Author: chikkamagalur express

ಬಾಳೆಹೊನ್ನೂರು (ಚಿಕ್ಕಮಗಳೂರು): ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನ ಮಾಡುವುದಾಗಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು. ಬಾಳೆ ಹೊನ್ನೂರಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಫಲವಾಗಿ ಕರ್ನಾಟಕದಲ್ಲಿ 6395 ಆನೆಗಳಿದ್ದು. ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಹುಲಿಯ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದರಿಂದ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವಾಗಿದ್ದು ಇದರ ನಿಯಂತ್ರಣಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ ಎಂದರು. ಆನೆಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್, ಕಂದಕ, ಸೌರ ಬೇಲಿ ಹಾಕಲಾಗುತ್ತಿದೆ. ತುರ್ತು ಸ್ಪಂದನ ಪಡೆ, ಆನೆ ಕಾರ್ಯಪಡೆಯನ್ನು ರಚಿಸಿದ್ದು, ಜನರಿಗೆ ಆನೆಗಳ ಚಲನವಲನದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇದರ ಜೊತೆಗೆ 2 ಸಾವಿರ ಹೆಕ್ಟೇರ್ ಕಾನನ ಪ್ರದೇಶದಲ್ಲಿ…

Read More

ಶೃಂಗೇರಿ: ನಾಡಿನೊಳಗೆ ಇರುವ ನಮಗೆ ಸರಕಾರ ಸವಲತ್ತು ನೀಡಿದಂತೆ ಗುಡ್ಡಗಡು ಪ್ರದೇಶದಲ್ಲಿರುವ ಗಿರಿಜನರಿಗೂ ಅಗತ್ಯ ಮೂಲಭೂತ ಸೌಕರ್ಯ ನೀಡಿ, ಅವರ ಸಂಕಷ್ಟ ಪರಿಹರಿಸಬೇಕು ಎಂದು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಕೆರೆ ಗ್ರಾಮ ಪಂಚಾಯಿತಿಯ ಬಾಳಗೆರೆ ಗ್ರಾಮದ ಮುಂಡಗಾರಿನಲ್ಲಿ ಏರ್ಪಡಿಸಿದ್ದ ಗಿರಿ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಹೇಗಿದೆಯೋ, ಅದೇ ರೀತಿ ಗುಡ್ಡಗಾಡಿನಲ್ಲಿ ತಲಾತಲಾಂತರದಿಂದ ಬದುಕು ನಡೆಸುತ್ತಿರುವ ಗಿರಿಜನರಿಗೂ ಬದುಕುವ ಹಕ್ಕು ಹಾಗೂ ಮೂಲಭೂತ ಸೌಲಭ್ಯ ಪಡೆಯಬೇಕಿದೆ ಎಂದರು. ಎಲ್ಲರೂ ಬಯಸುವುದು ನೆಮ್ಮದಿಯನ್ನು. ನೆಮ್ಮದಿ ದೊರಕಲು ನಾವು ಸದಾ ಭಗವಂತನ ಸ್ಮರಣೆ ಮಾಡಬೇಕು.ಭಗವಂತನ ಅನುಗ್ರಹವಿದ್ದಲ್ಲಿ ಸುಖ, ಸಂತೋಷ ದೊರಕುತ್ತದೆ.ಜಗತ್ತಿಗೆ ಮಾರ್ಗದರ್ಶನ ನೀಡಿದ ಶ್ರೀಕೃಷ್ಣನ ಅನುಗ್ರಹ ಮತ್ತು ನಮ್ಮ ಪ್ರಯತ್ನವಿದ್ದಲ್ಲಿ ಯಾವುದೇ ಕೆಲಸವನ್ನು ನಿರ್ವಿಘ್ನವಾಗಿ ಮಾಡಬಹುದಾಗಿದೆ.ನಮ್ಮ ಧರ್ಮವನ್ನು ನಾವು ಪಾಲಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಇವರಿಗೆ ರಸ್ತೆ, ಆಸ್ಪತ್ರೆ, ಶಾಲೆ ಯಾವುದೂ…

Read More

ಚಿಕ್ಕಮಗಳೂರು: ಸಹಸ್ರಾರು ಮಾಲಾಧಾರಿಗಳು ಪೀಠಕ್ಕೆ ಭೇಟಿ ನೀಡಿ ದತ್ತಪಾದುಕೆಗಳ ದರ್ಶನ ಮಾಡುವ ಮೂಲಕ ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಆಯೋಜಿಸಲಾಗಿದ್ದ ಈ ಬಾರಿಯ ದತ್ತ ಜಯಂತಿ ಉತ್ಸವ ಶಾಂತಿಯುತವಾಗಿ ಸಂಪನ್ನಗೊಂಡಿತು. ರಾಜ್ಯದ ಮೂಲೆ ಮೂಲೆಗಳಿಂದ ಶನಿವಾರ ದತ್ತಾತ್ರೇಯನ ಭಜನೆ ಮಾಡುತ್ತ ದತ್ತಪೀಠಕ್ಕೆ ಆಗಮಿಸಿದ ಮಾಲಾಧಾರಿಗಳು, ಹೋಮ, ಹವನ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇರುಮುಡಿ ಅರ್ಪಿಸಿ ಹಿಂತಿರುಗಿದರು. ಪಾದುಕೆಗಳ ದರ್ಶನ: ವಾಹನಗಳಿಗೆ ಕೇಸರಿ ಹಾಗೂ ಭಗವಾಧ್ವಜಗಳನ್ನು ಕಟ್ಟಿ, ಧ್ವನಿವರ್ಧಕಗಳಲ್ಲಿ ಶ್ರೀರಾಮ, ಆಂಜನೇಯನ ಗೀತೆಗಳನ್ನು ಹಾಕಿಕೊಂಡು, ಘೋಷಣೆಗಳನ್ನು ಕೂಗುತ್ತಾ, ಪೀಠಕ್ಕೆ ಆಗಮಿಸಿದ ಭಕ್ತರು, ಬ್ಯಾರಿಕೇಡ್‌ನಲ್ಲಿ ಸರತಿಯಲ್ಲಿ ಸಾಗಿ ಪಾದುಕೆಗಳ ದರ್ಶನ ಪಡೆದರು. ನಂತರ ಈ ಬಾರಿ ದತ್ತ ಪಾದುಕೆಗಳಿರುವ ಗುಹೆ ಎದುರು ಭಾಗದ ಆವರಣದಲ್ಲೇ ನಡೆದ ಹೋಮ ಹವನಗಳನ್ನು ಕಣ್ತುಂಬಿಕೊಂಡು ಹೊರ ಆವರಣದ ಶೆಡ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಇರುಮುಡಿ ಅರ್ಪಿಸಿದರು. ಸರ್ಕಾರದಿಂದ ನೇಮಿಸಲ್ಪಟ್ಟಿರುವ ಅರ್ಚಕರು ಗುಹೆಯಲ್ಲಿ ಪಾದುಕೆಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದರು. ಪೀಠದ ಆವರಣದಲ್ಲಿ ನಡೆದ ಗಣಹೋಮ, ದತ್ತ…

Read More

ಚಿಕ್ಕಮಗಳೂರು: ಹಲವು ದೇವರುಗಳನ್ನು ಪೂಜಿಸುವವರು ಇದ್ದರೂ ಸಹ ದತ್ತಪೀಠದ ಮುಕ್ತಿಗೆ ತಮ್ಮ ವೈರುಧ್ಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿರುವುದು ಶ್ಲಾಘನೀಯ ಎಂದು ವಾಗ್ಮಿ ಸೂಲಿಬೆಲೆ ಚಕ್ರವರ್ತಿ ಹೇಳಿದರು. ಶುಕ್ರವಾರ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಆಯೋಜಿಸಿದ್ದ ೨೫ನೇ ವರ್ಷದ ದತ್ತಜಯಂತಿ ಶೋಭಾಯಾತ್ರೆಯ ಧಾರ್ಮಿಕ ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಶೋಭಾಯಾತ್ರೆಯಲ್ಲಿ ಸೇರಿದ್ದ ಹಿಂದೂ ಯುವಕ ಯುವತಿಯರು ಈ ಕಾರ್ಯಕ್ರಮ ಮುಗಿದ ನಂತರವೂ ತಮ್ಮ ಒಗ್ಗಟ್ಟನ್ನು ಜೀವಂತಾಗಿಟ್ಟುಕೊಳ್ಳಬೇಕು. ಹಿಂದೂ ಎಂದರೇ ನಾಚಿಕೆ ಪಡುವ ಸಂಸ್ಕೃತಿಯಿಂದ ಮೈಕೊಡವಿ ನಾನೊಬ್ಬ ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಬೇಕು ಎಂದರು. ಅನೇಕ ಧರ್ಮಗಳು ಪ್ರಾಣಿಗಳನ್ನು ಕಡಿದು ರಕ್ತದ ಒಕುಳಿಯನ್ನು ಹರಿಸಿ ಹಬ್ಬ ಆಚರಿಸಿದರೇ ಹಿಂದೂ ಧರ್ಮದವರು ಹೋಳಿ ಎರಚಿ ಸಂಭ್ರಮಿಸಿ, ವಸುದೈವಕುಟುಬಕಂ ಎಂದು ಭೋದಿಸಿದ ಹಿಂದೂ ಧರ್ಮದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಪಡೆಬೇಕು ಎಂದು ಹೇಳಿದರು. ಜಗತ್ತಿನ ಹಲವು ನಾಗರಿಕತೆಗಳು, ಪರಂಪರೆಗಳು ಅಳಿದುಹೋದರು ಸಹ ಹಿಂದೂ ಸಂಸ್ಕೃತಿ ಇಂದಿಗೂ ಜೀವಂತವಿದೆ. ಹಿಂದೂ ಧರ್ಮದಲ್ಲಿ ಸತ್ತನಂತರ ಪಂಚಭೂತಗಳಲ್ಲಿ ಲೀನವಾಗಿ…

Read More

ಚಿಕ್ಕಮಗಳೂರು: ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೀಡಿ ಆಸ್ತಿ ಅಕ್ರಮ ವರ್ಗಾವಣೆ ಸಂಚು ರೂಪಿಸಿರುವ ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅಕ್ರಮ ಖಾತೆಯನ್ನು ರದ್ದುಮಾಡಿ ಮೂಲ ಖಾತೆದಾರರ ಹೆಸರಿಗೆ ಕಾನೂನುಬದ್ಧ ಖಾತೆಯನ್ನು ಬದಲಾವಣೆ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳನ್ನು ಒತ್ತಾಯಿಸಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಅವರು ಕಡೂರು ತಾಲ್ಲೂಕು ಗುಂಡುಸಾಗರ ಗ್ರಾಮದಲ್ಲಿ ನಡೆದಿರುವ ಅಕ್ರಮ ಖಾತೆ ವರ್ಗಾವಣೆಯ ಸಂಚಿನಲ್ಲಿ ಸಖರಾಯಪಟ್ಟಣ, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರುಗಳು, ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಮೂಲ ಖಾತೆದಾರರ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು. ಗಂಗಮ್ಮ ಕೋಂ ರಾಮೇಗೌಡ ಇವರಿಗೆ ಮಕ್ಕಳಿರುವುದಿಲ್ಲ ಎಂದು ಹೇಳಿ ನಕಲಿ ದಾಖಲೆ ಸೃಷ್ಟಿಸಿ ೫ ಎಕರೆಯಷ್ಟು ಜಂಟಿ ಖಾತೆಯಲ್ಲಿದ್ದ ತಮ್ಮ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದು ಇದಲ್ಲದೆ ಬದುಕಿರುವ ಗಂಗಮ್ಮ ನಿಧನ ಹೊಂದಿದ್ದಾರೆಂದು ಮರಣ ಪ್ರಮಾಣಪತ್ರ ಮಾಡಿಸಿದ್ದಾರೆಂದು…

Read More

ಚಿಕ್ಕಮಗಳೂರು: ದತ್ತ ಜಯಂತಿ ಉತ್ಸವದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ವಿಶ್ವಹಿಂದೂ ಪರಿಷತ್-ಬಜರಂಗದಳದ ಮುಖಂಡರು ಶುಕ್ರವಾರ ನಗರದಲ್ಲಿ ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸಿದರು. ಸಿ.ಟಿ.ರವಿ ಅವರೊಂದಿಗೆ ವಿಶ್ವಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ರಘು ಸಕಲೇಶಪುರ ಮತ್ತಿತರರರು ಸಿ.ಟಿ.ರವಿ ಅವರ ನಿವಾಸದಿಂದ ಭಿಕ್ಷಾಟನೆಗೆ ತೆರಳಿದರು. ಈ ವೇಳೆ ರವಿ ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಅವರು ಎಲ್ಲಾ ಮಾಲಾಧಾರಿಗಳಿಗೆ ಪಡಿ ನೀಡಿ ಬೀಳ್ಕೊಟ್ಟರು. ನಂತರ ದತ್ತಾತ್ರೇಯರ ಭಜನೆ ಮಾಡುತ್ತಾ ನರಾಯಣಪುರ ಬಡಾವಣೆಯ ವಿವಿಧ ಮನೆಗಳಿಗೆ ತೆರಳಿದ ಮಾಲಾಧಾರಿಗಳು ಪರಿ ಸಂಗ್ರಹಿಸಿದರು. ಈ ವೇಳೆ ನಿವಾಸಿಗಳು ಅಕ್ಕಿ, ಬೆಲ್ಲ, ಬೇಳೆ ಇನ್ನಿತರೆ ಪದಾರ್ಥಗಳನ್ನು ಪಡಿ ರೂಪದಲ್ಲಿ ಅರ್ಪಿಸಿದರು. ಕೆಲವರು ಮಾಲಾಧಾರಿಗಳ ಪಾದಗಳನ್ನು ತೊಳೆದು ಆಶೀರ್ವಾದ ಪಡೆದರು. ಇಂದು ಸಂಗ್ರಹಿಸಲಾಗಿರುವ ಪಡಿಯನ್ನು ಶನಿವಾರ ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿ ಅಲ್ಲಿ ನಡೆಯುವ ದತ್ತ ಜಯಂತಿ ಉತ್ಸವದಲ್ಲಿ ಸಮರ್ಪಿಸಲಾಗುವುದು. ಸಿ.ಟಿ.ರವಿ ಅವರ ಜೊತೆಗೆ ವಿಶ್ವಹಿಂದೂ ಪರಿಷತ್ ಹಾಸನ ವಿಭಾಗ ಕಾರ್ಯದರ್ಶಿ ಶಶಾಂಕ್ ಹೆರೂರು,…

Read More

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಹರಿದು ಬಂದ ಕೇಸರಿ ಅಲೆಯು ಬಲಿಷ್ಠ ಹಿಂದೂ ಶಕ್ತಿಯನ್ನು ಅನಾವರಣಗೊಳಿಸಿತು. ಸಹಸ್ರ ಸಂಖ್ಯೆಯಲ್ಲಿ ಸೇರಿದ ಮಾಲಾಧಾರಿ ಭಕ್ತರು, ಯುವಕ, ಯುವತಿಯರು, ವೃದ್ಧರು, ಮಕ್ಕಳಾದಿಯಾಗಿ ಎಲ್ಲರೂ ಕುಣಿದು ಕುಪ್ಪಳಿಸಿದರು. ಡಿಜೆಯ ಕವಿಗಚಿಕ್ಕುವ ಸದ್ದು, ನಾಸಿಕ್ ಮೇಳ, ದಕ್ಷಿಣ ಕನ್ನಡದ ಚಂಡೆ ವಾದನಕ್ಕೆ ಹೆಜ್ಜೆಹಾಕಿ ಅಮಿತೋತ್ಸಾಹದಲ್ಲಿ ಮಿಂದೆದ್ದರು. ಬಾಯಲ್ಲೂ ಕೇಳಿಬಂದ ದತ್ತಪೀಠ ನಮ್ಮದೆಂಬ ಘೋಷಣೆ ಮುಗಿಲು ಮುಟ್ಟಿತು. ಬಸವನಹಳ್ಳಿ ಮುಖ್ಯರಸ್ತೆಯ ಶಂಕರ ಮಠದಿಂದ ಮತ್ತೊಂದು ತುದಿಯ ಆಜಾದ್ ಪಾರ್ಕ್ ಸರ್ಕಲ್‌ವರೆಗೆ ನದಿಯಂತೆ ಹರಿದುಬಂದ ಕೇಸರಿ ಕಲವರ ನೋಡುಗರನ್ನು ನಿಬ್ಬೆರಗಾಗಿಸಿತು. ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ದತ್ತಾತ್ರೇಯರು, ಶ್ರೀರಾಮ, ಆಂಜನೇಯ, ಶಿವಾಜಿ ಮಹರಾಜ, ಭಾರತ ಮಾತೆಯ ಘೋಷಣೆಗಳು ಬಾನೆತ್ತರಕ್ಕೆ ಮೊಳಗಿದವು. ಬೃಹದಾಕಾರವಾದ ಭಗವಾಧ್ವಜಗಳನ್ನು ಬೀಸಿದ ಮಕ್ಕಳು, ಯುವಕರು ಶೋಭಾಯಾತ್ರೆಗೆ ರಂಗು ತುಂಬಿದರು. ದಣಿವರಿಯದೆ ಉತ್ಸಾಹ:  ಎದೆನಡುಗಿಸುವ ಡಿಜೆ ಸದ್ದಿಗೆ ಅಷ್ಟೇ ಉತ್ಸಾಹದಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಸಾರ್ವಜನಿಕರು ದಣಿವರಿಯದೆ ನೃತ್ಯ ಮಾಡಿದರು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಡಿಜೆ…

Read More