Author: chikkamagalur express

ಚಿಕ್ಕಮಗಳೂರು: ಅಜ್ಞಾನ ಅಹಂಕಾರ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪದ ಟ್ರಸ್ಟ್‌ನ ಅಧ್ಯಕ್ಷರಾದ ಜಯಂತ್ ಪೈ, ಪ್ರಭು ತಿಳಿಸಿದರು. ಅವರು ಇಂದು ಶಾರದ ಪೈ ಕಲ್ಯಾಣ ಮಂಟಪದಲ್ಲಿ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ, ಗುರುವನ್ನು ಅರಿವಿನ ಸಾಗರ ಎಂದು ಕರೆಯುತ್ತಾರೆ ಸರ್ವರ ಹಿತ ಬಯಸುವ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಆಗಿದೆ ಎಂದು ಹೇಳಿದರು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ ಗುರುಗಳು ಜೀವನದ ಕತ್ತಲನ್ನು ದೂರಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದರು, ವಿದ್ಯಾರ್ಥಿಗಳು ಗುರುಗಳ ಮತ್ತು ಪೋಷಕರ ಮಾರ್ಗದರ್ಶನದಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು, ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ ನಿಮ್ಮದಾಗಿಸಿಕೊಳ್ಳಬೇಕು ಎಂದರು. ಪ್ರತಿ ವರ್ಷ ಗುರುಪೂರ್ಣಿಮೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಮಾಡುವುದರ ಜೊತೆಗೆ…

Read More

ಚಿಕ್ಕಮಗಳೂರು: ದುಡಿಮೆಯೇ ಬಡತನ ಅಳಿಸುವ ಸಾಧನ. ಕೂಡಿ ಬಾಳಬೇಕು, ಒಟ್ಟಾಗಿ ದುಡಿದಾಗ ಮಾತ್ರ ಬಡತನ ನಿವಾರಣೆ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರ್ ಕೊರವರ್, ಅಭಿಪ್ರಾಯಿಸಿದರು. ಅವರು ಇಂದು ಅಂಬೇಡ್ಕರ್ ಭವನದಲ್ಲಿ ಯೂನಿಯನ್ ಬ್ಯಾಂಕ್ ವತಿಯಿಂದ ಏರ್ಪಡಿಸಲಾಗಿದ್ದ ಸ್ವಸಹಾಯ ಸಂಘದ ಮಹಿಳೆಯರಿಗೆ ವಿವಾಹ ನೋಂದಣಿ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಜಿಲ್ಲೆಯ ಎಲ್ಲಾ ಮಹಿಳಾ ಸ್ವಸಹಾಯ ಸಂಘಗಳ ಸಬಲೀಕರಣಕ್ಕಾಗಿ ಸರ್ಕಾರ ಬ್ಯಾಂಕ್‌ಗಳ ಮೂಲಕ ಆರ್ಥಿಕ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಂಡು ಸ್ವ-ಉದ್ಯೋಗ ಸ್ಥಾಪಿಸಿ ಮಹಿಳೆಯರು ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದರು. ಹೆಣ್ಣುಮಕ್ಕಳು ಆರ್ಥಿಕ ಸುಧಾರಣೆಯಾದರೆ ದೇಶ ಸುಭಿಕ್ಷವಾಗುತ್ತದೆ ಎಂಬುದನ್ನು ಮನಗಂಡ ಸರ್ಕಾರ ಈ ವರ್ಷ ‘ನಾರಿಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದೆ ಎಂದ ಅವರು ಮಹಿಳೆಯರು ಯಾವುದೇ ಉದ್ಯೋಗ ಕೈಗೊಳ್ಳಬೇಕಾದರೆ ಕೌಶಲ್ಯ ತರಬೇತಿ ಅಗತ್ಯ ಆ ಮೂಲಕ ಮಹಿಳೆಯರನ್ನು ಉದ್ಯೋಗದತ್ತ ಆಸಕ್ತಿ ಮೂಡಿಸಿ ಮುಖ್ಯ ವಾಹಿನಿಗೆ ತರಬೇಕೆಂಬುದು ಯೂನಿಯನ್ ಬ್ಯಾಂಕಿನ ತರಬೇತಿ ಸಂಸ್ಥೆಯ ಉದ್ದೇಶವಾಗಿದೆ…

Read More

ಚಿಕ್ಕಮಗಳೂರು:  ಜನಸಂಖ್ಯೆಗೆ ಸಂತೆ ಮಾರುಕಟ್ಟೆ ವ್ಯವಸ್ಥೆಯನ್ನು ಸರ್ಕಾರ ಮತ್ತು ನಗರಸಭೆ ಮಾಡಬೇಕು, ಇದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ತಿಳಿಸಿದರು. ಅವರು ಇಂದು ನಗರದ ಸಂತೆ ಮಾರುಕಟ್ಟೆಗೆ ನಗರಸಭಾಧ್ಯಕ್ಷೆ ಶೀಲಾದಿನೇಶ್ ಹಾಗೂ ಸದಸ್ಯರೊಂದಿಗೆ ಭೇಟಿನೀಡಿ ಸ್ವಚ್ಚತೆ ಬಗ್ಗೆ ಮತ್ತು ಸಾರ್ವಜನಿಕರು ಓಡಾಡುವ ದಾರಿಯಲ್ಲಿ ತರಕಾರಿಗಳನ್ನು ಇಡದೇ ಕಟ್ಟೆಮೇಲೆ ಇಟ್ಟು ವ್ಯಾಪಾರ ಮಾಡಬೇಕೆಂದು ಸೂಚನೆ ನೀಡಿದರು. ವ್ಯಾಪಾರಸ್ಥರು ಜನ ತಿರುಗಾಡುವ ದಾರಿಯಲ್ಲಿ ತರಕಾರಿ, ಹಣ್ಣು, ವೀಳ್ಯಾದೆಲೆ, ಹೂವು ಸೇರಿದಂತೆ ಎಲ್ಲವುಗಳನ್ನು ಇಡುತ್ತಿರುವುದರಿಂದ ಸ್ವಚ್ಚತೆಗೆ ಧಕ್ಕೆಯಾಗಿದೆ. ಕಟ್ಟೆ ಮೇಲೆ ಈ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವಂತೆ ತಿಳಿಸಿದರು. ಸಂತೆಯ ಒಳಭಾಗದಲ್ಲಿ ವಾಹನಗಳ ಪಾರ್ಕಿಂಗ್, ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಮಹಿಳೆಯರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇದರಿಂದಾಗಿ ಜೇಬುಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ನಗರಸಭೆ ಕಡಿವಾಣ ಹಾಕಬೇಕೆಂದು ಕಡಕ್ ಸೂಚನೆ ನೀಡಿದರು. ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸಂತೆಯಲ್ಲಿ ಶುಚಿತ್ವ ಕಾಪಾಡುವ ಜೊತೆಗೆ ನಗರಸಭೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯಾಪಾರಸ್ಥರಿಗೆ…

Read More

ಚಿಕ್ಕಮಗಳೂರು: : ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕಳೆದ ಸರ್ಕಾರದ ಅವಧಿಯಲ್ಲಿ ಮಂಜೂರಾದ ಮನೆಗಳ ನಿರ್ಮಾಣ ಕಾಮಗಾರಿಯನ್ನು ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷ ಕಳೆದರೂ ಪೂರ್ಣಗೊಳಿಸದಿರುವ ಬಗ್ಗೆ ಫಲಾನುಭವಿಗಳು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರಲ್ಲಿ ಅಳಲು ತೋಡಿಕೊಂಡರು. ಬುಧವಾರ ಬೆಳಗ್ಗೆ ನಗರದ ೧೧ ಮತ್ತು ೧೩ ರ ಶಂಕರಪುರ ಹಾಗೂ ಪಂಪಾನಗರಕ್ಕೆ ಭೇಟಿ ನೀಡಿ ಸ್ಲಂಬೋರ್ಡ್‌ನಿಂದ ಮಂಜೂರಾಗಿದ್ದ ಮನೆಗಳ ಕಾಮಗಾರಿ ಪರಿಶೀಸಿದ ವೇಳೆ ಫಲಾನುಭವಿಗಳಾದ ಆರ್‍ಮುಗಂ ಮತ್ತು ಶಾಂತಮ್ಮ ಎಂಬುವವರು ಮಾತನಾಡಿ ಗುಡಿಸಲುಗಳಲ್ಲಿ ವಾಸವಿದ್ದ ನಮಗೆ ಮನೆ ನಿರ್ಮಿಸಿಕೊಡುವುದಾಗಿ ಹೇಳಿ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಆದರೆ ೨ ವರ್ಷದಿಂದ ಕಾಮಗಾರಿ ಸ್ಥಗಿತಗೊಂಡು ಬೀದಿಗೆ ಬಿದ್ದಿದ್ದೇವೆ ಎಂದು ಕಣ್ಣೀರಿಟ್ಟರು. ಈ ವೇಳೆ ಮಾತನಾಡಿದ ಸಿ.ಟಿ.ರವಿ, ಬಿಜೆಪಿ ಸರ್ಕಾರ ಇದ್ದಾಗ ಬಡವರಿಗಾಗಿ ಸ್ಲಂ ಬೋರ್ಡ್‌ನಿಂದ ೨೫ ಮನೆಗಳನ್ನು ಮಂಜೂರು ಮಾಡಿಸಿದ್ದೆವು. ಅಂದು ಫಲಾನುಭವಿಗಳಿಂದ ೧೦ ಸಾವಿರ ರೂ. ಹಣ ಕಟ್ಟಿಸಿಕೊಳ್ಳಲಾಗಿತ್ತು. ಉಳಿದದ್ದನ್ನು ಸರ್ಕಾರ ಭರಿಸಿ ಮನೆ ಕಟ್ಟಿಸಿಕೊಡಲು ಟೆಂಡರ್…

Read More

ಚಿಕ್ಕಮಗಳೂರು:  ಇಂದಿನ ಯುವ ಜನತೆ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಬೇಕು ಎಂದು ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ. ಕೃಷ್ಣೆಗೌಡ ಸಲಹೆ ಮಾಡಿದರು. ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಪ್ರಥಮ ವ?ದ ವಿದ್ಯಾರ್ಥಿಗಳು ಅಂತಿಮ ವ?ದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿಂದು ಮಾನವೀಯ ಮೌಲ್ಯಗಳ ಕೊರತೆಯಿದೆ, ಅದರಿಂದಾಗಿ ದೌರ್ಜನ್ಯ, ಶೋ?ಣೆ, ಅತ್ಯಾಚಾರ, ಕೊಲೆ ಸೇರಿದಂತೆ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ, ಎಲ್ಲೆಡೆ ಅಭದ್ರತೆ, ಅಶಾಂತಿ ಕಾಡುತ್ತಿದೆ ಎಂದು ವಿ?ದಿಸಿದ ಅವರು ಈ ಪರಿಸ್ಥಿತಿ ಸರಿ ಹೋಗಬೇಕಾದರೆ ಯುವಜನತೆ ಭಕ್ತಿ ಭಂಡಾರಿ ಬಸವಣ್ಣನವರ ಸಪ್ತ ಸೂತ್ರಗಳನ್ನು ಮೈಗೂಡಿಸಿಕೊಳ್ಳಬೇಕು, ರಾ?ಕವಿ ಕುವೆಂಪು ಅವರ ಆಶಯದಂತೆ ವಿಶ್ವಮಾನವರಾಗಲು ಪ್ರಯತ್ನಿಸಬೇಕು ಎಂದು ಕಿವಿ ಮಾತು ಹೇಳಿದರು. ಯುವಜನತೆ ಪ್ರತಿದಿನ ಪತ್ರಿಕೆಗಳನ್ನು ಓದಬೇಕು,, ಆ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಯಬೇಕು, ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು, ಆರೋಗ್ಯ ಮತ್ತು ವಿದ್ಯೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ,…

Read More

ಚಿಕ್ಕಮಗಳೂರು: ಯುವ ಜನಾಂಗ ಮಾದಕ ವಸ್ತುಗಳ ಚಟಕ್ಕೆ ದಾಸರಾಗಿ ಆರೋಗ್ಯ, ಗೌರವ ಹಾಳು ಮಾಡಿಕೊಳ್ಳುವುದರಿಂದ ನಿಜವಾಗಿ ನೋವು, ಹಿಂಸೆ ಅನುಭವಿಸುವುದು ಪೋಷಕರು ಮಾತ್ರ. ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್‌ಪಿ ಜೆ.ಎಸ್.ತಿಪ್ಪೇಸ್ವಾಮಿ ತಿಳಿಸಿದರು. ಅವರು ಮಂಗಳವಾರ ನಗರದ ಆದಿಚುಂಚನಗಿರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳು ಮತ್ತು ಮಾದಕ ವಸ್ತುಗಳಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಮಾತಾಡಿ ಧೂಮಪಾನ, ಮದ್ಯಪಾನದ ಜೊತೆಗೆ ವೈಟ್ನರ್, ಥಿನ್ನರ್, ಸಲೂಷನ್, ಅಯೋಡಿಕ್ಸ್ ಇವುಗಳೆಲ್ಲವೂ ಮಾರುಕಟ್ಟೆಯಲ್ಲಿ ಸುಲಭಕ್ಕೆ ಸಿಗುವ ಮಾದಕ ಪದಾರ್ಥಗಳು. ನಂತರದ್ದು ಗಾಂಜಾ, ಜೊತೆಗೆ ಸಿಂಥಟಿಕ್ ಡ್ರಗ್‌ಗಳಾದ ಅಫೀಮು, ಹೆರಾಯಿನ್, ಕೊಕೇನ್ ಹಾಗೆಯೇ ಎಂಡಿಎಂಎ ಎನ್ನುವ ಮಾತ್ರೆ ರೂಪದ ವಸ್ತು, ಹಾಗೂ ಚಾಕೊಲೇಟ್ ಮಾದರಿಯಲ್ಲೂ ಸಿಗುತ್ತಿದೆ ಎಂದು ವಿವರಿಸಿದರು. ಈ ಪೈಕಿ ಸುಲಭವಾಗಿ ಸಿಗುವ ಥಿನ್ನರ್ ಮತ್ತು ಸಲೂಷನ್ ಚಟಕ್ಕೆ ಹಲವಾರು ಯುವಕರು ಬಲಿಯಾಗುತ್ತಿದ್ದಾರೆ. ಅದನ್ನು ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲದಿರುವುದು ಹಾಗೂ ಅದನ್ನು ಸೇವಿಸಿದವರನ್ನು…

Read More