ಚಿಕ್ಕಮಗಳೂರು: ಎಸ್ಎಸ್ಎಲ್ಸಿ ೨೦೨೪-೨೫ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಜೆವಿಎಸ್ ಶಾಲೆಗೆ ಶೇ೧೦೦ ಫಲಿತಾಂಶ ಬಂದಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು.
ಅವರು ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆವಿಎಸ್ ಶಾಲೆಯ ಉದ್ದೇಶ ಸೇವಾ ಮನೋಭಾವನೆಯಿಂದ ವಿದ್ಯಾಧಾನ ಮಾಡುವ ಮೂಲಕ ದೇಶದಲ್ಲಿ ಮುಂದಿನ ಒಳ್ಳೆಯ ಪ್ರಜೆಗಳಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು.
ಡೊನೇಷನ್ ಆಸೆ ಆಮಿಷಗಳನ್ನು ವಿದ್ಯಾರ್ಥಿ ಪೋಷಕರಿಗೆ ನೀಡದೆ ಸರ್ಕಾರಿ ನಿಯಮದಂತೆ ಶುಲ್ಕ ಪಡೆದು ನಡೆಸುತ್ತಿರುವುದು ಜೆವಿಎಸ್ ಶಾಲೆಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲೂ ಸೇವಾ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ವಿದ್ಯಾರ್ಥಿಗಳ ಪರೀಕ್ಷೆಯನ್ನು ಜೆವಿಎಸ್ ಶಾಲೆ ವಿದ್ಯಾರ್ಥಿಗಳು ಬರೆದು ಬರುತ್ತಿರುವುದರಿಂದ ಅಲ್ಲಿಯೂ ಶೇ೧೦೦ ಫಲಿತಾಂಶ ಬರುತ್ತಿದೆ ಅದಕ್ಕಾಗಿ ಈ ಶಾಲೆ ಶಿಕ್ಷಕರಿಗೂ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆ ಜಿಲ್ಲೆಯ ಯುವಕ ಯುವತಿಯರ ಭವಿಷ್ಯ ರೂಪಿಸಲು ಪೋಷಕರಿಗೆ ಹಣದ ಹೊರೆ ಹಾಕದೆ ಅತಿ ಕಡಿಮೆ ಶುಲ್ಕ ಪಡೆದು ಶಾಲೆ ನಡೆಸುತ್ತಿರುವುದಾಗಿ ತಿಳಿಸಿದರು.
ಒಟ್ಟು ೫೫ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೨೨ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩೧ ಪ್ರಥಮ ಶ್ರೇಣಿ, ೨ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಹರ್ಷವರ್ಧನ್ ಬಿ.ಯು ೬೧೦ ಪ್ರಥಮ, ಭಾವನ ಡಿ.ಎನ್ ೬೦೭ ದ್ವಿತೀಯ ಸ್ಥಾನ, ತಯ್ಯಬ ೬೦೩ ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದ್ದಾರೆ
ಪ್ರಥಮ ಭಾಷೆ ಕನ್ನಡದಲ್ಲಿ ಓರ್ವ ವಿದ್ಯಾರ್ಥಿ, ತೃತೀಯ ಭಾ? ಹಿಂದಿಯಲ್ಲಿ ೬ ವಿದ್ಯಾರ್ಥಿಗಳು, ಹಾಗೂ ಗಣಿತದಲ್ಲಿ ಓರ್ವ ವಿದ್ಯಾರ್ಥಿನಿ ಶೇಕಡ ೧೦೦ ಕ್ಕೆ ೧೦೦ ಅಂಕ ಗಳಿಸಿ ಶಾಲೆಗೆ ಕೀರ್ತಿಗಳಿಸಿರುವುದಕ್ಕೆ ಮಕ್ಕಳಿಗೆ ಸಂಘದ ಆಡಳಿತ ಮಂಡಳಿಯವರು ಶ್ಲಾಘಿಸಿರುತ್ತಾರೆ.
ಈ ಸಂದರ್ಭದಲ್ಲಿ ಗೌ. ಕಾರ್ಯದರ್ಶಿ ಎಂ.ಎಸ್ ಪ್ರದೀಪ್ ಕುಮಾರ್ ಮಾತನಾಡಿ ಆಧುನಿಕ ಕಾಲಕ್ಕೆ ತಕ್ಕಂತೆ ಶಾಲೆಯಲ್ಲಿ ಗಣಕೀಕೃತ ಮತ್ತು ಸ್ಮಾರ್ಟ್ ಬೋರ್ಡ್ ಮೂಲಕ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ, ನಮ್ಮ ಶಾಲೆಯಲ್ಲಿ ನುರಿತ ಶಿಕ್ಷಕರು ಇರುವುದರಿಂದ ಪ್ರತಿ ವರ್ಷ ೧೦೦ ಕ್ಕೆ ೧೦೦% ರಷ್ಟು ಫಲಿತಾಂಶ ಬರುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಹಕಾರ್ಯದರ್ಶಿ ಕೆ.ಯು ರತೀಶ್ ಕುಮಾರ್, ಮುಖ್ಯ ಶಿಕ್ಷಕರುಗಳಾದ ವಿಜಿತ್, ಸಿಇಓ ಕುಳ್ಳೇಗೌಡ, ಪ್ರ್ರಮೀಳಾ, ಪ್ರೀತಿ, ಶ್ರೀಲತಾ, ನಂದೀಶ್, ಶಶಿಧರ್ ವ್ಯವಸ್ಥಾಪಕರಾದ ತೇಜಸ್ ಸೇರಿದಂತೆ ಎಲ್ಲಾ ಶಿಕ್ಷಕರು ಪಾಲ್ಗೊಂಡಿದ್ದರು.
JVS School achieves 100% results in SSLC