ದು, ಜನಾಂಗದ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಜೆವಿಎಸ್ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಘದ ಆಯ-ವ್ಯತದ ಬಗ್ಗೆ ಚರ್ಚಿಸಿ ಸರ್ವ ಸದಸ್ಯರ ಅನುಮೋದನೆಯನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.
ಸಂಘದ ನೂತನ ಕಟ್ಟಡ ಸಾರ್ವಜನಿಕ ಸಮರ್ಪಣೆಯಾಗಿ ಯಶಸ್ವಿಯಾದ ಬೆನ್ನಲ್ಲೇ ಸುಮಾರು ೬ ಕೋಟಿ ರೂ ವೆಚ್ಚದಲ್ಲಿ ಜ್ಯೋತಿನಗರದಲ್ಲಿರುವ ನಿವೇಶನದಲ್ಲಿ ಬೆಳ್ಳಿಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದರಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದರು.
ಮುಂದಿನ ದಿನಗಳಲ್ಲಿ ಯುವ ಒಕ್ಕಲಿಗರ ಸಂಘ ಸ್ಥಾಪನೆ ಮಾಡಬೇಕೆಂಬ ಬಗ್ಗೆ ಈಗಾಗಲೇ ಬೇಡಿಕೆ ಬಂದಿದ್ದು, ಸಂಘದ ಎಲ್ಲರೊಂದಿಗೆ ಚರ್ಚಿಸಿ ನೂತನ ಯುವಸಂಘವನ್ನು ಸ್ಥಾಪನೆ ಮಾಡಲು ನಿರ್ಧರಿಸುವುದಾಗಿ ಭರವಸೆ ನೀಡಿದರು. ಜನಾಂಗ ಕಾಫಿ ಬೆಳೆಯನ್ನು ಅವಲಂಬಿಸಿದ್ದು, ಜನಾಂಗದ ಯುವ-ಯುವತಿಯರಿಗೆ ಪ್ರಯೋಜನವಾಗುವಂತೆ ಕಾಫಿಯನ್ನು ತಾವೇ ಮಾರುಕಟ್ಟೆ ಮಾಡುವ ಮೂಲಕ ಉದ್ಯಮಿಗಳಾಗಿ ಬೆಳೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ಕಳೆದ ೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಕಟ್ಟಡಕ್ಕೆ ಆರ್ಸಿಸಿಯನ್ನು ಹಾಕಲಾಗಿದ್ದು, ಸಧ್ಯದಲ್ಲೇ ಸಾರ್ವಜನಿಕವಾಗಿ ಸಮರ್ಪಣೆಯಾಗಲಿದೆ. ಈ ಕಾರ್ಯಕ್ಕೆ ಸಮಾಜ ಬಾಂಧವರು ಧನಸಹಾಯ, ವಂತಿಕೆ ನೀಡಬೇಕೆಂದು ಮನವಿ ಮಾಡಿ ಸರ್ವಜನಾಂಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಗರದ ಜೆವಿಎಸ್ ಶಾಲೆಯಲ್ಲಿ ಕೃಷಿಕ್ ಸರ್ವೋದಯ ಫೌಂಡೇಶನ್ ಸ್ಥಾಪಿಸಲಾಗಿದ್ದು, ಬ್ಯಾಂಕಿಂಗ್, ಐಎಎಸ್, ಐಪಿಎಸ್, ಐಎಫ್ಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಎಂ.ಎನ್ ಪ್ರದೀಪ್, ನಿಕಟ ಪೂರ್ವ ಕಾರ್ಯದರ್ಶಿ ಎಂ.ಸಿ ಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಕೆ.ರಾಜೇಗೌಡ, ನಿರ್ದೇಶಕ ಬಿ.ಸಿ ಲೋಕಪ್ಪಗೌಡ, ಮುಖಂಡರಾದ ಕೆ.ಬಿ ಅನಂತೇಗೌಡ, ಕೆ.ಪಿ ರಾಜೇಂದ್ರ, ಕೆ.ಯು ರತೀಶ್ಕುಮಾರ್, ಹರಿಣಾಕ್ಷಿ ನಾಗರಾಜ್, ಎಂ.ಬಿ ಸತೀಶ್, ಕೆ.ಯು ಮನುಕುಮಾರ್, ಎಂ.ಅಶೋಕ್, ಕೆ.ಪಿ ಪೃಥ್ವಿರಾಜ್, ಹೆಚ್.ಕೆ. ನವೀನ್, ಉಮಾಶಂಕರ್, ಐ.ಕೆ ಶ್ರೀನಿವಾಸ್, ಬಿ.ರಾಜು, ಸಂಜಿತ್, ಹೆಚ್.ಎಸ್. ಮೋಹನ್, ಸಂತೋಷ್, ಸಿ.ಟಿ.ರೇವತಿ, ಭವ್ಯ ನಟೇಶ್, ಸವಿತರಮೇಶ್, ಪವಿತ್ರ, ವೈಯ್ಸಳ, ಮಂಜುಚೇತನ್, ಪೂರ್ಣೇಶ್, ರೀನಾಸುಜೇಂದ್ರ, ಹಳಸೆ ಶಿವಣ್ಣ, ಬಿ.ಎಲ್ ಸಂದೀಪ್, ಡಾ. ಡಿ.ಎಲ್ ವಿಜಯ್ಕುಮಾರ್, ಎಂ.ಡಿ. ಆನಂದ್, ಹೆಚ್.ಡಿ. ಕೃಷ್ಣೇಗೌಡ, ಮೋಹಿನಿಸಿದ್ದೇಗೌಡ ಉಪಸ್ಥಿತರಿದ್ದರು.ಮೊದಲಿಗೆ ಸಂಘದ ಉಪಾಧ್ಯಕ್ಷ ಟಿ.ಡಿ ಮಲ್ಲೇಶ್ ಸ್ವಾಗತಿಸಿದರು.
Vokkaliga decides to work for the development of the society