Author: chikkamagalur express

ಚಿಕ್ಕಮಗಳೂರು: ದೇವಾಲಯಗಳು ಧಾರ್ಮಿಕ ಶ್ರದ್ಧೆಯ ಪ್ರತೀಕವಾಗಿದ್ದು ಭಕ್ತರ ಹೃದಯದಲ್ಲಿ ದೇವರ ಪ್ರತಿಷ್ಠಾಪನೆ ಆಗಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪರಮ ಪೂಜ್ಯ ಶ್ರೀ ಶ್ರೀ ೧೧೦೮ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಿಸಿದರು. ಅವರು ಇಂದು ಕಡೂರು ತಾಲ್ಲೂಕು ನಿಡಘಟ್ಟ ಗ್ರಾಮದಲ್ಲಿ ಸುಮಾರು ೧.೫೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀ ಕಲ್ಲೇಶ್ವರ ಸ್ವಾಮಿಯವರ ನೂತನ ದೇವಾಲಯ ಮತ್ತು ಗೋಪುರ ಕಳಸಾರೋಹಣ ಹಾಗೂ ಧಾರ್ಮಿಕ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ದೇವಸ್ಥಾನಕ್ಕೆ ೧೧೪೦ ಇಸವಿಯಲ್ಲಿ ನಿರ್ಮಿಸಿರುವ ಶಾಸನವಿದ್ದು, ದೇವಾಲಯ ನಿರ್ಮಾಣ ಮಾಡಲು ಜಮೀನು ದಾನ ಮಾಡಿದ್ದಾರೆ, ಈ ರೀತಿಯ ದೇವರಿಗೆ ಮೀಸಲಿಟ್ಟ ಜಮೀನನ್ನು ಅಪಹರಿಸಿದರೆ ಸಾವಿರಾರು ವರ್ಷಗಳ ಕಾಲ ಕ್ರಿಮಿ-ಕೀಟಗಳಾಗಿ ಜನಿಸುತ್ತಾರೆ ಎಂಬ ಉಲ್ಲೇಖ ಇದೆ ಎಂದು ಹೇಳಿದರು. ಸರ್ಕಾರ ಉಳುವವನೇ ಭೂಮಿ ಒಡೆಯ ಎಂಬ ಕಾನೂನು ಜಾರಿ ಮಾಡಿದ ನಂತರ ಭೂಮಿಯನ್ನು ಅಪಹರಿಸಿರುವ ಉದಾಹಣೆಗಳಿವೆ ಇದು ಈ ಶಾಸನಕ್ಕೆ ತದ್ವಿರುದ್ದವಾಗಿರುವುದನ್ನು ಮನಗಾಣಬಹುದಾಗಿದೆ, ಕನ್ನಡ ನಾಡಿನಲ್ಲಿ ಹಳ್ಳಿ…

Read More

ಚಿಕ್ಕಮಗಳೂರು:  ಪ್ರಧಾನ ಮಂತ್ರಿ ಗ್ರಾಮ್ ಸಡಕ್ ಯೋಜನೆಯ ನಾಲ್ಕನೇ ಹಂತದ ಕಾ ಮಗಾರಿಗೆ ಒಂದಿಷ್ಟು ಬೇಡಿಕೆಗಳನ್ನು ಪಂಚಾಯತ್‌ರಾಜ್ ಇಲಾಖೆ ಮುಖಾಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾ ವನೆ ಕಳಿಸಲಾಗಿದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು. ನಗರದ ಸಂಸದರ ಕಚೇರಿಯಲ್ಲಿ ಗ್ರಾಮ್ ಸಡಕ್ ಯೋಜನೆ ಬಗ್ಗೆ ಯೋಜನಾ ಅಧಿಕಾರಿಗಳೊಂದಿಗೆ ಚರ್ಚಿಸಿ ಶನಿವಾರ ಮಾತನಾಡಿದ ಅವರು ಪ್ರಸ್ತುತ ಯೋಜನೆಯ ಮಾರ್ಗಸೂಚಿಗಳು ಯಾವುದೇ ಸಂಪ ರ್ಕವಿಲ್ಲದ ಗ್ರಾಮಕ್ಕೆ ಹೊಸದಾಗಿ ಸಂಪರ್ಕ ಕಲ್ಪಿಸುವುದಾಗಿದೆ ಎಂದರು. ಜಿಲ್ಲೆ ಭೌಗೋಳಿಕವಾಗಿರುವ ಒಟ್ಟು ಪರಿಸ್ಥಿತಿಯಲ್ಲಿ ಒಂದಲ್ಲೊಂದು ರೂಪದಲ್ಲಿ ಗ್ರಾಮಗಳಿಗೆ ರಸ್ತೆ ಸಂ ಪರ್ಕವಿದ್ದು ಆ ಹಿನ್ನೆಲೆಯಲ್ಲಿ ಯೋಜನೆಯನ್ನು ಪೂರೈಸಲು ಮಾರ್ಗಸೂಚಿಗಳಿಲ್ಲ ಎಂಬುದು ಅಧಿಕಾರಿ ಗಳು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು. ಹೀಗಾಗಿ ನಕ್ಸಲ್ ಹಾಗೂ ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಹೆಚ್ಚು ಕೃಷಿ ಕ್ಷೇತ್ರವನ್ನು ಅವಲಂ ಬಿಸಿರುವ ಕಾರಣ ಗ್ರಾಮ್ ಸಡಕ್ ಯೋಜನೆಯ ಮಾರ್ಗಸೂಚಿಗಳಲ್ಲಿ ಕೆಲವು ರಿಯಾಯಿತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು. ಕೇಂದ್ರದಿಂದ ಪ್ರಸ್ತಾವನೆ…

Read More

ಚಿಕ್ಕಮಗಳೂರು: ಎಸ್‌ಎಸ್‌ಎಲ್‌ಸಿ ೨೦೨೪-೨೫ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಜೆವಿಎಸ್ ಶಾಲೆಗೆ ಶೇ೧೦೦ ಫಲಿತಾಂಶ ಬಂದಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ತಿಳಿಸಿದರು. ಅವರು ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಜೆವಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೆವಿಎಸ್ ಶಾಲೆಯ ಉದ್ದೇಶ ಸೇವಾ ಮನೋಭಾವನೆಯಿಂದ ವಿದ್ಯಾಧಾನ ಮಾಡುವ ಮೂಲಕ ದೇಶದಲ್ಲಿ ಮುಂದಿನ ಒಳ್ಳೆಯ ಪ್ರಜೆಗಳಾಗಿ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದು ಶ್ಲಾಘಿಸಿದರು. ಡೊನೇಷನ್ ಆಸೆ ಆಮಿಷಗಳನ್ನು ವಿದ್ಯಾರ್ಥಿ ಪೋಷಕರಿಗೆ ನೀಡದೆ ಸರ್ಕಾರಿ ನಿಯಮದಂತೆ ಶುಲ್ಕ ಪಡೆದು ನಡೆಸುತ್ತಿರುವುದು ಜೆವಿಎಸ್ ಶಾಲೆಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲೂ ಸೇವಾ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ವಿದ್ಯಾರ್ಥಿಗಳ ಪರೀಕ್ಷೆಯನ್ನು ಜೆವಿಎಸ್ ಶಾಲೆ ವಿದ್ಯಾರ್ಥಿಗಳು ಬರೆದು ಬರುತ್ತಿರುವುದರಿಂದ ಅಲ್ಲಿಯೂ ಶೇ೧೦೦ ಫಲಿತಾಂಶ ಬರುತ್ತಿದೆ ಅದಕ್ಕಾಗಿ ಈ ಶಾಲೆ ಶಿಕ್ಷಕರಿಗೂ ಶುಭಾಶಯ ತಿಳಿಸುತ್ತೇನೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಜೆವಿಎಸ್ ಶಾಲೆ…

Read More

ಚಿಕ್ಕಮಗಳೂರು: ಸರ್ಕಾರದ ನಿರ್ದೇಶನದಂತೆ ಜಾತಿ, ಸಾಮಾಜಿಕ ಸಮೀಕ್ಷೆಯನ್ನು ಸಮಗ್ರ ಮಾಹಿತಿಯೊಂದಿಗೆ ವರದಿಯನ್ನು ತಯಾರಿಸಿ ಮೇ.೧೭ ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ತಿಳಿಸಿದರು. ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗೌರವಾನ್ವಿತ ನ್ಯಾಯಮೂರ್ತಿ ಡಾ. ಹೆಚ್.ಎನ್ ನಾಗಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲ್ಲೂಕು ಮಟ್ಟದ ಮೇಲ್ವಿಚಾರಕರು ಮತ್ತು ಗಣತಿದಾರರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇವರುಗಳ ನೇತೃತ್ವದಲ್ಲಿ ಶಿಕ್ಷಕರಿಗೆ ಸಮೀಕ್ಷೆ ನಡೆಸಲು ನಿಯೋಜನೆಗೊಂಡಿರುವ ಎಲ್ಲರಿಗೂ ಇಂದು ತರಬೇತಿ ನೀಡಲು ಈ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಪ್ರತೀ ಮನೆ ಮನೆಗೆ ಭೇಟಿ ನೀಡುವ ಮೂಲಕ ಸರ್ಕಾರ ನೀಡಿರುವ ಕೈಪಿಡಿಯಲ್ಲಿ ಕುಟುಂಬದ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಅವರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಮಟ್ಟದ ಸಮೀಕ್ಷೆಯನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ…

Read More

ಚಿಕ್ಕಮಗಳೂರು: ಸರ್ವರಿಗೂ ಸಾಮಾಜಿಕ ನ್ಯಾಯ, ಸಮಬಾಳು, ಸಮಪಾಲಿಗೆ ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವ ಕ್ರಾಂತಿಕಾರಿ ಕಾರ್ಯಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇವೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿರುವ ಜಾತಿ ಜನಗಣತಿಯು ೧೯೩೧ ರ ನಂತರ ೨೦೧೧ ರವರೆಗೆ ನಡೆದೇ ಇರಲಿಲ್ಲ. ೫೦ ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರವು ಈ ಕಾರ್ಯಕ್ಕೆ ಮುಂದಾಗಲಿಲ್ಲ. ಇದೀಗ ಪರಿಶಿಷ್ಠ ಜಾತಿ ಪರಿಶಿಷ್ಠ ಪಂಗಡ ಹಾಗೂ ಸಮುದಾಯದಲ್ಲಿರುವ ಉಪ ಜಾತಿಗಳು ಹಿಂದುಳಿದ ವರ್ಗದಲ್ಲಿರುವ ಸಮುದಾಯಳು, ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿಯಾಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸಲು ಮುಂದಾಗಿದೆ. ಇದೊಂದು ಕ್ರಾಂತಿಕಾರಿ ಕಾರ್ಯವಾಗಿದೆ ಎಂದರು. ಸಮಾಜದ ಮುಖ್ಯವಾಹಿನಿಗೆ ಬಾರದಿರುವ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರ ಬೇಡಿಕೆಗಳೇನು? ಅವರ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನಿಖರವಾಗಿ…

Read More

ಚಿಕ್ಕಮಗಳೂರು: ಶ್ರಮಿಕರ ನೆರವಿಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಧಾವಿಸುವ ಮೂಲಕ ಹಮಾಲಿ ಕಾರ್ಮಿಕರಿಗೆ ಸವಲತ್ತು ನೀಡಿ ನೆರವಾಗಬೇಕೆಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ಅವರು ಇಂದು ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಕಾರ್ಮಿಕರ ಸಂಘ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಹಮಾಲಿ ಕಾರ್ಮಿಕರಿಗೆ ಶುಭಾಶಯ ಕೋರಿ ಮಾತನಾಡಿದರು. ಕಟ್ಟಡ ಕಾರ್ಮಿಕರಿಗೆ ಹಾಗೂ ಅಸಂಘಟಿತ ವಲಯ ಕಾರ್ಮಿಕರಿಗೆ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸವಲತ್ತುಗಳನ್ನು ವಿತರಿಸುತ್ತಿದ್ದು, ಆದರೆ, ಹಮಾಲಿ ಕಾರ್ಮಿಕರು ಕಾರ್ಮಿಕ ಇಲಾಖೆ ವ್ಯಾಪ್ತಿಯಿಂದ ಹೊರಗೆ ಉಳಿದಿರುವುದು ವಿಷಾಧನೀಯ. ರಾಜ್ಯಮಟ್ಟದಲ್ಲಿ ಈ ಸಮಸ್ಯೆ ಬಗ್ಗೆ ಕಾರ್ಮಿಕ ಸಚಿವರೊಂದಿಗೆ ಚರ್ಚಿಸಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಹಮಾಲಿ ಕಾರ್ಮಿಕರ ಸಂಘ ಪ್ರಾರಂಭದಿಂದ ಇದೂವರೆಗೆ ನಡೆದುಬಂದ ದಾರಿಯ ಬಗ್ಗೆ ಸ್ಮರಿಸಿದ ಶಾಸಕರು, ಕಳೆದ ೩೫ ವರ್ಷಗಳಿಂದ ಕಾರ್ಮಿಕರ ಸಂಪರ್ಕದಲ್ಲಿದ್ದೇನೆ, ಹಮಾಲಿ ಕಾರ್ಮಿಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಲು ಸರ್ಕಾರದಲ್ಲಿ ಚರ್ಚಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಹಮಾಲಿ ಕಾರ್ಮಿಕರ…

Read More

ಚಿಕ್ಕಮಗಳೂರು: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸ್ವಚ್ಚತೆ ಬಗ್ಗೆ ಅನುಭವಗಳನ್ನು ಎಲ್ಲರೊಂದಿಗೆ ಹಂಚಿಕೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಲೈಫ್‌ಲೈನ್ ಫೀಡ್ಸ್ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ ಹೇಳಿದರು. ಅವರು ಇಂದು ಕಲ್ಯಾಣ ನಗರದಲ್ಲಿ ಲೈಫ್‌ಲೈನ್ ಫೀಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಂಪೂರ್ಣ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಸ್ವಚ್ಚತೆಗೆ ಆದ್ಯ ಗಮನನೀಡಿ ಪಾರ್ಕ್ ಇನ್ನಿತರೆಡೆ ಬೆಳೆದಿರುವ ಪಾರ್ಥೇನಿಯಂ ಮತ್ತು ಗಿಡಗೆಂಟೆಗಳನ್ನು ತೆರವುಗೊಳಿಸುವಲ್ಲಿ ಮುಂದಾಗಬೇಕೆಂದು ಕರೆನೀಡಿದರು. ಕಲ್ಯಾಣ ನಗರ ವೆಲ್‌ಫೇರ್ ಸೊಸೈಟಿ ಮೂಲಕ ಪರಸ್ಪರ ಪರಿಚಯದಿಂದಾಗಿ ಸ್ವಚ್ಚತೆ ಬಗ್ಗೆ ಚರ್ಚಿಸಿ ಅಭಿಯಾನ ಆರಂಭಿಸಿರುವುದು ಇದು ಆರಂಭ ಶೂರತ್ವವಾಗದೆ ವರ್ಷವಿಡೀ ಸ್ವಚ್ಚತೆ ನಡೆಯಬೇಕೆಂದು ತಿಳಿಸಿದರು. ಹೊರದೇಶಗಳಲ್ಲಿರುವ ಸ್ವಚ್ಚತೆ ಬಗ್ಗೆ ವಿವರಿಸಿ ಮಾಹಿತಿ ನೀಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನೀರು ಕುಡಿದ ಬಾಟಲಿಯನ್ನು ಅಲ್ಲೇ ಬಿಡುವುದು, ಚಾಕಲೇಟ್…

Read More