Subscribe to Updates
Get the latest creative news from FooBar about art, design and business.
- e-paper (11-07-2025) Chikkamagalur Express
- ಅಜ್ಞಾನ ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿ ಬೆಳಗಿಸುವರೇ ಗುರು
- ಮಹಿಳಾ ಸಬಲೀಕರಣಕ್ಕೆ ಬ್ಯಾಂಕ್ಗಳ ಮೂಲಕ ಸಾಲಸೌಲಭ್ಯ
- e-paper (10-07-2025) Chikkamagalur Express
- ವ್ಯಾಪಾರಸ್ಥರು ನಗರಸಭೆ ನಿಬಂಧನೆಗಳ ಪಾಲಿಸಬೇಕು
- ಕಾಂಗ್ರೆಸ್ ಸರ್ಕಾರ ಬಡವರ ಜೀವನದ ಜೊತೆ ಚೆಲ್ಲಾಟ
- e-paper (09-07-2025) Chikkamagalur Express
- ಯುವಜನತೆ ರಾಷ್ಟ್ರಕವಿ ಕುವೆಂಪು ಆಶಯದಂತೆ ವಿಶ್ವಮಾನವರಾಗಬೇಕು
Author: chikkamagalur express
ಚಿಕ್ಕಮಗಳೂರು: ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಜುಲೈ ೫ ರಂದು ಚುನಾವಣೆ ನಡೆಯಲಿದ್ದು, ಜನತಾದಳದ ಬಿ.ಶೀಲಾ ದಿನೇಶ್ ರವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಅಧ್ಯಕ್ಷರಾಗಿದ್ದ ಬಿಜೆಪಿಯ ಸುಜಾತಶಿವಕುಮಾರ್‌ರವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂಧಾನ ನಡೆಸಿದ ಬಿಜೆಪಿ ಮತ್ತು ದಳದವರು ಸುಜಾತರವರ ರಾಜೀನಾಮೆ ಅಂಗೀಕಾರವಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಜು.೫ ರಂದು ಶನಿವಾರ ನಿಗದಿಪಡಿಸಲಾಗಿದೆ. ಬಿಜೆಪಿ ಮತ್ತು ದಳದ ಮೈತ್ರಿಯಿಂದಾಗಿ ಕೇವಲ ಮೂರು ಸದಸ್ಯರನ್ನು ಹೊಂದಿರುವ ಜನತಾದಳದವರಿಗೆ ಇದರಿಂದಾಗಿ ಭರ್ಜರಿ ಲಾಟರಿ ಹೊಡೆದಂತಾಗಿದೆ. ಕಳೆದ ಇಪ್ಪತ್ತೈದು ವ?ಗಳ ಹಿಂದೆ ನಗರಸಭೆಯ ಅಧಿಕಾರ ಹಿಡಿದಿದ್ದ ಜನತಾದಳಕ್ಕೆ ಬಯಸದೇ ಬಂದ ಭಾಗ್ಯವಾದರೆ. ದಿನೇಶ್ ಕುಟುಂಬದವರು ೧೫ನೇ ವಾರ್ಡಿನಿಂದ ಸತತ ಇಪ್ಪತ್ತೈದು ವ?ಗಳಿಂದ ನಗರಸಭೆಗೆ ಆಯ್ಕೆ ಆಗುತ್ತಿದ್ದಾರೆ. ದಿನೇಶ್ ಮೂರು ಬಾರಿ ನಗರಸಭೆಗೆ ಆಯ್ಕೆಯಾಗುತ್ತಿದ್ದರು. ಇವರ ಸಹೋದರಿ ದ್ರಾಕ್ಷಾಯಿಣಿ ಮತ್ತು ಪ್ರಸ್ತುತ ಬಿ. ಶೀಲಾ ದಿನೇಶ್ ಆಯ್ಕೆಯಾಗಿರುವುದು ವಿಶೇಷ ವಾರ್ಡ್‌ನ ಸದಸ್ಯರಾಗಿ ಸದಾ ಕಾಲವೂ ಸೇವೆ ಮಾಡುತ್ತಿರುವುದರಿಂದ ನಗರಸಭೆ ಚುಕ್ಕಾಣಿ ಹಿಡಿಯುವ ಅದೃ? ಒದಗಿಬಂದಿದೆ. ೩೦ ತಿಂಗಳ ಅವಧಿಗೆ…
ಚಿಕ್ಕಮಗಳೂರು: ಮಕ್ಕಳಿಗೆ ಸಂಸ್ಕಾರವನ್ನು ಕೊಡುವ ಜೊತೆಗೆ ವಿಶೇಷ ಜ್ಞಾನವನ್ನು ಬಿತ್ತುವ ಕಾರ್ಯಕ್ರಮ ಅಕ್ಷರ ಅಭ್ಯಾಸ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು. ಅವರು ಇಂದು ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆವಿಎಸ್ ಶಾಲೆ ವತಿಯಿಂದ ಏರ್ಪಡಿಸಲಾಗಿದ್ದ ನರ್ಸರಿ, ಪ್ರೈಮರಿ, ಹೈಯರ್ ಪ್ರೈಮರಿ ಮತ್ತು ಜೆವಿಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ನಿಮ್ಮ ಮಗುವಿನ ಭದ್ರ ಬುನಾದಿಯ ಪ್ರಾರಂಭ ಅಕ್ಷರ ಅಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಜಿಲ್ಲಾ ಒಕ್ಕಲಿಗರ ಸಂಘ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಕೊಡುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಎಂದು ಶ್ಲಾಘಿಸಿ ಜ್ಞಾನಕ್ಕೆ ಧರ್ಮ, ಜಾತಿ ಇಲ್ಲ, ನೀರು, ಗಾಳಿ, ಭೂಮಿ, ಆಕಾಶ, ಅಗ್ನಿ ಈ ಪಂಚಭೂತಗಳಿಗೂ ಧರ್ಮ-ಜಾತಿ ಇಲ್ಲ. ಅಕ್ಷರಕ್ಕೂ ಯಾವುದೇ ಜಾತಿ-ಧರ್ಮದ ಹಂಗು ಇಲ್ಲ, ಸಂಸ್ಕಾರ ಮತ್ತು ಸಂಸ್ಕೃತಿ ಮೂಲಕ ಹರಿಶಿಣ ಕೊಂಬಿನಿಂದ ಪೂರ್ವಿಕರು ಅಕ್ಷರಾಭ್ಯಾಸ ಮಾಡುತ್ತಾ ಬಂದಿರುವುದೇ ಮುಂದುವರೆದ ಈ…
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ೫೨ ಶಾಖೆಗಳನ್ನು ಹೊಂದಿದ್ದು, ಈ ಮೂಲಕ ೨೫೦೦ ಕೋಟಿ ರೂಗಳ ವ್ಯವಹಾರ ವಹಿವಾಟು ನಡೆಸಲಾಗಿದೆ ಎಂದು ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀರಾಮಪ್ಪ ತಿಳಿಸಿದರು. ಅವರು ಬ್ಯಾಂಕಿನಲ್ಲಿ ವ್ಯವಸ್ಥಾಪಕರಾಗಿ ಕಳೆದ ೪೦ ವರ್ಷಗಳ ಸುದೀರ್ಘ ಸೇವೆಯಿಂದ ನಿವೃತ್ತಿ ಹೊಂದಿರುವ ನಾರಾಯಣ್ ನಾಯಕ್‌ರವರಿಗೆ ಬೀಳ್ಕೊಡುಗೆ ನೀಡಿ ಗೌರವಿಸಿ ಮಾತನಾಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ಈವರೆಗೆ ಶೇ.೯೦ ರಷ್ಟು ರೈತರಿಗೆ ಸಾಲಸೌಲಭ್ಯಗಳನ್ನು ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ರೈತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯುವ ಸಾಲಸೌಲಭ್ಯಗಳ ಮಾದರಿಯಲ್ಲಿ ಕಾರು, ಮನೆ, ಶಿಕ್ಷಣ ಸಾಲ, ಬೆಳೆಸಾಲ, ಅಭಿವೃದ್ಧಿ ಸಾಲ ತಮ್ಮ ಬ್ಯಾಂಕಿನಲ್ಲೂ ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಉತ್ತಮ ಗ್ರಾಹಕ ಸೇವೆಯೊಂದಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕಿನ ೫೨ ಶಾಖೆಗಳಲ್ಲಿಯೂ ವಿಸ್ತರಿಸಲಾಗಿದೆ ಎಂದರು. ನಿವೃತ್ತರಾದ ನಾರಾಯಣ ನಾಯಕ್ ರವರಿಗೆ ಆಯುಷ್ಯ, ಆರೋಗ್ಯ ಮತ್ತು ನೆಮ್ಮದಿಯನ್ನು ಕೊಡುವಂತೆ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ನಿವೃತ್ತರಾದ ನಾರಾಯಣ್‌ನಾಯಕ್ ಅಭಿನಂದನೆ ಸ್ವೀಕರಿಸಿ ಮಾತನಾಡಿ,…
ಚಿಕ್ಕಮಗಳೂರು: ಬಡವರು, ಶೋಷಿತರಿಗೆ ಶಿಕ್ಷಣ, ಆರೋಗ್ಯ ಮತ್ತು ಬದುಕು ಈ ಮೂರು ಅಂಶಗಳಿಗೆ ಒತ್ತುನೀಡಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು. ಅವರು ಇಂದು ಬಸವನಹಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಹಾಗೂ ಕಂಪ್ಯೂಟರ್ ಲ್ಯಾಬ್ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಸರ್ಕಾರ ಶಿಕ್ಷಣಕ್ಕೆ ಒತ್ತುನೀಡಿ ಅದೇ ರೀತಿ ಆರೋಗ್ಯ ಸೇವೆಗೆ ಉತ್ತಮ ಸ್ಪಂದನೆ ನೀಡಿದ್ದು, ನಗರದಲ್ಲಿ ನಾಲ್ಕು ಭಾಗದಲ್ಲಿ ನಮ್ಮ ಕ್ಲಿನಿಕ್ ತೆರೆದಿದೆ. ನಾಗರೀಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಈ ಕ್ಲಿನಿಕ್‌ನಲ್ಲಿ ಓರ್ವ ವೈದ್ಯ, ಶುಶ್ರೂಷಕಿ ಹಾಗೂ ಸಿಬಂದಿಯನ್ನು ನೇಮಕ ಮಾಡಿದೆ ಎಂದು ತಿಳಿಸಿದರು. ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲದಂತೆ ಬಸವನಹಳ್ಳಿ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಯರಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ರೀತಿಯ ಸೌಲಭ್ಯಗಳ ಜೊತೆಗೆ ಇಂದು ಕಂಪ್ಯೂಟರ್ ಲ್ಯಾಬ್ ಉದ್ಘಾಟನೆಯಾಗಿರುವುದು ಶಿಕ್ಷಣಕ್ಕೆ ಉಪಯುಕ್ತವಾಗಿದೆ ಎಂದರು. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ…
ಚಿಕ್ಕಮಗಳೂರು: ಇದುವರೆಗೆ ನಾನು ಅಪೇಕ್ಷೆ ಪಟ್ಟು ಪಕ್ಷದಲ್ಲಿ ಯಾವುದೇ ಹುದ್ದೆ ಪಡೆದಿಲ್ಲ. ಹಾಗೆ ಈಗಲೂ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಪಕ್ಷ ಯಾರಿಗೆ ಜವಾಬ್ದಾರಿ ಕೊಡುತ್ತದೆಯೋ ಅವರ ಜೊತೆಗೆ ಕೆಲಸ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಟ್ಟಲು ನಾವು ಒಂದು ಟೀಮ್ ಆಗಿ ಕೆಲಸ ಮಾಡಬೇಕು. ಹೀಗಾಗಿ ನಾವು ಟೀಮ್ ಆಗಿ ಕೆಲಸ ಮಾಡುತ್ತೇವೆ. ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರು ಎಂದು ತಿಳಿಸಿದರು. ನಾವು ವಿಚಾರದ ಜೊತೆ ಇದ್ದೇವೆ. ಪಕ್ಷ ಸಂಘಟನೆಗೆ ನಾವು ಸದಾ ಸಿದ್ದರಿದ್ದೇವೆ. ಒಂದು ತಂಡವಾಗಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು. ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರು. ಪಕ್ಷ ಕಟ್ಟಲು ನಾವು ಒಂದು ಟೀಮ್ ಆಗಿ ಕೆಲಸ ಮಾಡುತಿದ್ದೇವೆ. ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು. ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಇತ್ತೀಚೆಗೆ ದೆಹಲಿ ಹೋಗಿ ವರಿಷ್ಟರನ್ನು…
ಸಖರಾಯಪಟ್ಟಣ: ನಾಡಪ್ರಭು ಕೆಂಪೇಗೌಡರು ಮುಂದಾಲೋಚನೆಯಿಂದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ ಅಪ್ರತಿಮ ವ್ಯಕ್ತಿ ಎಂದು ಒಕ್ಕಲಿಗ ಸಂಘದ ಹೋಬಳಿ ಘಟಕದ ಅಧ್ಯಕ್ಷ ಎಸ್.ಆರ್.ಯೋಗೀಂದ್ರ ಹೇಳಿದರು. ಸಖರಾಯಪಟ್ಟಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬೆಂಗಳೂರು ನಗರಕ್ಕೆ ಗಡಿ ಗೋಪುರ ನಿರ್ಮಿಸುವ ಮೂಲಕ ಭವಿಷ್ಯದ ನಗರದ ರೂಪರೇಷೆಯನ್ನು ಅಂದೇ ನಿರ್ಮಿಸಿದ್ದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು. ನಿವೃತ್ತ ಲೆಕ್ಕಪರಿಶೋಧಕ ವೆಂಕಟೇಶ್ , ವಿಜಯನಗರದ ಅರಸರ ಮೇಲ್ಪಂಕ್ತಿಯನ್ನು ಅನುಸರಿಸಿದ ಕೆಂಪೇಗೌಡರು, ತಮ್ಮ ಆಡಳಿತದಲ್ಲಿ ಕೃಷಿ ಮತ್ತು ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿ ಬೆಂಗಳೂರಿನ ಇತಿಹಾಸದಲ್ಲಿ ಅಜರಾಮರರಾದರು ಎಂದರು. ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಬೈಕ್ ಜಾಥಾ ನಡೆಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಚೇತನ್, ಗಣೇಶಗೌಡ, ಅರುಣ್‌ಗೌಡ, ದೊಡ್ಡಮ್ಮ, ಮುಖಂಡರಾದ ರಾಮಲಿಂಗು, ಪುಟ್ಟಸ್ವಾಮಿ, ಸ. ರಾ. ಸತೀಶ್, ಮಿಥುನ್, ದರ್ಶನ್, ಉಲ್ಲಾಸ್, ಧರಣೇಶ್, ಪ್ರಮೋದ್, ಗ್ರಾಮಸ್ಥರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ…
ಚಿಕ್ಕಮಗಳೂರು: ಯಾರೇ ಆಗಲಿ ಐಎಎಸ್ ಅಧಿಕಾರಿ ಆಗಲು ಅದಕ್ಕೆ ಮೂಲ ಕಾರಣಕರ್ತರು ಶಿಕ್ಷಕರು, ಉಪನ್ಯಾಸಕರೇ ಆಗಿರುತ್ತಾರೆ. ದೇಶವನ್ನೇ ರೂಪಿಸುವ ಗುರುಗಳ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರು ಆರು ವರ್ಷಗಳ ಕಾಲ ತಮ್ಮ ಅಧಿಕಾರ ಮುಗಿಸಿ ಹೋದ ನಂತರ ಪಿಂಚಣಿ ನೀಡುತ್ತಾರೆ. ಆದರೆ ಅನುದಾನಿತ ಶಾಲೆ ಹಾಗೂ ಕಾಲೇಜುಗಳ ಸಿಬ್ಬಂದಿ ೪೦ ವರ್ಷ ಸೇವೆ ಸಲ್ಲಿಸಿದರು ಪಿಂಚಣಿ ಸಿಗುತ್ತಿಲ್ಲ. ಅವರು ಯಾರು ಐಷಾರಾಮಿ ಜೀವನ ನಡೆಸಲು ಪಿಂಚಣಿ ಕೇಳುತ್ತಿಲ್ಲ ಎಂದು ಹೇಳಿದರು. ಸುದೀರ್ಘ ಕೆಲಸ ಮಾಡಿದವರಿಗೆ ನೆಮ್ಮದಿಯ ಬದುಕು ನೀಡಲು ಪಿಂಚಣಿ ನೀಡಲೇಬೇಕು. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ…