Subscribe to Updates
Get the latest creative news from FooBar about art, design and business.
- e-paper (12-07-2025) Chikkamagalur Express
- ಲಕ್ಸಾಗರ ಕೆರೆಯನ್ನು ಪುನಶ್ಚೇತನಗೊಳಿಸುವಂತೆ ಮನವಿ
- ಚಿಕ್ಕಮಗಳೂರು-ಹಾಸನ ರೈಲು ಸಂಚಾರ ಎರಡು ವರ್ಷದಲ್ಲಿ ಆರಂಭ
- e-paper (11-07-2025) Chikkamagalur Express
- ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು
- ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯ
- e-paper (10-07-2025) Chikkamagalur Express
- ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು
Author: chikkamagalur express
ಚಿಕ್ಕಮಗಳೂರು: ಪಾಪ ಅವರು ಸದನದಲ್ಲಿ ಮಾಡಬಾರದ ಅವಮಾನ ಮಾಡಿದ್ದಾರೆ. ಈಗ ಬಾಗಿನ ನೀಡಲು ಬಂದಿದ್ದಾರೆ. ಬಿಜೆಪಿಯವರ ಸೋಗಿನ ಬಾಗಿನದ ಅವಶ್ಯಕತೆ ನನಗಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಿನ ಜನತೆ ನನಗೆ ಮನೆ ಮಗಳಂತೆ ಸ್ವಾಗತ ಕೋರಿದ್ದಾರೆ. ಅದು ನನಗೆ ಸಾಕು ಎಂದರು. ಬೆಳಗಾವಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಕಠಿಣ ಶಬ್ದದಿಂದ ಖಂಡಿಸುತ್ತೇನೆ. ಆರೋಪಿಗಳು ಯಾರೇ ಆಗಿದ್ದರೂ ಅತ್ಯಂತ ಕಠಿಣವಾದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು. ಪ್ರಕರಣವನ್ನು ಕಂಪ್ಲೀಟ್ ಆಗಿ ಟ್ರ್ಯಾಕ್ ಮಾಡುತ್ತಿದ್ದೇನೆ. ಸಂತ್ರಸ್ತೆಯ ಮನೆಯವರು ಹಾಗೂ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಜೊತೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಿನ್ ಟು ಪಿನ್ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅವರಿಗೆ ಕ್ಷಮೆ ಎನ್ನುವುದೇ ಇಲ್ಲ ಎಂದು ಹೇಳಿದರು. ಬಿಜೆಪಿ ನಡೆಸುತ್ತಿರುವ ಕಲಬುರ್ಗಿ ಚಲೋ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವವಿದೆ. ಅವರು ಎಲ್ಲಿಗೆ ಬೇಕಾದರೂ ಚಲೋ…
ಚಿಕ್ಕಮಗಳೂರು: ಸರ್ಕಾರದ ಆದೇಶ ಕಳೆದ ವರ್ಷದ ನವೆಂಬರ್ ೧೨ ರಂದು ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪ ಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯತೆ ಕುರಿತು (ಎಂಪೆರಿಕಲ್ ಡಾಟಾ) ಪಡೆದು ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸೂಕ್ತ ಶಿಫಾರಸ್ಸಿನೊಂದಿಗೆ ವರದಿ ಸಲ್ಲಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯಲ್ಲಿ ಈಗಾಗಲೇ ಏಕ ಸದಸ್ಯ ಆಯೋಗವನ್ನು ರಚಿಸಲಾಗಿದೆ. ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಲು ಹೊಸದಾದ ಸಮೀಕ್ಷೆಯನ್ನು ನಡೆಸಲು ಕಳೆದ ಮಾರ್ಚ್ ೨೭ರ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದರ ಮೂಲಕ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದೆ. ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಪರಿಶಿಷ್ಟ ಜಾತಿ ಜನಾಂಗದ ಸಮೀಕ್ಷೆ ಕಾರ್ಯವು ಇನ್ನೂ ಪ್ರಗತಿಯಾಗಬೇಕಾಗಿರುವುದರಿಂದ, ಮಳೆ, ಹವಾಮಾನ ವೈಪರೀತ್ಯ ಕಾರಣಗಳಿಂದಾಗಿ ಅನೇಕ ಪರಿಶಿಷ್ಟ ಜಾತಿ…
ಚಿಕ್ಕಮಗಳೂರು: – ರಾಜ್ಯದಲ್ಲಿ ನೂರಕ್ಕೂ ಹೆಚ್ಚಿರುವ ಸಮಾಜದ ಉಪಪಂಗಡಗಳು ಒಂದಾ ಗುವ ಮೂಲಕ ವೀರಶೈವ ಲಿಂಗಾಯಿತರೆಂದು ಪ್ರತಿಪಾದಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಗರದ ಎಐಟಿ ಕಾಲೇಜು ಸಮೀಪದ ವೀರಶೈವ ಲಿಂಗಾಯಿತ ಸಮುದಾಯ ಭವನದಲ್ಲಿ ಶನಿವಾರ ನಡೆದ ಜಗದ್ಗುರು ಶ್ರೀ ರೇಣುಕಾ ಮತ್ತು ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ವೀರಶೈವ ಮತ್ತು ಲಿಂಗಾಯಿತ ಸಮಾಜವು ಹಸುವಿನಂತೆ, ಹಿಂದೆ ಬಂದರೆ ಒದೆಯುವದಿಲ್ಲ, ಮುಂದೆ ಬಂದರೆ ಹಾಯುವುದಿಲ್ಲ. ನಾಡಿನ ಪ್ರತಿಯೊಂದು ಜಾತಿ, ಧರ್ಮ, ಸಮಾಜವನ್ನು ಜೊತೆಗೂಡಿಸಿಕೊಂಡು ಅಸುಯೆಪಡದೇ ಅತ್ಯಂತ ಪ್ರೀತಿಯಿಂದ ಕಾಣುವ ಸಮಾಜ ವೀರಶೈವ-ಲಿಂಗಾಯಿತ ಎಂದು ಹೇಳಿದರು. ರಾಜ್ಯದಾದ್ಯಂತ ಮೂಲೆ ಮೂಲೆಗಳಲ್ಲಿ ನಮ್ಮ ಸಮಾಜವು ನೆಲೆಯೂರಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಕರೆತರುವ ನಿಟ್ಟಿನಲ್ಲಿ ಎಲ್ಲಾ ಉಪಪಂಗಡಗಳು ಒಂದಾಗುವು ದು ಮುಖ್ಯವಾಗಿದ್ದು ಬಸವಣ್ಣನವರ ಆದರ್ಶದಲ್ಲಿ ಸಾಗುತ್ತಿರುವ ಜನಾಂಗವು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು. ಸರ್ಕಾರದ ಅನುದಾನ, ಸಮಾಜದ ಮುಖಂಡರು ಹಾಗೂ…
ಚಿಕ್ಕಮಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಮೊಂಟೆಸ್ಸರಿ, ನರ್ಸರಿ, ಎಲ್.ಕೆ.ಜಿ., ಯು.ಕೆ.ಜಿ. ಮಾದರಿಯ ತರಗತಿಗಳನ್ನು ಈ ವರ್ಷದಿಂದ ತೆರೆದು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಯೋಜನೆಯನ್ನು ಸರ್ಕಾರದಿಂದ ರೂಪಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳು ಆರಂಭವಾಗಿ ೫೦ ವರ್ಷಗಳು ಕಳೆದಿದ್ದು, ಈ ಸುವರ್ಣ ಮಹೋತ್ಸವದ ನೆನಪಿನಲ್ಲಿ ಜಿಲ್ಲೆಯಲ್ಲಿ ಗುರುತಿಸಲಾಗಿರುವ ೧೩೦ ಅಂಗನವಾಡಿ ಕೇಂದ್ರಗಳನ್ನು ಈ ಯೋಜನೆಗೆ ಗುರುತಿಸಲಾಗಿದೆ ಎಂದು ಹೇಳಿದರು. ನಮ್ಮ ಸರ್ಕಾರ ಇರುವುದೇ ಜನರ ಅಭಿವೃದ್ಧಿಗಾಗಿ. ಮಹಿಳೆಯರನ್ನು ಯಜಮಾನಿ ಎಂದು ಗುರುತಿಸಿದ್ದು ನಮ್ಮ ಸರ್ಕಾರ. ಮಹಿಳೆಯರನ್ನು ಸ್ವಾಭಿಮಾನಿಗಳನ್ನಾಗಿ…
ಚಿಕ್ಕಮಗಳೂರು: ಅಂಚೆ ಇಲಾಖೆ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಹೊರತಂದಿದ್ದು, ಇನ್ನು ಮುಂದೆ ಮಲೆನಾಡಿನ ಕಾಫಿ ತೋಟಗಳ ಸೊಬಗು ಅಂಚೆ ಇಲಾಖೆಯ ಮೊಹರಿನಲ್ಲಿ ವಿಜೃಂಭಿಸಲಿದೆ. ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಇಲಾಖೆಯ ವಿಭಾಗೀಯ ಅಂಚೆ ಅದೀಕ್ಷಕ ಎನ್.ಬಿ. ಶ್ರೀನಾಥ್ ಜಿಲ್ಲೆಯ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮುದ್ರೆಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು ಸಾರ್ವಜನಿಕರು ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದಿನಿಂದ ತಮ್ಮ ಪತ್ರಗಳಿಗೆ ಕಾಫಿ ತೋಟದ ಚಿತ್ರಣವಿರುವ ವಿಶೇಷ ಮೊಹರನ್ನು ಹಾಕಿಸಿಕೊಳ್ಳಬಹುದು ಎಂದು ಹೇಳಿದರು. ಕಳೆದ ೪೦ ವರ್ಷಗಳ ಹಿಂದೆ ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಾಲಯದ ಚಿತ್ರಣ ವಿರುವ ವಿಶೇಷ ಮುದ್ರೆಯನ್ನು ಅಂಚೆ ಇಲಾಖೆ ಹೊರತಂದಿದ್ದು, ಇದೀಗ ಕಾಫಿ ತೋಟಗಳ ಚಿತ್ರಣವಿರುವ ವಿಶೇಷ ಮೊಹರನ್ನು ಹೊರ ತರುವ ಮೂಲಕ ಅಂಚೆ ಇಲಾಖೆ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ತಿಳಿಸಿದರು. ಕಾಫಿ ಮಂಡಳಿ ಉಪನಿರ್ದೇಶಕ ವೆಂಕಟರೆಡ್ಡಿ ಮಾತನಾಡಿ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ತನ್ನದೇ…
ಚಿಕ್ಕಮಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕುಟುಂಬದ ಅಕ್ರಮ ಆಸ್ತಿಗಳ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ್ದಕ್ಕಾಗಿ ಆಸ್ತಿ ಹಿಂದುರುಗಿಸಿದ ಸೇಡಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆಂಬಲಿಗರು ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿ ಕೊಲೆ ಮಾಡುವ ಯತ್ನ ನಡೆಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸಿ ನಾಳೆ (ಮೇ.೨೪) ಕಲ್ಬುರ್ಗಿ ಚಲೋ ನಡೆಸಲಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಲ್ಬುರ್ಗಿ ಚಲೋ ಕರೆನೀಡಿದ್ದು, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವವರೆಗೂ ಬಿಜೆಪಿ ಹೋರಾಟ ಮಾಡಲಿದ್ದು, ಇದು ಕೇವಲ ವ್ಯಕ್ತಿಯ ವಿರುದ್ಧವಲ್ಲ, ನ್ಯಾಯ-ಸಂವಿಧಾನದ ರಕ್ಷಣೆ ಮತ್ತು ಸರ್ಕಾರದ ದಲಿತ ವಿರೋಧಿ ಧೋರಣೆಯ ವಿರುದ್ಧವಾಗಿದೆ ಎಂದು ಆರೋಪಿಸಿದರು. ಕಲ್ಬುರ್ಗಿಯ ಚಿತ್ತಾಪುರದಲ್ಲಿ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಚಲವಾದಿ ನಾರಾಯಣಸ್ವಾಮಿ ಅವರನ್ನು ಗೃಹಬಂಧನದಲ್ಲಿಟ್ಟು ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಈ ಘಟನೆಯು ಪೂರ್ವ ನಿಯೋಜಿತ…
ಚಿಕ್ಕಮಗಳೂರು: ಜಾತಿ ಸಮೀಕ್ಷೆಗೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಪ.ಜಾ, ಪ.ಪಂ ಸಮುದಾಯದವರು ತಮ್ಮ ಜಾತಿ-ಉಪಜಾತಿಯನ್ನು ಸಮೀಕ್ಷೆ ಕಾಲಂನಲ್ಲಿ ಕಡ್ಡಾಯವಾಗಿ ನಮೂದಿಸಲು ಸಹಕರಿಸಿದಾಗ ಜಾತಿ ಸಮೀಕ್ಷೆ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ಮನವಿ ಮಾಡಿದರು. ಅವರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಡಾ. ಹೆಚ್.ಎನ್ ನಾಗಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲ್ಲೂಕು ಮಟ್ಟದ ಜಾತಿ ಸಮೀಕ್ಷೆಯ ಕುರಿತು ಮಾಹಿತಿ ಸಂಗ್ರಹಣೆಯ ತಾಲ್ಲೂಕು ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯಗಳು ಇನ್ನೂ ಮುಂತಾದ ಅಗತ್ಯ ಸಾಮಾನ್ಯ ಮಾಹಿತಿಗಳನ್ನು ಜಾತಿ ಗಣತಿದಾರರಿಗೆ ನೀಡಬೇಕೆಂದು ವಿನಂತಿಸಿದರು. ಈ ರೀತಿಯ ಮಾಹಿತಿ ಕೊಡುವುದರಿಂದ ಈಗ ಲಭ್ಯವಿರುವ ಬಿಪಿಎಲ್ ಪಡಿತರ ಚೀಟಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆಯೋಗದ ನಿರ್ದೇಶನದಂತೆ…