ಚಿಕ್ಕಮಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸು ತ್ತಿರುವ ಸ್ವಚ್ಚತಾ ಕರ್ಮಚಾರಿಗಳಿಗೆ ಖಾಯಂ ನೇಮಕ ಹಾಗೂ ನೇರಪಾವತಿ ಸೌಲಭ್ಯ ಒದಗಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಭರವಸೆ ನೀಡಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ದಲಿತ ಚಳುವಳಿಯ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪನವರ ೮೭ನೇ ಜಯಂತಿ ಮತ್ತು ದಸಂಸ ಸದಸ್ಯತ್ವ ಆಂದೋಲನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಜಿಲ್ಲೆಯ ನಗರಸಭೆ, ಪುರಸಭೆ, ಪ.ಪಂ., ಆಸ್ಪತ್ರೆ ಮತ್ತು ಗ್ರಾ.ಪಂ.ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲ ಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನೇಮಕಾತಿ ಮಾಡಿಕೊಂಡು ಗುತ್ತಿಗೆ ಪದ್ಧ ತಿ ರದ್ದುಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಮಿಕ ವರ್ಗಕ್ಕೆ ಸ್ಪಂದಿಸಲಾಗುವುದು ಎಂದರು.
ಜೀವನದ ಹಂಗನ್ನು ತೊರೆದು ನಗರಾದ್ಯಂತ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಸಮಸ್ಯೆಗಳನ್ನು ಸ್ಪಂದಿಸಲು ಸರ್ಕಾರ ಸದಾಸಿದ್ಧ. ಆ ನಿಟ್ಟಿನಲ್ಲಿ ಜಿಲ್ಲೆಯ ಸ್ವಚ್ಚತಾ ಕರ್ಮಚಾರಿಗಳು ಮನೆ, ನಿವೇಶನ, ನಿಗಧಿತ ಸಮಯಕ್ಕೆ ವೇತನದ ಬೇಡಿಕೆಗಳನ್ನು ಪುರಸ್ಕರಿಸಿ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂ ದು ತಿಳಿಸಿದರು.
ನಾಡಿನ ದಲಿತ ಚಳುವಳಿ ಹರಿಕಾರ ಪ್ರೊ.ಬಿ.ಕೃಷ್ಣಪ್ಪನವರು ಅಸಮಾನತೆ, ಅಸ್ಪಸ್ಥಶ್ಯತೆ ವಿರುದ್ಧ ಹೋರಾ ಡಿದ್ದಲ್ಲದೇ ಶೋಷಿತರ ಧ್ವನಿಯಾದವರು. ಕೇವಲ ದಲಿತ ಜನಾಂಗಕ್ಕೆ ಸೀಮಿತರಾಗದೇ ಬದುಕಿನ ನೊಂದ ವರ ಎಲ್ಲಾವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ಚಳುವಳಿಯನ್ನು ರೂಪಿಸಿ ಶೋಷಿತರ ಏಳಿಗೆಗೆ ಆಧಾರವಾದ ವರು ಎಂದರು.
ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು-ಸಾವು ಸಾಮಾನ್ಯ. ಈ ನಡುವೆ ಬಡವರು, ಶೋಷಿತರನ್ನು ಕಾ ಪಾಡುವನಲ್ಲಿ ಹೋರಾಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ಮರಣ ನಂತರವು ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಪ್ರೊ.ಬಿ.ಕೃಷ್ಣಪ್ಪನವರ ಹೋರಾಟವೇ ಸಾಕ್ಷಿ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪನವರು ಬಿ.ಆರ್.ಅಂಬೇಡ್ಕರ್ರವರ ಆಶಯದ ರಥವನ್ನು ಎಳೆದವರು. ಸಾಧ್ಯವಾದಲ್ಲಿ ನಾವುಗಳು ಆ ರಥವನ್ನು ಮುಂದೇಳೆಯಲು ಪ್ರಯತ್ನಿಸ ಬೇಕೆ ಹೊರತು, ಹಿಂದಿಕ್ಕುವ ಕೆಲಸಕ್ಕೆ ಕೈಹಾಕಬಾರದು ಎಂದು ಹೇಳಿದರು.
ಪ್ರಸ್ತುತ ಸಂವಿಧಾನದಡಿ ಮೀಸಲಾತಿ ಲಾಭವನ್ನು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಿರುವ ಜನರು ತನ್ನ ಬೇರನ್ನು ಮರೆಯಬಾರದು. ಒಂದುವೇಳೆ ಮೂಲ ಮರೆತರೇ ಅಂಬೇಡ್ಕರ್ ರವರ ತ್ಯಾಗಕ್ಕೆ ಅಪಪ್ರಚಾರ, ಶಕ್ತಿಕೊಟ್ಟ ವೇದಿಕೆಗೆ ದ್ರೋಹವೆಸಗಿದಂತೆ. ಹೀಗಾಗಿ ಮೂಲವನ್ನು ಸಮಾಜ ದ ವೈಚಾರಿಕ ಚಿಂತನೆಗಳಡಿ ಜೀವಿಸಬೇಕಿದೆ ಎಂದರು.
ದಸಂಸ ಸದಸ್ಯತ್ವ ಆಂದೋಲನ ಕೇವಲ ರಶೀದಿಗಳಿಗೆ ಸೀಮಿತವಾಗದೇ, ಹೃದಯಕ್ಕೆ ನಾಟಬೇಕು. ವೈಚಾರಿಕವಾಗಿ ವಿಚಾರವನ್ನು ಅಳವಡಿಸಿಕೊಂಡು ಸದಸ್ಯತ್ವ ಪಡೆದಾಗ ಮಾತ್ರ ಸದಸ್ಯತ್ವಕ್ಕೆ ಶಕ್ತಿ ಬರಲಿದೆ. ಸು ಮ್ಮನೆ ರಶೀದಿ ಕೊಟ್ಟಲ್ಲಿ ಆಶಯಗಳು ಈಡೇರುವುದಿಲ್ಲ. ವೈಚಾರಿಕತೆ ಅಳವಡಿಸಿಕೊಂಡು ಹೃದಯದಲ್ಲಿ ಪ್ರತಿ ಷ್ಟಾಪಿಸಿಕೊಂಡು ಅಂಭೇಡ್ಕರ್ರವರ ಸಾಮಾಜಿಕ ನ್ಯಾಯದ ಹೋರಾಟವನ್ನು ಮುನ್ನಡೆಸಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗಧಿಗೊ ಳಿಸಿರುವ ವೇತನ ಜೀವನಕ್ಕೆ ಸಾಕಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸಮಾ ಜಕ್ಕಾಗಿ ದುಡಿಯುವ ಸ್ವಚ್ಚತಾ ಕರ್ಮಚಾರಿಗಳ ಮೂಲಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕ ಟೇಶ್ ದಲಿತರ ಮೇಲಿನ ದೌರ್ಜನಗಳನ್ನು ತಡೆಗಟ್ಟಲು ೧೯೭೪ರಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ದಸಂಸವನ್ನು ಹು ಟ್ಟುಹಾಕಿ ಶೋಷಿತರ ಪರ ಹೋರಾಟಕ್ಕಿಳಿದು ಬದುಕಿನುದ್ಧಕ್ಕೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಮಹತ್ವದ ನಾಯಕರಾಗಿದ್ದರು ಎಂದರು.
ಪ್ರಸ್ತುತ ರಾಜ್ಯಾದ್ಯಂತ ವಿವಿಧ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ರಾಜ್ಯಸರ್ಕಾ ರ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ನಿರಂತರವಾಗಿ ಸ್ವಾಸ್ಥ್ಯ ಸಮಾಜಕ್ಕೆ ಸೇವೆಯಲ್ಲಿರುವ ಪೌರಕಾರ್ಮಿಕ ರನ್ನು ಮೂಲಬೇಡಿಕೆ ಈಡೇರಿಸುವ ಮೂಲಕ ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ದಸಂಸ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ದಸಂಸ ಸದಸ್ಯತ್ವ ಆಂದೋನದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ನೊಂದಾಯಿಸಿ ದರು. ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್, ಸಣ್ಣ ಮತ್ತು ಮಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್.ರಾಜಶೇಖರ್, ದಸಂಸ ಹಿರಿಯ ಮುಖಂಡ ಶ್ರೀಧರ್ ಕಲಿವೀರ್, ರಾಜ್ಯ ಸಂಘಟ ನಾ ಸಂಚಾಲಕರಾದ ಎಂ.ಶಿವಾನಂದ ಸಾವಳಗಿ, ಮಾರುತಿ ಬಿ.ಹೊಸಮನಿ, ರಾಜಶೇಖರ್, ವೆಂಕಟರಾ ಮ ಪ್ಪ, ದುರ್ಗಾದಾಸ್, ಎನ್.ಲೋಕೇಶ್, ಕೆ.ನಂಜಪ್ಪ, ಆದಿನಾರಾಯಣ, ತಮ್ಮಣ್ಣ ಕಾನಗಡ್ಡಿ, ಮಹದೇವ ಪ್ರಸಾ ದ್ ಮತ್ತಿತರರು ಉಪಸ್ಥಿತರಿದ್ದರು.
MLAs promise to fulfill basic demands of contract workers