ಚಿಕ್ಕಮಗಳೂರು: ನಗರದ ಗೌರಿಕಾಲುವೆಯಲ್ಲಿರುವ ವಿದ್ಯಾಭಾರತಿ ಇಂಗ್ಲಿಷ್ ಪ್ರೈಮರಿ ಮತ್ತು ಹೈಸ್ಕೂಲ್ಗೆ ೨೦೨೪-೨೫ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಬಂದಿದೆ ಎಂದು ಮುಖ್ಯೋಪಾಧ್ಯಾಯರಾದ ಸಾಯರಾ ಫಾತಿಮಾ ತಿಳಿಸಿದ್ದಾರೆ.
ಮಹಮದ್ ಅನಾಸ್ ಶೇ.೯೪.೦೪, ಜೈನ್ ಸಾಲಿಕ್ ಶೇ.೯೨.೧೪, ಮಹಮದ್ ಶಮಾಸ್ ಶೇ.೮೯.೧೨, ಅಮೃತ ಹೆಚ್.ಸಿ ಶೇ.೮೯, ವೈಷ್ಣವಿ.ಎ.ಕೆ ಶೇ.೮೮, ಧನಷ್ ಶೇ.೮೭, ಅಫೀಫಾ ಶೇ.೮೪.೩೨, ಮಹಮದ್ ಅಜಾನ್ ಶೇ.೮೪ ರಷ್ಟು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆಂದು ಶ್ಲಾಘಿಸಿದರು.
ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆಂದು ತಿಳಿಸಿರುವ ಅವರು, ಇದಕ್ಕೆ ಶ್ರಮಿಸಿದ ಶಿಕ್ಷಕರು ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
Vidya Bharathi School achieves 100% results in SSLC