ಚಿಕ್ಕಮಗಳೂರು: ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯ ನಾಲ್ಕನೇ ಹಂತದ ಕಾ ಮಗಾರಿಗೆ ಒಂದಿಷ್ಟು ಬೇಡಿಕೆಗಳನ್ನು ಪಂಚಾಯತ್ರಾಜ್ ಇಲಾಖೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾ ವನೆ ಕಳಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ನಗರದ ಸಂಸದರ ಕಚೇರಿಯಲ್ಲಿ ಗ್ರಾಮ್ ಸಡಕ್ ಯೋಜನೆ ಬಗ್ಗೆ ಯೋಜನಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಮಾತನಾಡಿದ ಅವರು ಪ್ರಸ್ತುತ ಯೋಜನೆಯ ಮಾರ್ಗಸೂಚಿಗಳು ಯಾವುದೇ ಸಂಪ ರ್ಕವಿಲ್ಲದ ಗ್ರಾಮಕ್ಕೆ ಹೊಸದಾಗಿ ಸಂಪರ್ಕ ಕಲ್ಪಿಸುವುದಾಗಿದೆ ಎಂದರು.
ಜಿಲ್ಲೆ ಭೌಗೋಳಿಕವಾಗಿರುವ ಒಟ್ಟು ಪರಿಸ್ಥಿತಿಯಲ್ಲಿ ಒಂದಲ್ಲೊಂದು ರೂಪದಲ್ಲಿ ಗ್ರಾಮಗಳಿಗೆ ರಸ್ತೆ ಸಂ ಪರ್ಕವಿದ್ದು ಆ ಹಿನ್ನೆಲೆಯಲ್ಲಿ ಯೋಜನೆಯನ್ನು ಪೂರೈಸಲು ಮಾರ್ಗಸೂಚಿಗಳಿಲ್ಲ ಎಂಬುದು ಅಧಿಕಾರಿ ಗಳು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಹೀಗಾಗಿ ನಕ್ಸಲ್ ಹಾಗೂ ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಹೆಚ್ಚು ಕೃಷಿ ಕ್ಷೇತ್ರವನ್ನು ಅವಲಂ ಬಿಸಿರುವ ಕಾರಣ ಗ್ರಾಮ್ ಸಡಕ್ ಯೋಜನೆಯ ಮಾರ್ಗಸೂಚಿಗಳಲ್ಲಿ ಕೆಲವು ರಿಯಾಯಿತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರದಿಂದ ಪ್ರಸ್ತಾವನೆ ಅನುಮೋದನೆ ದೊರೆತಲ್ಲಿ ಯೋಜನೆಯನ್ನು ಅನುಷ್ಟಾನಗೊಳಿಸಲು ಸುಲಭ ವಾಗಲಿದ್ದು ಪಿಎಂಜಿಎಸ್ವೈ ಇಲಾಖೆಯಿಂದ ಸಾರ್ವಜನಿಕರಿಗೆ ಅನುಕೂಲಕ್ಕೆ ಪ್ರಸ್ತಾವನೆ ಕಳಿಸಲು ಸೂಚಿಸ ಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಂಜಿಎಸ್ವೈ ಇಲಾಖೆ ಕಾರ್ಯನಿರ್ವಹಕ ಅಭಿನಂತರ ತರುಣ್ಶಶಿ, ಸಹಾಯ ಕ ಕಾರ್ಯ ನಿರ್ವಾಹಕ ಹರೀಶ್, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ ಹಾಗೂ ಇನ್ನಿತರೆ ಅಧಿಕಾರಿ ಗಳು ಹಾಜರಿದ್ದರು.
Proposal to center seeking concession for gram sadak scheme