ಚಿಕ್ಕಮಗಳೂರು: ನಗರದ ಚಿಕ್ಕಮಗಳೂರು ಪ್ರೆಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಮಲೆನಾಡು ಐಸಿರಿ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರರಾದ ಸಿ.ಡಿ ಚಂದ್ರೇಗೌಡರವರು ಅಧಿಕಾರ ಸ್ವೀಕರಿಸಿದರು.
ಇಂದು ಬೆಳಗ್ಗೆ ಪ್ರೆಸ್ ಕ್ಲಬ್ ನಲ್ಲಿ ಹಿಂದಿನ ಅಧ್ಯಕ್ಷರು ಹಾಗು ಪ್ರಧಾನಕಾರ್ಯದರ್ಶಿಗಳು ಏರ್ಪಡಿಸಿದ್ದ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು ತಮ್ಮ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ತಮ್ಮೆಲ್ಲರ ಸಹಕಾರ, ಸಲಹೆ ನೀಡುವಂತೆ ಕೋರಿ ಅತ್ಯಧಿಕ ಮತಗಳ ಅಂತರದಲ್ಲಿ ಜಯಗಳಿಸಿ ತಮ್ಮ ಸೇವೆಗೆ ಅವಕಾಶ ಮಾಡಿಕೊಟ್ಟಿರುವ ಎಲ್ಲಾ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ಪ್ರೆಸ್ ಕ್ಲಬ್ನ ಚಟುವಟಿಕೆಗಳನ್ನು ಅತ್ಯಂತ ಕ್ರೀಯಾಶೀಲವಾಗಿ ನಡೆಸಲು ಗುರಿಹೊಂದಲಾಗಿದ್ದು ತಮ್ಮ ಆಡಳಿತಾವಧಿಯಲ್ಲಿ ಸಲಹೆ ಸಹಕಾರಗಳನ್ನು ನೀಡುವ ಮೂಲಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಪಿ.ರಾಜೇಶ್, ಮಾತನಾಡಿ ಕಳೆದ ಎರಡು ವರ್ಷಗಳ ಅಧಿಕಾರಾವಧಿಯಲ್ಲಿ ಸಹಕರಿಸಿ ಸಲಹೆಗಳನ್ನು ನೀಡಿದ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ನಿಕಟ ಪೂರ್ವಕಾರ್ಯದರ್ಶಿ ಆರ್.ತಾರಾನಾಥ್ ಪ್ರೆಸ್ ಕ್ಲಬ್ ನಲ್ಲಿ ನಡೆದಿರುವ ವಾರ್ಷಿಕ ವರಧಿ ಹಾಗೂ ಲೆಕ್ಕ ಪತ್ರಗಳನ್ನು ನೂತನ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು .
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಆಗಿದ್ದ ವಕೀಲ ವಿ. ಕೆ. ರಘು ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿದ್ದ ನಿವೃತ್ತ ಪೋಲೀಸ್ ಅಧಿಕಾರಿ ಎಂ.ಕೆ. ಜಯರಾಮ್ ಇವರನ್ನು ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸಿ. ಸುರೇಶ್, ಕೆ.ಹೆಚ್. ರುದ್ರಯ್ಯ, ಎ.ಎನ್. ಮೂರ್ತಿ, ಕೆ.ಎಸ್ ಕಿಶೋರ್ ಕುಮಾರ್, ಪುನೀತ್,ಶ್ರೀಕಾಂತ್, ಮಹಾರುದ್ರ, ಪ್ರವೀಣ್, ಕೆ.ಜಯಕುಮರ್, ಎಂ. ಎಸ್ ಉಮೇಶ್ ಕುಮಾರ್, ಪವನ್ ಶೆಟ್ಟಿ ಉಪಸ್ಥಿತರಿದ್ದರು.
Chandre Gowda assumes office as Press Club President
