Author: chikkamagalur express

ಚಿಕ್ಕಮಗಳೂರು : ತಾಲ್ಲೂಕಿನ ಗೌಡನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಅಂಬಿಕಾ ಪ್ಲೇವುಡ್ ಫ್ಯಾಕ್ಟರಿ ಪಕ್ಕದ ಬೀರೇಗೌಡರ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇರುವ ಅಸ್ಸಾಂ ಮೂಲದ ವ್ಯಕ್ತಿ ಮಹಮ್ಮದ್ ರಬೂಲ್ ಇಸ್ಲಾಂ ತನ್ನ ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಮಾರಾಟ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಮಾಡುತ್ತಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆ ಪಿಎಸ್ಐ ರಘುನಾಥ್ ಎಸ್.ವಿ. ತಮ್ಮ ಸಿಬ್ಬಂದಿಗಳಾದ ಇಮ್ರಾನ್ ಖಾನ್ ಅನ್ವರ್ ಪಾಷಾ, ಮುಕ್ರೀಂ ಬೇಗ್, ಮಲ್ಲೇಗೌಡ ಹರಿಪ್ರಸಾದ್ ದಾಳಿ ನಡೆಸಿದ್ದು ಆರೋಪಿ ಮಹಮ್ಮದ್ ರಬೂಲ್ ಇಸ್ಲಾಂ ಬಿನ್ ಮಹಮ್ಮದ್ ಅಬ್ದುಲ್ ರಶೀದ್ ಎಂದು ಗುರುತಿಸಲಾಗಿದೆ. ಅಂಬಿಕಾ ಪ್ಲೇವುಡ್ ಫ್ಯಾಕ್ಟರಿಯಲ್ಲಿ ಮರ ಕತ್ತರಿಸುವ ಕೂಲಿ ಕೆಲಸ, ಪ್ರಸ್ತುತ ವಿಳಾಸ ಗೌಡನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ಚಿಕ್ಕಮಗಳೂರು ತಾ: ಸ್ವಂತ ಊರು- ಜಾರಮಾರಿ ಹಳ್ಳಿ, ಬಲಿಸತ್ರ ಪೋಸ್ಟ್, ದಿಂಗ್ ಪಿಎಸ್, ನಗ್ಗಾಂವ್ ಜಿಲ್ಲೆ, ಅಸ್ಸಾಂ ರಾಜ್ಯ ಆಗಿದ್ದು ಆತನ ಬಳಿ ಸಿಕ್ಕ 05 ಕೆಜಿ…

Read More

ಚಿಕ್ಕಮಗಳೂರು:  ನಗರದ ಬಸವನಹಳ್ಳಿ ರಂಗಣ್ಣನವರ ಛತ್ರದಲ್ಲಿ ಡಿ.೧೫ ರಂದು ಸಂಜೆ ೪.೩೦ಕ್ಕೆ ಡಾ.ಬೆಳವಾಡಿ ಹರೀಶ ಭಟ್ಟ ಸಂಗ್ರಹಿಸಿ ಅರ್ಥ ಸಹಿತವಾಗಿ ಅನುವಾದಿಸಿರುವ ೧೫೦ ಉಪನಿಷತ್ತುಗಳ ಎರಡು ಸಂಪುಟಗಳು ಲೋಕಾರ್ಪಣೆಯಾಗಲಿವೆ ಹಿರಿಯ ಪತ್ರಕರ್ತ ಗಿರಿಜಾಶಂಕರ್‌ ತಿಳಿಸಿದರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರಸ್ಟಿಗಳು ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ ಹಾಗೂ ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಹರಿಹರಪುರ ಮಠಾಧೀಶರಾದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರ್‍ನಳ್ಳಿ ಉದ್ಘಾಟಿಸುವರು. ಕಾಫಿ ಬೆಳೆಗಾರ ಎಂ.ಆರ್. ಗುರುಮೂರ್ತಿ ಮತ್ತು ಉದ್ಭವ ಪ್ರಕಾಶನದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸಂಪುಟಗಳನ್ನು ಲೋಕಾರ್ಪಣೆಗೊಳಿಸುವರು ಎಂದು ಹೇಳಿದರು. ಉದ್ಭವ ಪ್ರಕಾಶನದ ಆಡಳಿತ ಟ್ರಸ್ಟಿ ಡಿ.ಎಚ್.ನಟರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಹಾ ಸಂಪುಟಗಳನ್ನು ನಾಡಿನ ಖ್ಯಾತ ಸಂಸ್ಕೃತಿ ಚಿಂತಕಿ ಡಾ.ವೀಣಾ ಬನ್ನಂಜೆ ಪರಿಚಯಿಸುವರು. ಅತಿಥಿಗಳಾಗಿ ಕಾಫಿ ಬೆಳೆಗಾರ…

Read More

ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ನಡೆಯುತ್ತಿರುವ ದತ್ತ ಜಯಂತಿ ಅಂಗವಾಗಿ ಗುರುವಾರ ನಗರದಲ್ಲಿ ಸಹಸ್ರಾರು ಮಹಿಳೆಯರಿಂದ ಬೃಹತ್ ಸಂಕಿರ್ತನಾ ಯಾತ್ರೆ ನಡೆಯಿತು. ಬೆಳಗ್ಗೆ ಬೋಳರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಹಿಳೆಯರು ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು. ಕೇಸರಿ ರುಮಾಲು, ಶಾಲುಗಳನ್ನು ಧರಿಸಿದ್ದ ಮಹಿಳೆಯರು ಭಗವಾಧ್ವಜ ಹಿಡಿದು ಶ್ರೀಗುರು ದತ್ತಾತ್ರೇಯರು, ಶ್ರೀರಾಮ, ಭಾರತ ಮಾತೆಗೆ ಜಯಕಾರ ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ ಬಂದರು. ದಾರಿಯುದ್ದಕ್ಕೂ ದತ್ತಾತ್ರೇಯರ ಸಂಕೀರ್ತನೆಗಳನ್ನು ಹಾಡಿದರು. ಪುಟಾಣಿಗಳ ತಂಡವೊಂದು ಮೆರವಣಿಗೆಯ ಮುಂಚೂಣಿಯಲ್ಲಿ ದೇವರ ಕೀರ್ತನೆಯೊಂದಿಗೆ ನೃತ್ಯ ಮಾಡುತ್ತಾ ಸಾಗಿದ್ದು ಗಮನ ಸೆಳೆಯಿತು. ಯುವಕರ ತಂಡವೊಂದು ದತ್ರಾತ್ರೇಯರ ಮೂರ್ತಿಯನ್ನೊಳಗೊಂಡ ಅಡ್ಡೆಯನ್ನು ಹೊತ್ತು ಮೆರವಣಿಗೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂದರು. ವಿಶ್ವಹಿಂದೂ ಪರಿಷತ್-ಬಜರಂಗದಳ ಸಂಘಟನೆಗಳ ಮುಖಂಡರೊಂದಿಗೆ ನಗರಸಭೆ ಸದಸ್ಯರು, ಜಿ.ಪಂ., ತಾ.ಪಂ. ಮಾಜಿ ಸದಸ್ಯರುಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಹಲವು ಮಂದಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಬಾರಿ ಹುಬ್ಬಳ್ಳಿಯ ತೇಜೋಮಯಿ ಮಾತಾಜಿ, ಆದಿಶಕ್ತಿ ನಗರದ ಶುಭವ್ರತ…

Read More

ಚಿಕ್ಕಮಗಳೂರು: ರಾಜ್ಯದ ಅಭಿವೃದ್ಧಿಗೆ ವಿವಿಧ ರೀತಿಯ ಕೊಡುಗೆಯನ್ನು ನೀಡಿದ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ರಾಜ್ಯ ಕಳೆದುಕೊಂಡಂತಾಗಿದೆ ಎಂದು ಕೆಪಿಸಿಸಿ ವಕ್ತಾರರಾದ ಹೆಚ್.ಹೆಚ್.ದೇವರಾಜ್ ತಿಳಿಸಿದರು. ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಚಿಕ್ಕಮಗಳೂರು ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಹಿರಿಯ ರಾಜಕಾರಣಿ, ಮುತ್ಸದ್ದಿ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಿಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ ಎಸ್.ಎಂ.ಕೃಷ್ಣ ಅವರು ಉತ್ತಮ ಸಂಸ್ಕಾರದ ಜೀವನ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಮಾಜಿಕ ಕಾರ್ಯಗಳು ಇಂದಿಗೂ ಜೀವಂತವಾಗಿವೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿವಿಧ ಸ್ಥಾನಮಾನಗಳನ್ನು ಹೊಂದಿದ್ದರು ಎಂದು ಹೇಳಿದರು. ರಾಜಧಾನಿ ಬೆಂಗಳೂರಿಗೆ ಅಭಿವೃದ್ಧಿಯ ಮೂಲಕ ಹೊಸ ರೂಪವನ್ನು ಕೊಡುವುದರೊಂದಿಗೆ ಐಟಿ, ಬಿಟಿ ಕೇಂದ್ರವಾಗಿ ಜಗತ್ತಿನ ಗಮನ ಸೆಳೆಯುವಂತೆ ಮಾಡಿದ ಕೀರ್ತಿ ಎಸ್.ಎಂ.ಕೃಷ್ನ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರೂ ಆದ ಎಂ.ಸಿ.ಶಿವಾನಂದಸ್ವಾಮಿ ಮಾತನಡಿ, ಮಾಜಿ…

Read More

ಚಿಕ್ಕಮಗಳೂರು: ದತ್ತಜಯಂತಿ ಕಾರ್ಯಕ್ರಮಗಳು ಡಿ. ೧೨ರಿಂದ ಆರಂಭವಾಗುವ ಹಿನ್ನೆಲೆಯಲ್ಲಿ ದತ್ತಪೀಠದಲ್ಲಿ ಆಗಮೋಕ್ತವಾಗಿ ೩ ದಿನ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ದತ್ತಪೀಠ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸುಮಂತ್‌ನೆಮ್ಮಾರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಪೀಠದಲ್ಲಿ ತ್ರಿಕಾಲ ಪೂಜೆಗಾಗಿ ಅರ್ಚಕರ ನೇಮಕವಾಗಿದೆ. ಡಿ.೧೨ ರಂದು ಅನುಸೂಯದೇವಿ ಜಯಂತಿ ಇದೆ. ಅಂದು ವಿವಿಧ ಹೋಮ ಹವನ ಆಗಮೋಕ್ತವಾಗಿ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು. ಡಿ.೧೩ ರಂದು ಬೆಳಗ್ಗೆ ರುದ್ರಹೋಮ, ಕಲಾಹೋಮ ನಡೆಯುತ್ತವೆ. ಡಿ.೧೪ ರಂದು ದತ್ತಾತ್ರೇಯ ಮೂಲಮಂತ್ರ ಯಾಗ, ತಂತ್ರಿಗಳಿಂದ ಆಗಮೋಕ್ತವಾಗಿ ಪೂಜೆ ನಡೆಯಲಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಪ್ರದೀಪ್‌ಭಟ್ ಕಮ್ಮರಡಿ ಅವರ ನೇತೃತ್ವದಲ್ಲಿ ನಡೆಯಲಿವೆ ಎಂದು ಮಾಹಿತಿ ನೀಡಿದರು. ದತ್ತಪೀಠಕ್ಕೆ ಈ ಬಾರಿ ೧೫ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಪ್ರಸಾದವಾಗಿ ಲಾಡು, ಮಧ್ಯಾಹ್ನದ ಬೋಜನದ ವ್ಯವಸ್ಥೆ ಇದೆ. ಮಳೆ ಬಂದರೆ ರಕ್ಷಣೆಗೆ ವ್ಯವಸ್ಥೆ ಮಾಡಿದ್ದೇವೆ. ಪಾರ್ಕಿಂಗ್, ಕುಡಿವನೀರು, ಶೌಚಾಲಯ ಮತ್ತಿತರೆ ಮೂಲಭೂತಸೌಕರ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ ಎಂದರು.…

Read More

ಚಿಕ್ಕಮಗಳೂರು: ವೈದ್ಯನಾಗಿದ್ದು ಪತ್ನಿಗೆ ಮಾನಸಿಕ ಕಿರುಕುಳ ನೀಡಿ ವರ್ಷಗಟ್ಟಲೆ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದು, ಅಸ್ವಸ್ಥ ಮಹಿಳೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವೈದ್ಯ ಪತಿಯ ವಿರುದ್ಧ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ವೃತ್ತಿಯಲ್ಲಿ ವೈದ್ಯನಾಗಿದ್ದರು ಪತ್ನಿಯನ್ನು ಮಾನವೀಯತೆ ಮರೆತು ಹೊರ ಪ್ರಪಂಚಕ್ಕೆ ಹೋಗದಂತೆ ಗೃಹಬಂಧನದಲ್ಲಿ ಇರಿಸಿ ತನ್ನ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡ ವೈದ್ಯ ರವಿಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ. ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ ತನ್ನ ಪತ್ನಿ ವಿನುತಾರಾಣಿಗೆ ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಹುಚ್ಚಿ ಎಂದು ಬಿಂಬಿಸಿ ಮಾನಸಿಕ ಜೊತೆಯಲ್ಲಿ ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯ ಮಗನಿಗೂ ಕೂಡ ತಾಯಿಯ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ…

Read More

ಚಿಕ್ಕಮಗಳೂರು: ಸರ್ಕಾರಿ ನೌಕರರ ಸಂಘದ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ಅವರ ವಿರುದ್ಧ ಆರೋಪ ಮಾಡಿದ್ದ ಹಾಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಅವರನ್ನು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕಿ ಸಿಂಧು ಬಿ. ರೂಪೇಶ್ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ನೌಕರರ ಸಂಘದ ಚುನಾವಣೆ ಸಂದರ್ಭದಲ್ಲಿ ದೇವೇಂದ್ರ ಅವರು ಸುದ್ದಿಗೋಷ್ಠಿ ನಡೆಸಿ ವಿಧಾನಪರಿಷತ್ ಸದಸ್ಯ ಎಸ್‌.ಎಲ್. ಬೋಜೇಗೌಡ ಅವರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರು ಸರ್ಕಾರಕ್ಕೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ದೇವೇಂದ್ರ ಅವರನ್ನು ಅಮಾನತ್ತು ಮಾಡಲಾಗಿದೆ. ಅಮಾನತು ಆದೇಶ ಪತ್ರದಲ್ಲಿ ಬೋಜೇಗೌಡ ಅವರ ವಿರುದ್ಧ ದೇವೇಂದ್ರ ಅವರು ಮಾಡಿರುವ ಎಲ್ಲ ಆರೋಪಗಳನ್ನೂ ಪ್ರಸ್ತಾಪಿಸಲಾಗಿದೆ. ವಿಧಾನ ಪರಿಷತ್ ಸದಸ್ಯರು ಸರ್ಕಾರಿ ನೌಕರರಿಗೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ಚುನಾವಣೆಯಲ್ಲಿ ಹಣ ಹಾಗೂ ಬೆಳ್ಳಿಯ ಬಟ್ಟಲುಗಳನ್ನು ಮತದಾರರಿಗೆ ಆಮಿಷ…

Read More

ಚಿಕ್ಕಮಗಳೂರು:  ಪ್ರತಿ ವರ್ಷದಂತೆ ಈ ಬಾರಿಯೂ ಮೂಡಿಗೆರೆ ಪಟ್ಟಣದಲ್ಲಿ ಜ.೧ ರಂದು ಮೂರನೇ ವರ್ಷದ ಭೀಮ್ ಕೊರೆಂಗಾವ್ ವಿಜಯೋತ್ಸವ ಆಚರಿಸಲಾಗುವುದು ಎಂದು ಭೀಮ್ ಕೊರೆಗಾವ್ ಆಚರಣಾ ಸಂಘ ತಿಳಿಸಿದೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಸುಂದ್ರೇಶ್ ಕನ್ನಾಪುರ ಭೀಮ ಕೊರೆಂಗಾವ್ ವಿಜಯೋತ್ಸವ ಯಶಸ್ವಿಗೆ ಪ್ರತಿ ಹಳ್ಳಿಯಲ್ಲಿ ಪ್ರಚಾರಾಂದೋಲನ ನಡೆಸುತ್ತಿದ್ದೇವೆ. ಜಿಲ್ಲೆಯ ಪ್ರತಿ ತಾಲೂಕಿನಿಂದಲೂ ದಲಿತಪರ ಸಂಘಟನೆಯ ಮುಖಂಡರು, ಕಾರ್ಯಕರ್ತರು, ಅಲ್ಪಸಂಖ್ಯಾತರು, ಆದಿವಾಸಿ ಬುಡಕಟ್ಟು ಸಂಘಟನೆಗಳು, ಕನ್ನಡಪರ ಸಂಘಟನೆಗಳು, ವಿವಿಧ ಮಹಿಳಾ ಸಂಘಟನೆಗಳ ಸುಮಾರು ೫ ಸಾವಿರಕ್ಕೂ ಹೆಚ್ಚುಮಂದಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ಕಾರ್ಯಕ್ರಮದ ಯಶಸ್ವಿಗೆ ಪೂರ್ವ ಸಿದ್ಧತೆಗಳು ಭರದಿಂದ ನಡೆದಿವೆ. ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮಧ್ಯಾಹ್ನ ೨ ಗಂಟೆಗೆ ಮೆರವಣಿಗೆ ಆಯೋಜಿಸಿದ್ದು, ನಾಸಿಕ್‌ಡೋಲ್, ಗೊಂಬೆ ಕುಣಿತ, ಮಲೆನಾಡು ವಾದ್ಯ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಸಾಗಲಿದೆ. ನಂತರ ಮೂಡಿಗೆರೆ ಲಯನ್ಸ್ ವೃತ್ತದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಶಾಸಕರಾದ ನಯನಾ ಮೋಟಮ್ಮ…

Read More

ಚಿಕ್ಕಮಗಳೂರು: ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಅಹಿಂದ ಸಮುದಾಯದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ ಡಿ.೧೦ ರಿಂದ ೧೬ ರವರೆಗೆ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ-೨ ಹಮ್ಮಿಕೊಳ್ಳಲಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಅಂಗಡಿ ಚಂದ್ರು ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮದು ಅಹಿಂದ ಸರಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಹಿಂದ ಸಮುದಾಯದ ಜ್ವಲಂತ ಸಮಸ್ಯೆಗಳಿಗೆ ಶಾಸ್ವತ ಪರಿಹಾರ ನೀಡುತ್ತಿಲ್ಲ. ನೆಪಮಾತ್ರಕ್ಕೆ ಮೌಖಿಕ ಹೇಳಿಕೆ ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿಗಳ ಒಳಮೀಸಲು ಕೂಡಲೇ ಜಾರಿಮಾಡಬೇಕು, ಕಾಂತರಾಜ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಜಾರಿ ಮಾಡಬೇಕು. ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಬಾರದು ಎಂದು ಸದನದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಎಸಿಎಸ್ಟಿ ಟಿಎಸ್‌ಪಿ ಎಸ್‌ಸಿಪಿ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು, ಈ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ…

Read More