ಚಿಕ್ಕಮಗಳೂರು: ಕೃಷಿಯೇತರ ಸಹಕಾರ ಸಂಘಗಳ ಆಡಳಿತವು ಸದಸ್ಯರ ಆರ್ಥಿಕ ಹಿ ತಾಸಕ್ತಿಯನ್ನು ಕಾಪಾಡುವ ಜೊತೆಗೆ ಘಟಕಗಳಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸಹಕಾರ ಮ ಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಾಳ, ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಸಹ ಯೋಗದಲ್ಲಿ ನಗರದ ಖಾಸಗೀ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ಧ ಆಯ್ದ ಪತ್ತಿನ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಣೆ ಮಾಡಬೇಕಾದರೆ ಪಾರದರ್ಶಕತೆ, ವೃತ್ತಿಪರ ತೆ, ಪರಿಣಾಮಕಾರಿ ಲೆಕ್ಕಪರಿಶೋಧನೆ ಮಾಹಿತಿ ಹೊಂದಿರುವ ಜೊತೆಗೆ ತಂತ್ರಜ್ಞಾನ ಹಾಗೂ ಲಾಭಧಾಯಕ ವಾಗಿರುವ ಅಂಶಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದರು.
ಸಂಘಗಳು ಆಧ್ಯಾತ್ಮಿಕ ಕಾರ್ಯಗಳೊಡನೆ ಹಣಕಾಸಿನ ವ್ಯವಹಾರ ಹಾಗೂ ವಹಿವಾಟುಗಳಿಗೆ ಗಮನ ಹರಿಸಬೇಕು. ಸಹಕಾರ ಸಂಘಗಳ ಕೇಂದ್ರಬಿಂದು ಆರ್ಥಿಕ ಚಟುವಟಿಕೆಗಳು ಎಂದ ಅವರು ಠೇವಣಿ, ಸಾಲ ವಿತರಣೆ, ಹೂಡಿಕೆ ಹಾಗೂ ಸೇವಾ ನಿಯಮಗಳನ್ನು ಕಾಲ ಕಾಲಕ್ಕೆ ತಕ್ಕಂತೆ ರೂಪಿಸಿ ಅನುಷ್ಟಾನಕ್ಕೆ ತರುವು ದು ಅವಶ್ಯ ಎಂದು ಹೇಳಿದರು.
ಬೆಂಗಳೂರು ಸಹಕಾರ ಸಂಘಗಳ ಅಪಾರ ನಿಬಂಧಕ ಹೆಚ್.ಎಸ್.ನಾಗರಾಜಯ್ಯ ಉಪನ್ಯಾಸ ನೀಡಿ ಮಾತನಾಡಿ ಸಹಕಾರಿ ಸಂಸ್ಥೆ ಸದಸ್ಯರುಗಳ ಆರ್ಥಿಕ ಹಿತಾಸಕ್ತಿ ಕಾಪಾಡುವುದೇ ಮೂಲ ಆಶಯವಾಗಬೇ ಕು. ಲೇವಾದೇವಿ ಅಥವಾ ಖಾಸಗೀ ಫೈನಾನ್ಸ್ಗಳಿಗೆ ಸದಸ್ಯರುಗಳು ಒಳಗಾಗದಂತೆ ಸಂಘದಿಂದಲೇ ಸೌ ಲಭ್ಯ ಒದಗಿಸಿ ಅನುಕೂಲ ಕಲ್ಪಿಸಿಕೊಡಬೇಕು ಎಂದರು.
ಕೃಷಿ ಪತ್ತಿನ ಸಂಘಗಳಿಗೆ ಸರ್ಕಾರ ಷೇರು ಹೂಡಿಕೆ ಮಾಡುತ್ತವೆ. ಕೃಷಿಯೇತರ ಬ್ಯಾಂಕ್ಗಳಲ್ಲಿ ಸದ ಸ್ಯರಿಂದಲೇ ಬೆಳವಣಿಗೆ ಹೊಂದಬೇಕು. ಆ ನಿಟ್ಟಿನಲ್ಲಿ ಕಾರ್ಯಚಟುವಟಿಕೆ, ಆಡಳಿತಾತ್ಮಕ ಚುರುಕು ಅತ್ಯಂತ ಅವಶ್ಯಕವಾಗಿದೆ. ಸದಸ್ಯರುಗಳಲ್ಲಿ ಠೇವಣಿ ಇರಿಸಲು ಸಂಘಗಳು ನಂಬಿಕೆ, ವಿಶ್ವಾಸ ಮೊದಲು ಮೂಡಿಸಿದರೆ ಸಂಪನ್ಮೂಲ ತಾನಾಗಿಯೇ ಹರಿದುಬರಲಿದೆ ಎಂದು ಹೇಳಿದರು.
ಸಂಘದ ಸದಸ್ಯರುಗಳು ವಾರ್ಷಿಕ ಸಭೆಗೆ ಗೈರು, ಖಾತೆ ವಹಿವಾಟು ಹಾಗೂ ಸದಸ್ಯರು ಆಯ್ಕೆ ವಿಚಾರ ದಲ್ಲಿ ಪೂರ್ಣಪ್ರಮಾಣ ಹಿಂದುಳಿದಿರುವ ಕಾರಣ ಅನೇಕ ಸವಾಲುಗಳು ಎದುರಿಸುತ್ತಿವೆ. ಹೀಗಾಗಿ ಆಡಳಿತ ವರ್ಗವು ಸದಸ್ಯರುಗಳಿಗೆ ಜಾಗೃತಿ ಮೂಡಿಸಿ ಸಕ್ರೀಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಿದರೆ ಸಹಕಾರಿ ಕ್ಷೇತ್ರ ಪ್ರಗತಿ ಸಾಧಿಸಬಹುದು ಎಂದರು.
ಬ್ಯಾಂಕಿಂಗ್ ವ್ಯಕ್ತಿತ್ವ ವಿಕಸನ ತರಬೇತಿದಾರ ಆರ್.ಕೆ.ಬಾಲಚಂದ್ರ ಮಾತನಾಡಿ ಸರ್ಕಾರಿ ಬ್ಯಾಂಕ್ಗಳಂ ತೆ, ಕೃಷಿಯೇತರ ಸಹಕಾರ ಸಂಘಗಳು ಆಧುನಿಕತೆ ತಕ್ಕಂತೆ ಆಡಳಿತ ವ್ಯವಸ್ಥೆಯಲ್ಲಿ ಡಿಜಟಲೀಕರಣ ಗೊಳಿಸಿ ವ್ಯವಹಾರವನ್ನು ಗ್ರಾಹಕರಿಗೆ ಸರಳಗೊಳಿಸಿದೆ ಎಂದ ಅವರು ಗ್ರಾಹಕರು ಸಂಘಗಳ ವ್ಯವಹಾರವನ್ನು ಎಲ್ಲ ರೊಂದಿಗೆ ಹಂಚದೇ ಗೌಪ್ಯತೆ ಹೊಂದಬೇಕು ಎಂದರು.
ಇತ್ತೀಚೆಗೆ ಗ್ರಾಹಕರು ಸಣ್ಣಫುಟ್ಟ ವಹಿವಾಟು ಆನ್ಲೈನ್ನಲ್ಲಿ ನಡೆಸುತ್ತಿರುವುದು ಸಂತಸ. ಆದರೆ ಕೆಲವು ಸಾಮಾಜಿಕ ಜಾಲತಾಣದಲ್ಲಿ ವಂಚಿಸುವ ಪ್ರಕರಣಗಳು ಹೆಚ್ಚಿರುವ ಕಾರಣ ಸುರಕ್ಷತಾ ಕಾಳಜಿ ವಹಿಸಬೇಕು. ಗ್ರಾಹಕರ ಸಂಖ್ಯೆ, ಓಟಿಪಿ ಅಥವಾ ಇನ್ಯಾವುದೇ ವ್ಯವಹಾರದ ಮಾಹಿತಿಯನ್ನು ಹಂಚಿಕೊಳ್ಳದಂತೆ ಮುಂಜಾ ಗ್ರತೆ ವಹಿಸುವುದು ಸೂಕ್ತ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಎಸ್. ಮಹಾಬಲ ಪ್ರಸ್ತುತ ಸಹಕಾರಿ ಕ್ಷೇತ್ರವು ಸಂದಿಗ್ದ ಪರಿಸ್ಥಿತಿ ಮತ್ತು ಗೊಂದಲದಲ್ಲಿದೆ. ಹೀಗಾಗಿ ಸಹಕಾರಿ ಮ ಹಾಮಂಡಲದಿಂದ ನಿರ್ದೇಶಕರು, ಸಿಇಓಗಳಿಗೆ ಮಾಹಿತಿ ಕೊರತೆ ಕಾರಣ ರಾಜ್ಯಾದ್ಯಂತ ತರಬೇತಿ ಕೈಗೊಂ ಡು ಸಹಕಾರಿ ತತ್ವದ ನಿಯಮವನ್ನು ಬೋಧಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ನಿರ್ದೇಶಕರಾದ ಜಿ.ವಿ.ಮೋಹನ್, ವರಸಿದ್ದಿ ವೇಣುಗೋಪಾಲ್, ಸಹಕಾರಿ ಅಭಿವೃದ್ದಿ ಅಧಿಕಾರಿ ರುಕ್ಮೀಣಿ, ಸಿಬ್ಬಂದಿಗಳಾದ ಇಂದ್ರೇಶ್, ಯಶಸ್ ಮತ್ತಿತರರು ಉಪಸ್ಥಿತರಿದ್ದರು.
Special training program for office bearers and chief executive officers of cooperative societies