Author: chikkamagalur express

ಚಿಕ್ಕಮಗಳೂರು:  ತನ್ನಂತೆ ಇತರರನ್ನು ಭಾವಿಸಿ ಸಮಾಜದಲ್ಲಿ ಶಾಂತಿಯುತ ಸಹಬಾಳ್ವೆಯ ಜೀವನ ನಡೆಸುವುದು ನಮ್ಮೆಲ್ಲರ ಕರ್ತವ್ಯ. ಪ್ರತಿಯೊಬ್ಬರು ಕಾನೂನು ತಿಳಿದು ಪಾಲಿಸಿದಲ್ಲಿ ಮಾನವ ಹಕ್ಕುಗಳ ರಕ್ಷಣೆ ಸಾಧ್ಯ ಎಂದು ಪ್ರಧಾನ ಕೌಟುಂಬಿಕ ನ್ಯಾಯಾಧೀಶರು ಮತ್ತು ಪ್ರಭಾರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪ್ರಕಾಶ್ ವಿ. ಹೇಳಿದರು. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ(ರಿ), ಜಿಲ್ಲಾ ಮಾನವ ಹಕ್ಕುಗಳ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚಿಕ್ಕಮಗಳೂರು ಇವರ ವತಿಯಿಂದ ಇಂದು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವ ಹಕ್ಕುಗಳ ಪರಿಧಿ ವ್ಯಾಪಕ ಸ್ವರೂಪದ್ದು ಅದು ನಾಗರಿಕ, ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಹಕ್ಕುಗಳನ್ನು ಒಳಗೊಂಡಿದೆ. ಭಾರತದ ಸಂವಿಧಾನವು ಪ್ರತಿ ಪ್ರಜೆಗೂ ಸಮಾನತೆಯ ಹಕ್ಕು, ಸಮಾನ ಕಾನೂನು ರಕ್ಷಣೆ, ಶೋಷಣೆ ರಹಿತ…

Read More

ಚಿಕ್ಕಮಗಳೂರು:  ದತ್ತಪೀಠವನ್ನು ಸಂಪೂರ್ಣ ಹಿಂದೂಗಳಿಗೆ ಬಿಟ್ಟು ಕೊಡಬೇಕು ಎಂಬುದು ನಮ್ಮ ಎರಡನೆ ಹಂತದ ಹೋರಾಟದ ಉದ್ದೇಶವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಪೀಠ ಮುಕ್ತಿಯ ಹೋರಾಟಕ್ಕೆ ೨೫ ವರ್ಷ ಕಳೆದಿದೆ. ಹೋರಾಟದ ಫಲವಾಗಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ, ತ್ರಿಕಾಲ ಪೂಜೆ ನಡೆಯುತ್ತಿದೆ. ದತ್ತಪೀಠವನ್ನು ಸಂಪೂರ್ಣ ಹಿಂದೂಗಳಿಗೆ ಬಿಟ್ಟುಕೊಡಬೇಕು ಎಂಬುದು ನಮ್ಮ ಮುಂದಿನ ಹೋರಾಟದ ಉದ್ದೇಶವಾಗಿದೆ ಎಂದರು. ಇಲ್ಲಿನ ಜಿಲ್ಲಾಧಿಕಾರಿಗಳು ಸಂಘಟನೆ ಕೋರಿರುವ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ದತ್ತಪೀಠದಲ್ಲಿ ಇರವ ಔದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ, ದತ್ತಪೀಠದಿಂದ ಮುಜಾವರ್ ಅವರನ್ನು ಹೊರಹಾಕಬೇಕು. ದತ್ತ ಜಯಂತಿಗೆ ಬರುವ ಭಕ್ತರಿಗೆ ಜಿಲ್ಲಾಡಳಿತ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು. ದತ್ತಜಯಂತಿ ಸಂದರ್ಭದಲ್ಲಿ ದತ್ತಪೀಠದಲ್ಲಿ ಮೂರು ದಿನಗಳ ಕಾಲ ಹೋಮಹವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಯನ್ನು ಕೋರಲಾಗಿತ್ತು. ಆದರೆ, ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇವೆ ಎಂದು…

Read More

ಚಿಕ್ಕಮಗಳೂರು: : ಒಬ್ಬ ರಾಜಕಾರಣಿ ಶಿಸ್ತು, ಸಂಯಮ, ಸಭ್ಯತೆಯನ್ನು ಹೇಗೆ ಇರಬೇಕೆಂಬುದನ್ನು ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಮೈಗೂಡಿಸಿಕೊಂಡು ಒಕ್ಕಲಿಗ ಸಮುದಾಯಕ್ಕೆ ಮೆರಗು ನೀಡಿದ ಹಿರಿಯ ಚೇತನ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಹೇಳಿದರು. ಅವರು ಇಂದು ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಎಸ್.ಎಂ ಕೃಷ್ಣ ರವರ ಭಾವಚಿತ್ರಕ್ಕೆ ಪುಷ್ವನಮನ ಸಲ್ಲಿಸಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿ, ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗಲೂ ಸಾರ್ವಜನಿಕರೊಂದಿಗೆ ನಯ ವಿನಯದಿಂದ ಸಮಸ್ಯೆಗೆ ಸ್ಪಂದಿಸುತ್ತಿದ್ದ ಅವರು ಈಗಿನ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಐಟಿಬಿಟಿಯನ್ನು ಸ್ಥಾಪಿಸುವ ಮೂಲಕ ಬೆಂಗಳೂರನ್ನು ವಿಶ್ವದಲ್ಲೇ ಗುರ್ತಿಸುವಂತೆ ಮಾಡಿದ ಕೀರ್ತಿ ಎಸ್.ಎಂ ಕೃಷ್ಣ ಅವರಿಗೆ ಸಲ್ಲುತ್ತದೆ ಎಂದರು. ರಾಜಧಾನಿ ಬೆಂಗಳೂರಿಗೆ ಹೆಚ್ಚು ಆದಾಯ ತರುವ ನಿಟ್ಟಿನಲ್ಲಿ ಸೇವೆ ಸಲ್ಲಿಸಿದ ಅವರು, ಸಂಘ ಸದೃಢವಾಗಿದ್ದರೆ, ಮನೆ ಆನಂದದಿಂದ ಇರಬೇಕಾದರೆ ಇವೆಲ್ಲವಕ್ಕೂ ಆದಾಯ ಬಹುಮುಖ್ಯ ಎಂಬ ಪರಿಕಲ್ಪನೆಯನ್ನು ಹೊಂದಿದ್ದ ಅವರು ಐಟಿಬಿಟಿ ಸ್ಥಾಪನೆಗೆ ಮುಂದಾಗಿದ್ದರು ಎಂದು…

Read More

ಚಿಕ್ಕಮಗಳೂರು: ಗ್ರಾಮೀಣ ಪ್ರದೇಶದಿಂದ ಬಂದ ತನ್ನನ್ನು ಗುರುತಿಸಿ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಖುಷಿ ತಂದಿದೆ ಎಂದು ಸಮ್ಮೇಳನ ಸವಾಧ್ಯಕ್ಷ ಗೋಡೇದ ಹಳ್ಳಿ ರುದ್ರಪ್ಪ ಚನ್ನಬಸಪ್ಪ (ಗೊ.ರು.ಚ) ಹೇಳಿದರು. ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ತಿಂಗಳ ಅತಿಥಿ ಸಂವಾದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರ ಬದುಕು, ಸಂಸ್ಕೃತಿ ಕಲೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ೧೯೬೭ರಲ್ಲಿ ಮೊಟ್ಟ ಮೊದಲ ಬಾರಿಗೆ ಜಾನ ಪದ ಸಾಹಿತ್ಯ ಸಮ್ಮೇಳನ ನಡೆಸಿದ್ದು, ರಾಜ್ಯಾದ್ಯಂತ ಇರುವ ಜಾನಪದ ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಹೊತ್ತಿನಲ್ಲಿ ಹೊರತಂದ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಗ್ರಂಥಕ್ಕೆ ಜಾನಪದ ತಜ್ಞರು ಲೇಖನಗಳನ್ನು ನೀಡಿದ್ದಾರೆ. ಜಾನಪದ ಅಧ್ಯ ಯನ ಆಕಾರ ಗ್ರಂಥವಾಗಿದೆ ಎಂದು ಅಭಿಪ್ರಾಯಿಸಿದರು. ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಸಾಹಿತಿಗಳು, ಸಾಹಿತ್ಯ ಪರಿಚಾರಕರ ಸಂಪರ್ಕ ಬೆಳೆದು ಸಾಹಿತ್ಯ ಅಂಗಳದಲ್ಲಿ ಓಡಾಡಿದ್ದೇನೆ. ವಿದ್ವಾಂಸರು, ಶ್ರೇಷ್ಠರ ಸಂಪರ್ಕದಿಂದ ಜಾನಪದ ಕ್ಷೇತ್ರದಲ್ಲಿ ಒಂದಿಷ್ಟ್ರು ಸೇವೆಯನ್ನು ಸಲ್ಲಿಸಿದ್ದೇನೆ.…

Read More

ಚಿಕ್ಕಮಗಳೂರು: ನಗರದ ಜಿಲ್ಲಾ ಪದವೀಧರ ಪತ್ತಿನ ಸಹಕಾರ ಸಂಘದಲ್ಲಿ ಕಾನೂನು ಗಾಳಿಗೆ ತೂರಿ ಭ್ರಷ್ಟಾಚಾರ ಹಾಗೂ ಅವ್ಯವಹಾರ ನಡೆದಿದೆ ಎಂದು ಈ ಕುರಿತು ತನಿಖೆ ನಡೆಸುವಂತೆ ಸಂಘದ ನಿರ್ದೇಶಕ ಬಿ.ಟಿ.ಗೋಪಾಲಗೌಡ ಮಾಡಿರುವ ಆರೋಪ ನಿರಾಧಾರ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಸ್ಪಷ್ಟಪಡಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಸಂಘದಲ್ಲಿ ಯಾವುದೇ ತರಹದ ಅಕ್ರಮಗಳು, ಅವ್ಯವಹಾರಗಳು ನಡೆದಿಲ್ಲ. ಸಂಘವು ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದುತ್ತಿರುವುದನ್ನು ಸಹಿಸದೆ ಸದಸ್ಯರು ಹಾಗೂ ಖಾತೆದಾರರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಪ್ರಯತ್ನ ಎಂದು ಆರೋಪಿಸಿದರು. ಸಂಘವು ಸ್ವಂತ ಕಟ್ಟಡವನ್ನು ೨೦೧೯ ರ ಸೆ.೨೩ ರಂದು ಯೋಜನಾ ನಿರ್ದೇಶಕರು ಇ-ಪ್ರೊಕ್ಯೂರ್‌ಮೆಂಟ್ ಸೆಲ್, ಬೆಂಗಳೂರು ಇವರಿಗೆ ಉದ್ದೇಶಿತ ಕಟ್ಟಡದ ಇ-ಟೆಂಡರ್‌ನ್ನು ಪ್ರಚಾರಪಡಿಸುವ ಮೂಲಕ ಸ್ಥಳೀಯ ಪತ್ರಿಕೆಯೊಂದರಲ್ಲಿ ೨೧.೧೧.೨೦೧೯ ರಲ್ಲಿ ಪ್ರಕಟಣೆ ಮಾಡಲಾಗಿದ್ದು, ಯಾರೂ ಸಹ ಬಿಡ್ ಮಾಡದೇ ಇರುವುದರಿಂದ ಕಟ್ಟಡ ಸಮಿತಿಯಲ್ಲಿ ತಾವೂ ಸೇರಿದಂತೆ ವೆಂಕಟೇಶ್ ಪೈ, ಎಸ್.ವಿ ಬಸವರಾಜಪ್ಪ, ಡಾ. ಡಿ.ಎಲ್.ವಿಜಯ್‌ಕುಮಾರ್ ಮುಂತಾದವರು ಆಡಳಿತ ಮಂಡಳಿಯಲ್ಲಿ ಚರ್ಚಿಸಿ…

Read More

ಚಿಕ್ಕಮಗಳೂರು: ಶ್ರೀಗಂಧ ಬೆಳೆಗಾರರಿಗೆ ಅರಣ್ಯ ಇಲಾಖೆ ವಿನಾಕಾರಣ ತೊಂದರೆ ನೀಡುತ್ತಿದ್ದು ಇಂತಹ ರೈತ ವಿರೋಧಿ ನೀತಿ ಮುಂದುವರಿದಲ್ಲಿ ಅರಣ್ಯ ಇಲಾಖೆ ಮತ್ತು ಸಚಿವ ಈಶ್ವರ ಖಂಡ್ರೆ ಮನೆಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಎಚ್ಚರಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಸಂಘದ ಜಿಲ್ಲಾಧ್ಯಕ್ಷ ಡಾ. ಕೆ.ಸುಂದರಗೌಡ ಮಾತನಾಡಿ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ಚಂದ್ರಪ್ಪ ಎಂಬುವರು ಶ್ರೀಗಂಧ ಬೆಳೆದಿದ್ದಾರೆ. ಆ ಮರಗಳು ಕಟಾವಿಗೆ ಬಂದಿದ್ದು ಕಡಿಯಲು ಅರಣ್ಯ ಇಲಾಖೆ ಬಳಿ ಅನುಮತಿಗಾಗಿ ನಾಲ್ಕಾರು ಬಾರಿ ಕಚೇರಿ ಅಲೆದಿದ್ದಾರೆ. ಆದರೆ ಅರಣ್ಯ ಇಲಾಖೆ ಅನೇಕ ಸಬೂಬು ಹೇಳಿ ಅನಮತಿ ನೀರಾಕರಿಸಿದೆ ಎಂದು ದೂರಿದರು. ಹೀಗಾಗಿ ಕಳ್ಳರ ಕಾಟದಿಂದ ಶ್ರೀಗಂಧದ ಮರಗಳನ್ನು ರಕ್ಷಿಸುವ ಉದ್ದೇಶದಿಂದ ರೈತ ಚಂದ್ರಪ್ಪ ಶ್ರೀಗಂಧ ಮರಗಳನ್ನು ಕಟಾವು ಮಾಡಿಸಿ ಅರಣ್ಯ ಇಲಾಖೆ ಅನುಮತಿ ಸಿಗುವವರೆಗೆ ಮನೆಯಲ್ಲಿ ಸಂಗ್ರಹಿಸಿಡೋಣ ಎಂಬ ಉದೇಶದಿಂದ ಮರ ಕಡಿಸಿದ್ದಾರೆ. ಈ ಮಾಹಿತಿ ತಿಳಿದ ಅರಣ್ಯ ಅಧಿಕಾರಿಗಳಾದ ಆರ್‌ಎಫ್‌ಒ…

Read More

ಚಿಕ್ಕಮಗಳೂರು:  ಚಿಕ್ಕಮಗಳೂರು: ವಿಶ್ವಹಿಂದೂ ಪರಿಷತ್-ಬಜರಂಗದಳ ವತಿಯಿಂದ ಡಿಸೆಂಬರ್ ೧೨ ರಿಂದ ೧೪ ರ ವರೆಗೆ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಳಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಪೀಠದಲ್ಲಿ ಬೆಳಗ್ಗೆ ೭ ರಿಂದ ಸಂಜೆ ೬ ರವರೆಗೆ ದತ್ತಪಾದುಕೆಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಇಲಾಖೆಗಳನ್ನು ಒಳಗೊಂಡಂತೆ ಸುಸಜ್ಜಿತವಾಗಿ ಕುಡಿಯುವ ನೀರು, ಮೊಬೈಲ್ ಶೌಚಾಲಯ, ಸ್ವಚ್ಛತೆ, ವೈದ್ಯಕೀಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳನ್ನು ದತ್ತಪೀಠದ ಮಾರ್ಗ ಮತ್ತು ಪೀಠದ ಪರಿಸರದಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಅಧಿಕ ಮಳೆಯಿಂದಾಗಿ ರಸ್ತೆ ಹಾನಿಯಾಗಿದೆ. ನಿರಂತರ ಮಳೆ ಕಾರಣ ಪೂರ್ಣ ಪ್ರಮಾಣದಲ್ಲಿ ದುರಸ್ಥಿ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಲಿ ಒಮ್ಮುಖ ಸಂಚಾರ ಮಾಧ್ಯ ಸಾಧ್ಯವಾಗಿರುವುದರಿಂದ ಭಕ್ತಾಧಿಗಳು ಉದ್ದ ಛಾಸಿ ಬಸ್‌ಗಳು ಇನ್ನಿತರೆ ವಾಹನಗಳಲ್ಲಿ ಬರಬಾರದು ಎಂದು ಸೂಚಿಸಲಾಗಿದೆ. ಇದರ ನಡುವೆಯೂ ಯಾವುದಾದರೂ ವಾಹನ ಬಂದರೆ ಕೈಮರದ…

Read More

ಚಿಕ್ಕಮಗಳೂರು: ಆಲ್ದೂರು ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕ ೩ ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಇಂದು ಜಿಲ್ಲಾಡಳಿತಕ್ಕೆ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮನವಿ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು. ಅವರು ಇಂದು ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಲ್ದೂರು ಒಕ್ಕಲಿಗರ ಸಂಘಕ್ಕೆ ಜಾಗ ನಿಗಧಿಪಡಿಸಿದ್ದು, ಸದರಿ ಜಾಗದಲ್ಲಿ ಕಳೆದ ೨೦ ವರ್ಷಗಳ ಹಿಂದೆ ಸ್ಮಶಾನಕ್ಕೆ ಯೋಗ್ಯವಲ್ಲ ಎಂದು ಆಗಿನ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‌ರವರು ವರದಿ ನೀಡಿದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಒಕ್ಕಲಿಗರ ಸಂಘಕ್ಕೆ ಮೀಸಲಿಡಬೇಕೆಂದು ನಿರ್ಣಯ ಮಾಡಿದ್ದರು. ಸ್ಥಳೀಯ ಒಕ್ಕಲಿಗರ ಸಂಘದವರು ೧೦ ಲಕ್ಷ ರೂ ಖರ್ಚುಮಾಡಿ ಈ ಭೂಮಿಯನ್ನು ಸುಂದರ ತಾಣವನ್ನಾಗಿ ಮಾಡಿದ್ದರು. ಆದರೆ ಅದು ದಾಖಲೆಯಲ್ಲಿ ಸ್ಮಶಾನ ಎಂದು ನಮೂದಾಗಿದ್ದರಿಂದ ಇದರ ಆಧಾರದಲ್ಲಿ ಕೆಲವು ಸಂಘಟನೆಗಳು ಪ್ರಚೋಧನೆ ನೀಡಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆಂದು ದೂರಿದರು. ಈ ಸಂಬಂಧ ಪ್ರಕರಣ ನ್ಯಾಯಾಲಯದಲ್ಲಿದ್ದು ವಿವಾದ ಇರುವುದರಿಂದ ಅಂತಹ ಜಾಗದಲ್ಲಿ ಏಕಾಏಕಿ ಪೊಲೀಸರ ಮಧ್ಯಸ್ಥಿಕೆಯಿಂದ ಶವ ಸಂಸ್ಕಾರಕ್ಕೆ…

Read More