ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಗೋರಿಗೆ ಕುಂಕುಮ ಹಚ್ಚಿದ್ದಾರೆನ್ನುವುದು ಕಿಡಿಗೇಡಿ ಕೃತ್ಯ ಎಂದು ವಿಶ್ವ ಹಿಂದೂ ಪರಿ?ತ್ ಬಜರಂಗದಳ ಖಂಡಿಸಿವೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿರ್ಷಯ ತಿಳಿಸಿದ ವಿ.ಹೆಚ್.ಪಿ ಬಜರಂಗದಳ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಶ್ರೀ ಗುರುದತ್ತಾತ್ರೇಯ ಸ್ವಾಮಿಗಳು ಜೀವಿತವಿದ್ದದ್ದು, ಸಾವಿರಾರು ವರ್ಷಗಳ ಹಿಂದೆಯಾಗಿದ್ದು ಆ ಕಾಲದಲ್ಲಿ ಇಸ್ಲಾಂ ಧರ್ಮವೇ ಪ್ರಪಂಚದಲ್ಲಿರಲಿಲ್ಲ. ಹೀಗೆ ಅನೇಕ ವ?ಗಳ ನಂತರದಲ್ಲಿ ಗೋರಿಗಳನ್ನು ಸೃಷ್ಠಿ ಮಾಡಿ ದಾದಾ ಹಯಾತ್ ಖಲಂದರ್ ರವರ ಸಮಾಧಿ ಎಂದು ಹೇಳುತ್ತಿದ್ದಾರೆ ಎಂದರು.
ಇಷ್ಟಕ್ಕೂ ಹಿಂದುಗಳು ಕುಂಕುಮ, ಹೂಗಳಿಂದ ಪೂಜೆ ಮಾಡುವುದು ದತ್ತಾತ್ರೇಯ ಪೀಠಕ್ಕೆ ಮತ್ತು ಪಾದುಕೆಗಳಿಗೆ, ಯಾವ ಗೋರಿಗಳಿಗೂ ಪೂಜೆ ಮಾಡುವುದು ನಮ್ಮ ಧರ್ಮದಲ್ಲಿಲ್ಲ ಎಂದು ಸ್ಪ?ಪಡಿಸಿದರು.
ದತ್ತ ಜಯಂತಿಯ ಸಮಯದಲ್ಲಿ ಅಲ್ಲಿರುವ ಗೋರಿ ಎಂದು ಹೇಳುವ ಜಾಗವನ್ನು ಸಂಪೂರ್ಣ ಮುಚ್ಚಲಾಗುತ್ತದೆ ಅದು ಯಾರಿಗೂ ಕಾಣಿಸುವುದಿಲ್ಲ. ದತ್ತಪೀಠ ಮತ್ತು ಪಾದಕೆಗಳಿಗೆ ಪೂಜೆ ಮಾಡುತ್ತೇವೆ. ಯಾವುದೇ ಗೋರಿ ಹಾಗೂ ಸಮಾಧಿಗಳಿಗೆ ಪೂಜೆ ಮಾಡುಲು ಹಿಂದೂಗಳಿಗೆ ಅವಶ್ಯಕತೆ ಇಲ್ಲವೆಂದರು.
ಕಿಡಗೇಡಿಗಳು ಮಾಡಿರುವ ಆರೋಪ ಬರೀ ಸುಳ್ಳಿನ ಕಂತೆಯಾಗಿ ಸತ್ಯಕ್ಕೆ ದೂರವಾಗಿದೆ ಕಿಡಿಗೇಡಿಗಳು ಗೊಂದಲ ಉಂಟು ಮಾಡುವ ಪ್ರಯತ್ನ ಎಂದು ಆರೋಪಿಸಿದರು.
ದತ್ತ ಗುಹೆಯ ಒಳಗೆ ಸಿಸಿಟಿವಿ ಇದ್ದು, ಅದರಲ್ಲಿ ನೋಡಲಿ. ನಂತರ ಈ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ನಗರಾಧ್ಯಕ್ಷ ದಿಲೀಪ್ಶೆಟ್ಟಿ, ಮುಖಂಡರಾದ ಶರತ್, ಶ್ಯಾಮ್, ಪ್ರಸಾದ್, ಅಮೀನ್ ಮತ್ತಿತರಿದ್ದರು.
Applying saffron to graves is a mischievous act.